ಯುದ್ಧಕ್ಕಿಂತ ಮೊದಲೇ ಶಸ್ತ್ರತ್ಯಾಗ? ಉ.ಪ್ರ ಪ್ಯಾನೆಲ್​​ ಲಿಸ್ಟ್​​ನಿಂದ ಪ್ರಿಯಾಂಕ ಗಾಂಧಿ ಕೈಬಿಟ್ಟ ಕಾಂಗ್ರೆಸ್

ಯುದ್ಧಕ್ಕಿಂತ ಮೊದಲೇ ಶಸ್ತ್ರತ್ಯಾಗ? ಉ.ಪ್ರ ಪ್ಯಾನೆಲ್​​ ಲಿಸ್ಟ್​​ನಿಂದ ಪ್ರಿಯಾಂಕ ಗಾಂಧಿ ಕೈಬಿಟ್ಟ ಕಾಂಗ್ರೆಸ್

ಲಕ್ನೋ: 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿಗಳು ಕಾಂಗ್ರೆಸ್​​ ವಲಯದಿಂದ ಕೇಳಿ ಬರುತ್ತ್ತಿದೆ. ಅಲ್ಲದೇ ಆಡಳಿತರೂಢ ಬಿಜೆಪಿ ಸರ್ಕಾರವನ್ನು ಈ ಬಾರಿ ಎದುರಿಸಲು ಪಣ ತೊಟ್ಟಿರುವ ಕಾಂಗ್ರೆಸ್​​, ಮೈತ್ರಿ ರಾಜಕಾರಣಕ್ಕೂ ಮುಂದಾಗಿದೆ. ಆದರೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್​​ ಶಸ್ತ್ರತ್ಯಾಗ ಮಾಡಿದೆಯಾ? ಎಂಬ ಅನುಮಾನ ಎದುರಾಗಿದ್ದು, ಉತ್ತರ ಪ್ರದೇಶ ಚುನಾವನಾ ಪ್ಯಾನಲ್​​ ಲಿಸ್ಟ್​ನಿಂದಲೇ ಪ್ರಿಯಾಂಕ ಗಾಂಧಿ ಅವರನ್ನು ಕೈ ಬಿಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳನ್ನು ಹುಡುಕುವುದು ಪಕ್ಷದ ನಾಯಕರಿಗೆ ಸವಾಲಿನ ಕೆಲಸವಾಗಿದೆ ಎಂದು ಹಿರಿಯ ಮುಖಂರೊಬ್ಬರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 7 ಸ್ಥಾನಗಳಲ್ಲಿ ಮಾತ್ರ ಗೆಲುವು ಪಡೆದಿತ್ತು. ಈ ಹಿನ್ನೆಲೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿರೋ ಕಾಂಗ್ರೆಸ್​, ಕೆಲವು ಕ್ಷೇತ್ರಗಳಲ್ಲಿ ಮೈತ್ರಿಗೆ ಮುಂದಾಗಿದೆ.

Source: newsfirstlive.com Source link