ಈಶ್ವರಪ್ಪ ವರ್ತನೆಯಿಂದ ಬಿಜೆಪಿಗಂತೂ ಒಳ್ಳೆಯದಾಗಲ್ಲ: ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ವರ್ತನೆಯಿಂದ ಬಿಜೆಪಿಗಂತೂ ಒಳ್ಳೆಯದಾಗಲ್ಲ. ಸಾರ್ವಜನಿಕ ಜೀವನದಲ್ಲಿ ಇರುವಂತಹವರು ನೀವು ಈ ರೀತಿ ಮಾತನಾಡಿದರೆ ನಿಮಗೆ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಚಾಟಿ ಬೀಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಈಶ್ವರಪ್ಪ ರಾಜಕಾರಣದಲ್ಲಿ ಹಿರಿಯರಿದ್ದಾರೆ. ಹಲವು ಬಾರಿ ಸಚಿವರಾಗಿದ್ದಾರೆ. ಅವರ ಹಾಗೆ ನನಗೂ ಮಾತನಾಡಲು ಬರುತ್ತದೆ. ಆದರೆ ನಾನು ಹಾಗೆ ಮಾತನಾಡುವುದಿಲ್ಲ. ಪದೇ ಪದೇ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಕೋಮು ದಳ್ಳುರಿ ಸೃಷ್ಟಿಸುತ್ತಿರುವ ಹಾಗೂ ಕಾಂಗ್ರೆಸ್ ವಿರುದ್ಧ ಅವಾಚ್ಯ ಪದ ಬಳಸಿ ನಿಂದಿಸಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ರಾಜ್ಯಪಾಲರು ತಕ್ಷಣ ವಜಾಗೊಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.

ರಾಜ್ಯಪಾಲರು ಬಿಜೆಪಿಯ ಕೈಗೊಂಬೆ ಅಲ್ಲ ಎಂದಾದಲ್ಲಿ, ತಕ್ಷಣ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಿ. ಈಶ್ವರಪ್ಪ ಅವರಿಗೆ ವಯಸ್ಸಾಗಿದೆ. ಮುಂದೆ ಶಾಸಕ ಸ್ಥಾನಕ್ಕೆ ಟಿಕೆಟ್ ಸಿಗುವುದಿಲ್ಲ ಎಂದು ಹತಾಷರಾಗಿ ಈ ರೀತಿ ಮಾತನಾಡುತ್ತಿರಬಹುದು. ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದರು. ಅವರನ್ನ ಕೆಳಗೆ ಇಳಿಸಿದರೇ ತಾವೇ ಸಿಎಂ ಆಗಬಹುದು ಎಂದುಕೊಂಡರು. ಆದರೆ ಅವರನ್ನು ಕೆಳಗೆ ಇಳಿಸುವಲ್ಲಿ ಸಫಲರಾದ ಈಶ್ವರಪ್ಪ, ಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ ಎಂದರು. ಇದನ್ನೂ ಓದಿ: ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪು: ಈಶ್ವರಪ್ಪ

ಬಿಜೆಪಿ, ಆರ್‍ಎಸ್‍ಎಸ್ ಹಿನ್ನೆಲೆಯುಳ್ಳ ಪಕ್ಷ ನಮ್ಮದು. ಸಂಸ್ಕೃತಿ, ಸಂಸ್ಕಾರ ಇರುವ ಪಕ್ಷ ಅಂತಾರೆ. ಇದೇನಾ ನಿಮ್ಮ ಸಂಸ್ಕೃತಿ, ಸಂಸ್ಕಾರ. ಇನ್ನಾದರೂ ಆರ್‍ಎಸ್‍ಎಸ್ ಮುಖಂಡರು ಈಶ್ವರಪ್ಪ ಅವರಿಗೆ ಬುದ್ಧಿ ಹೇಳಲಿ ಎಂದು ಹೇಳಿದರು. ಇದನ್ನೂ ಓದಿ: ‘ಬೀಪ್’ ಹಾಕುವ ಪದ ಬಳಸಿದ ಮಂತ್ರಿ ಈಶ್ವರಪ್ಪ- ಕಾಂಗ್ರೆಸ್‍ನವರು ಕುಡುಕ ….. ಮಕ್ಕಳು ಎಂದ ಸಚಿವ

Source: publictv.in Source link