ಶೇ.200 ದಂಡ.. ಶೇ.24 ಬಡ್ಡಿ; ಬೆಂಗಳೂರಿನ 80 ಸಾವಿರ ಆಸ್ತಿ ಮಾಲೀಕರಿಗೆ ಬಿಗ್​ಶಾಕ್ ಕೊಟ್ಟ BBMP

ಶೇ.200 ದಂಡ.. ಶೇ.24 ಬಡ್ಡಿ; ಬೆಂಗಳೂರಿನ 80 ಸಾವಿರ ಆಸ್ತಿ ಮಾಲೀಕರಿಗೆ ಬಿಗ್​ಶಾಕ್ ಕೊಟ್ಟ BBMP

ಬೆಂಗಳೂರು: ೆಂಗಳೂರು ಮಹಾನಗರ ಪಾಲಿಕೆಗೆ ಕೊರೊನಾ ನಿಭಾಯಿಸೋದ್ರ ಜೊತೆಗೆ ಇದೀಗ ಮತ್ತೊಂದು ತಲೆನೋವು ಶುರುವಾಗಿದೆ. 

2016ರಲ್ಲಿ ಬಿಬಿಎಂಪಿ ತೆರಿಗೆ ಜೋನ್ ಬದಲಾವಣೆ ಮಾಡಲಾಗಿತ್ತು. ಆಗ ಬಹುತೇಕ ಸಿ ಝೋನ್​ನಲ್ಲಿದ್ದ ಲಕ್ಷಾಂತರ ಆಸ್ತಿಗಳನ್ನ ಎ ಝೋನ್​ಗೆ ಕನ್ವರ್ಷನ್ ಮಾಡಲಾಗಿತ್ತು C ಇಂದ  A ಕೆಟಗರಿಗೆ ಬದಲಾಗ್ತಿದ್ದಂತೆ ತೆರಿಗೆ ಪ್ರಮಾಣ ಹೆಚ್ಚಳವಾಗಿತ್ತು. ಆದ್ರೆ ಈ ಬಗ್ಗೆ ಆಸ್ತಿ ಮಾಲೀಕರಿಗೆ ಯಾವುದೇ ಮಾಹಿತಿಯನ್ನ ಪಾಲಿಕೆ ನೀಡಿರಲಿಲ್ಲ, ಕಳೆದ ಐದು ವರ್ಷದಿಂದ ಹಳೆಯ ತೆರಿಗೆಯನ್ನೇ ಪಾಲಿಕೆ ಕಟ್ಟಿಸಿಕೊಂಡಿದ್ದು, ಇದೀಗ ಏಕಾಏಕಿ ನಿಮ್ಮ ಝೋನ್ ಬದಲಾಗಿದೆ, ನೀವು 2016 ರಿಂದ ಈವರೆಗಿನ ಹೆಚ್ಚುವರಿ ತೆರಿಗೆ ಕಟ್ಟಬೇಕು ಅಂತ ನೋಟಿಸ್ ಜಾರಿ ಮಾಡಿದೆ.

blank

ಶೇ. 200 ದಂಡ ಹಾಗೂ ಶೇ. 24 ವಾರ್ಷಿಕ ಬಡ್ಡಿ ಸಹಿತ ಕಟ್ಟುವಂತೆ ಬರೋಬ್ಬರಿ 80 ಸಾವಿರ ಆಸ್ತಿ ಮಾಲೀಕರಿಗೆ ನೊಟೀಸ್​ನ್ನ ಪಾಲಿಕೆ ಜಾರಿ ಮಾಡಿದೆ. ಇದೀಗ, ಬಿಬಿಎಂಪಿ ಕ್ರಮಕ್ಕೆ ಆಸ್ತಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಎಡವಟ್ಟಿನಿಂದ ಸಾವಿರಾರು ಮಂದಿ ಆಸ್ತಿ ಮಾಲೀಕರು ಕಂಗಾಲಾಗಿದ್ದಾರೆ. ಏಕಾಏಕಿ 200% ದಂಡ ಜೊತೆಗೆ 24% ವಾರ್ಷಿಕ ಬಡ್ಡಿ ಕಟ್ಟಿ ಅಂತಿರೋದು ಯಾವ ನ್ಯಾಯ.?ಪಾಲಿಕೆ ಮನಸೋ ಇಚ್ಛೇ ಕೆಲಸ ಮಾಡ್ತಿದೆ ಅಂತ ಆಕ್ರೋಶ ಹೊರಹಾಕಿದ್ದಾರೆ.

blank

Source: newsfirstlive.com Source link