ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದ ಜಯ ಕರ್ನಾಟಕ ಸಂಘಟನೆ

ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದ ಜಯ ಕರ್ನಾಟಕ ಸಂಘಟನೆ

ಬೆಂಗಳೂರು: ಅನಾಥ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಜಯ ಕರ್ನಾಟಕ ಸಂಘಟನೆ ಸಹಾಯ ಹಸ್ತ ಚಾಚಿದೆ. ಸಂಘಟನೆಯ ಸಂಸ್ಥಾಪನಾಧ್ಯಕ್ಷ ದಿವಂಗತ ಮುತ್ತಪ್ಪ ರೈ ಅವರ ಸವಿ ನೆನೆಪಿನ ಅಂಗವಾಗಿ, ಮಲ್ಲೇಶ್ವರದ ಜಯಕರ್ನಾಟಕ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾಥ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸಲಾಯಿತು.

ಎಸ್ಎಸ್ಎಲ್​ಸಿ. ಪಿಯುಸಿ ಉತ್ತೀರ್ಣ ಆಗಿರುವ ವಿದ್ಯಾರ್ಥಿಗಳು ಹಾಗೂ ಕೋವಿಡ್ ನಿಂದ ಮೃತಪಟ್ಟಿರುವ ಪೊಷಕರ ಮಕ್ಕಳಿಗೆ ಸಹಾಯ ಮಾಡಿದ ಸಂಘಟನೆ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದೆ.

blank

ಪ್ರತಿ ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರದಂತೆ 250ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಈ ವೇಳೆ ನ್ಯೂಸ್​ಫಸ್ಟ್​ನೊಂದಿಗೆ ಮಾತನಾಡಿದ ಮತ್ತಪ್ಪ ರೈ ಮಗ ರಿಕ್ಕಿ ರೈ ನಮ್ಮ ತಂದೆ ಮಾಡಿಕೊಂಡು ಬಂದ ಸಾಮಾಜಿಕ ಕಾರ್ಯಗಳನ್ನು ನಾನು ಮುಂದುವರೆಸುತ್ತಿದ್ದೇನೆ, ಬಡವರ ಕಷ್ಟಗಳನ್ನು ನೋಡಿ ನಾನು ಅವರಿಗೆ ಸಂಘಟನೆಯ ಮೂಲಕ ಸಹಾಯ ಮಾಡುತ್ತಿದ್ದೇನೆ ಎಂದರು.

Source: newsfirstlive.com Source link