ತಂಡದಲ್ಲಿ ಬದಲಾವಣೆ ಇಲ್ಲ ಎಂದ ಕೊಹ್ಲಿ -ಸರಣಿ ಪೂರ್ತಿ ಬೆಂಚ್​ ಕಾಯ್ತಾರಾ ಅಶ್ವಿನ್​?

ತಂಡದಲ್ಲಿ ಬದಲಾವಣೆ ಇಲ್ಲ ಎಂದ ಕೊಹ್ಲಿ -ಸರಣಿ ಪೂರ್ತಿ ಬೆಂಚ್​ ಕಾಯ್ತಾರಾ ಅಶ್ವಿನ್​?

ಕಳೆದ ಇಂಗ್ಲೆಂಡ್​​ ಸರಣಿಯಲ್ಲಿ ಆತ ಲೀಡಿಂಗ್​ ವಿಕೆಟ್​​ ಟೇಕರ್​​. ಆದರೆ ಪ್ರಸ್ತುತ ಇಂಗ್ಲೆಂಡ್​​​ ಸರಣಿಯಲ್ಲಿ ಆತ ಸ್ಥಾನಕ್ಕಾಗಿ ಪೈಪೋಟಿ ನಡೆಸೋ ಆತಂಕ ಎದುರಾಗಿದೆ. ಅಶ್ವಿನ್​ ಇಂಗ್ಲೆಂಡ್​ ವಿರುದ್ಧ ಮುಂದಿನ ನಾಲ್ಕು ಟೆಸ್ಟ್ ಪಂದ್ಯಗಳನ್ನ ಆಡ್ತಾರಾ..? ಅಥವಾ ಬೆಂಚ್ ಕಾಯ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಟೀಮ್ ಇಂಡಿಯಾ ಕಂಡ ಅತ್ಯದ್ಭುತ ಸ್ಪಿನ್ ಬೌಲರ್‌ಗಳಲ್ಲಿ ರವಿಚಂದ್ರನ್ ಅಶ್ವಿನ್ ಕೂಡ ಒಬ್ಬರು. ಇತ್ತೀಚಿನ ಹಲವು ಟೆಸ್ಟ್ ಸರಣಿಗಳಲ್ಲಿ ಭಾರತದ ಗೆಲುವಿನಲ್ಲಿ ಅಶ್ವಿನ್, ಪಾತ್ರ ದೊಡ್ಡದು. ಇತ್ತ ಅಶ್ವಿನ್​ ಫಾರ್ಮ್​ ಕೂಡ ಕಳೆದುಕೊಂಡಿಲ್ಲ. ಹಾಗೇ ಬ್ಯಾಟಿಂಗ್​​​ನಲ್ಲೂ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಆಪತ್ಭಾಂದವನಿಗೆ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೌದು.. ಅದಕ್ಕೆ ಕಾರಣ ಕೊಹ್ಲಿ ನೀಡಿದ ಹೇಳಿಕೆ..

blank

ಸದ್ಯ ಇಂಡೋ-ಇಂಗ್ಲೆಂಡ್​ ನಡುವಿನ​ ಮೊದಲ ಟೆಸ್ಟ್​ ಡ್ರಾನಲ್ಲಿ ಅಂತ್ಯಕಂಡಿದೆ. ಇದೀಗ ಉಭಯ ತಂಡಗಳು ಲಾರ್ಡ್ಸ್​​ ಪಂದ್ಯದತ್ತ ಚಿತ್ತ ನೆಟ್ಟಿವೆ. ವಿರಾಟ್​ ಕೊಹ್ಲಿ ಫೋರ್​ ಪ್ಲಸ್​ ಒನ್​ನಂತೆ, ತಂಡವನ್ನ ಕಣಕ್ಕಿಳಿಸಲಿದ್ದು, ಅದರಂತೆ ನಾಲ್ವರು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್​​​ನನ್ನ ತಂಡದಲ್ಲಿ ಆಡಿಸಲಾಗಿದೆ. ಇನ್ನು ಪಂದ್ಯದ ನಂತರ ತಂಡದ ಬಗ್ಗೆ ಮಾತಾಡಿರೋ ಕೊಹ್ಲಿ, ಮುಂದಿನ ಪಂದ್ಯಗಳಲ್ಲೂ ಇದೇ ತಂಡ ಮುಂದುವರಿಸುವುದಾಗಿ ಹೇಳಿದ್ದಾರೆ.

ಇಂಗ್ಲೆಂಡ್​ ಸರಣಿ ಪೂರ್ತಿ ಅಶ್ವಿನ್​ ಬೆಂಚ್​​ಗೆ ಸೀಮಿತ.?
ಸದ್ಯ ವಿರಾಟ್​ ಕೊಹ್ಲಿಯ ಈ ಮಾತು ಸಂಚಲನ ಸೃಷ್ಟಿಸಿದೆ. ಜೊತೆಗೆ ಅಶ್ವಿನ್​​ನ ಭವಿಷ್ಯಕ್ಕೆ ಕುತ್ತು ತಂದಿದ್ಯಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಹೌದು.. ಆಡುವ 11 ಬಳಗಕ್ಕೆ ಸ್ಟಾರ್‌ ಸ್ಪಿನ್ನರ್‌ ಅಶ್ವಿನ್​ರನ್ನ ಕರೆತರುವ ಯಾವುದೇ ಸುಳಿವನ್ನ ನೀಡದಿರುವುದೇ, ಅದಕ್ಕೆ ಕಾರಣ. ಇದು ಮುಂದಿನ ಪಂದ್ಯಕ್ಕೆ ಮಾತ್ರವಲ್ಲ, ಇಡೀ ಸರಣಿ ಪೂರ್ತಿ ಅಶ್ವಿನ್​ ಬೆಂಚ್​ ಕಾಯಬೇಕಾ ಅನ್ನೋ ಪ್ರಶ್ನೆಯನ್ನ ಹುಟ್ಟುಹಾಕಿದೆ. ಸದ್ಯ ತನ್ನ ಜಾಗದಲ್ಲಿ ಕಣಕ್ಕೆ ಇಳಿದು ಉತ್ತಮ ಪ್ರದರ್ಶನ ತೋರಿರುವ ಶಾರ್ದೂಲ್​ ಠಾಕೂರ್​​ ಜೊತೆ, ಅಶ್ವಿನ್​ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್​​​ನಲ್ಲಿ ನ್ಯೂಜಿಲೆಂಡ್‌ ಎದುರು ಅಶ್ವಿನ್ ಮತ್ತು ಜಡೇಜಾ ಇಬ್ಬರನ್ನೂ ಆಡಿಸಿದ್ದ ಭಾರತ ತಂಡಕ್ಕೆ ಹಿನ್ನಡೆ ತಂದೊಡ್ಡಿತ್ತು. ಹೀಗಾಗಿ ಕ್ಯಾಪ್ಟನ್‌ ಕೊಹ್ಲಿ ಹೆಚ್ಚುವರಿ ವೇಗಿಯನ್ನು ಆಡಿಸುವ ರಣತಂತ್ರಕ್ಕೆ ಹೆಚ್ಚಿನ ಒಲವು ಹೊಂದಿದ್ದಾರೆ. ಆದರೆ ಫೆಬ್ರವರಿ – ಮಾರ್ಚ್​​​ನಲ್ಲಿ ನಡೆದ ಇಂಡೋ – ಇಂಗ್ಲೆಂಡ್​ ಟೆಸ್ಟ್​ ಸರಣಿಯಲ್ಲಿ ರವಿಚಂದ್ರನ್​ ಅಶ್ವಿನ್,​ ಲೀಡಿಂಗ್ ವಿಕೆಟ್​ ಟೇಕರ್​ ಆಗಿದ್ರು. ಆದರೆ ಅವರನ್ನೇ ಬೆಂಚ್​ ಕಾಯಿಸಿರೋದು ಸರಿಯಿಲ್ಲ ಅನ್ನೋದು ಮಾಜಿ ಕ್ರಿಕೆಟಿಗರ ವಾದ.

Source: newsfirstlive.com Source link