ಸೆ.19ರಿಂದ IPL ಮತ್ತೆ ಶುರು; ಮುಂದಿನ ಆವೃತ್ತಿಗೆ ಹೊಸ ತಂಡಗಳ ಸೇರ್ಪಡೆಗೆ ಕಸರತ್ತು

ಸೆ.19ರಿಂದ IPL ಮತ್ತೆ ಶುರು; ಮುಂದಿನ ಆವೃತ್ತಿಗೆ ಹೊಸ ತಂಡಗಳ ಸೇರ್ಪಡೆಗೆ ಕಸರತ್ತು

ಕೊರೊನಾದಿಂದ ರದ್ದಾಗಿದ್ದ ಐಪಿಎಲ್,​​ ಸೆಪ್ಟೆಂಬರ್​​ 19ರಿಂದ ಯುಎಇನಲ್ಲಿ ಪ್ರಾರಂಭವಾಗುತ್ತೆ. ಇದರ ನಡುವೆಯೇ ಬಿಸಿಸಿಐ ದೆಹಲಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿ ನೂತನ ಫ್ರಾಂಚೈಸಿಗಳ ಸೇರ್ಪಡೆಗೆ ಸದ್ದಿಲ್ಲದೆ, ಸಿದ್ಧತೆ ನಡೆಸ್ತಿದೆ. ಆದರೆ ಇದು ಬಿಸಿಸಿಐಗೆ ದೊಡ್ಡ ಸವಾಲಾಗಿದೆ.

ಎರಡನೇ ಹಂತದ 14ನೇ ಆವೃತ್ತಿಯ ಐಪಿಎಲ್​​​ ಆರಂಭಕ್ಕೆ ಇರುವುದು ಕೆಲವು ದಿನಗಳಷ್ಟೆ. ಆದರೆ 15ನೇ ಆವೃತ್ತಿಯ ಐಪಿಎಲ್​​​​ ಆಕ್ಷನ್​​ ಮತ್ತು ನೂತನ ತಂಡಗಳ ಸೇರ್ಪಡೆಗೆ ಬಿಸಿಸಿಐ ತೆರೆಮರೆಯಲ್ಲಿ ಕಸರತ್ತು ನಡೆಸ್ತಿದೆ. ಆದರಿದು ಬಿಸಿಸಿಐಗೆ ಬಹುದೊಡ್ಡ ಸವಾಲುಗಳನ್ನ ಮುಂದಿಟ್ಟಿದೆ.

blank

ಮುಂದಿನ ಮೆಗಾ ಹರಾಜಿನಲ್ಲಿ ಹೊಸ ಫ್ರಾಂಚೈಸಿಗಳ ಸೇರ್ಪಡೆ ಕ್ರಿಕೆಟ್​​ ಫ್ಯಾನ್ಸ್​​ಗೆ ಸಂತಸದ ವಿಷಯವಾಗಿದೆ. ಆದರೆ ಬಿಸಿಸಿಐ ಪಾಲಿಗಿದು, ನೂರಾರು ಸವಾಲುಗಳ ಅಗ್ನಿಕೆಂಡ. ಸದ್ಯ ಡಿಸೆಂಬರ್​ ಅಥವಾ ಜನವರಿಯಲ್ಲಿ ಹರಾಜು ನಡೆಯೋ ಸಾಧ್ಯತೆ ಇದ್ದು, ಹೊಸ ತಂಡಗಳಿಗೆ ಆಟಗಾರರ ಖರೀದಿಗೆ ಯಾವ ರೀತಿ ಅವಕಾಶ ನೀಡಬೇಕು ಎಂಬ ಚಿಂತೆ ಹುಟ್ಟಿಕೊಂಡಿದೆ.

ರೈಟ್​ ಟು ಮ್ಯಾಚ್ ಆಯ್ಕೆ ಇರುತ್ತಾ.. ಇರಲ್ವಾ..?
ಸದ್ಯ ಹೊಸ ಫ್ರಾಂಚೈಸಿಗಳ ಸೇರ್ಪಡೆ ಹಿನ್ನೆಲೆ ಹರಾಜು ಪ್ರಕ್ರಿಯೆಯ ನಿಯಮಗಳಲ್ಲಿ ಕೊಂಚ ಬದಲಾವಣೆ ಸಾಧ್ಯತೆ ಇದೆ. ಅದರಲ್ಲಿ ಪ್ರಮುಖವಾದದ್ದು ಅಂದರೆ ರೈಟ್​​ ಟು ಮ್ಯಾಚ್​​. ಹೌದು.! ಹರಾಜು ವೇಳೆ ಕೈ ಬಿಟ್ಟವರನ್ನ ಖರೀದಿಸಲು, ಮತ್ತೆ ಅದೇ ತಂಡಕ್ಕೆ ಮೊದಲ ಚಾನ್ಸ್​​​ ನೀಡಲಾಗುತ್ತೆ. ಒಂದ್ವೇಳೆ ಆ ತಂಡ ಖರೀದಿಗೆ ಒಲವು ತೋರದಿದ್ರೆ, ಉಳಿದ ಫ್ರಾಂಚೈಸಿಗಳು ಕೊಂಡುಕೊಳ್ಳಲು ಬರುತ್ತಿದ್ವು. ಆದರೀಗ ಈ ನಿಯಮಕ್ಕೆ ತಾತ್ಕಾಲಿಕ ಬ್ರೇಕ್​​ ಹಾಕಲು ನಿರ್ಧರಿಸಿದೆ ಎನ್ನಲಾಗಿದೆ.

blank

ಯಾಕೆಂದರೆ ಕೈ ಬಿಟ್ಟ ಆಟಗಾರರನ್ನ ಮತ್ತೆ ಅದೇ ತಂಡಗಳು ಖರೀದಿಸಿದರೆ, ಹೊಸ ತಂಡಗಳಿಗೆ ಪ್ರಮುಖ ಆಟಗಾರರೇ ಇಲ್ಲದಂತಾಗುತ್ತೆ. ಸದ್ಯ ಒಂದು ತಂಡ ಒಬ್ಬ ವಿದೇಶಿ ಆಟಗಾರ ಸೇರಿ ನಾಲ್ವರನ್ನ ಉಳಿಸಿಕೊಳ್ಳಲಾಗುತ್ತೆ. ಹೀಗೆ ಫ್ರಾಂಚೈಸಿಗಳು ಆಟಗಾರರನ್ನ ಉಳಿಸಿಕೊಂಡ್ರೆ, ಹೊಸ ತಂಡಗಳಿಗೆ ಪರಿಸ್ಥಿತಿ ಏನು ಅನ್ನೋ ಪ್ರಶ್ನೆ ಎದ್ದಿದೆ. ಹಾಗೇ ಹೊಸ ತಂಡಗಳಿಗೆ ಯಾವ ರೀತಿ ನಿಯಮ ಜಾರಿಗೆ ತರುತ್ತೆ ಅನ್ನೋದು ಕೂಡ ಕುತೂಹಲದ ಪ್ರಶ್ನೆ.

ಹೊಸ ತಂಡಗಳು ಸೇರ್ಪಡೆಗೊಂಡರೆ ವೇಳಾಪಟ್ಟಿ ಮುಂದೂಡಿಕೆ?
ಹೊಸ ಫ್ರಾಂಚೈಸಿಗಳ ಸೇರ್ಪಡೆಯಿಂದಾಗಿ ಮುಂದಿನ ಐಪಿಎಲ್​​​​ನ ವೇಳಾಪಟ್ಟಿ ವಿಂಡೋ ಹೆಚ್ಚಾಗುತ್ತೆ. ಪ್ರಸ್ತುತ 60 ಪಂದ್ಯಗಳು ನಡೆದರೆ, ಹೊಸ ತಂಡಗಳ ಸೇರ್ಪಡೆ ಬಳಿಕ ಅವುಗಳ ಸಂಖ್ಯೆ 90ಕ್ಕೆ ಏರಿಕೆ ಕಾಣಲಿದೆ. ಇದರಿಂದ ಮಾರ್ಚ್ – ಮೇ ತಿಂಗಳ ಚೌಕಟ್ಟಿನಲ್ಲಿ ಇವೆಲ್ಲವನ್ನೂ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಜೂನ್​ವರೆಗೂ ವಿಸ್ತರಿಸುವ ಸಾಧ್ಯತೆ ಇದೆ. ಒಟ್ನಲ್ಲಿ ಈ ಚಾಲೆಂಜಸ್​​ ಅನ್ನ ಬಿಗ್​ಬಾಸ್​​ಗಳು ಹೇಗೆ ಮೆಟ್ಟಿ ನಿಲ್ತಾರೆ ಅನ್ನೋದು ಸದ್ಯದ ಪ್ರಶ್ನೆ.

Source: newsfirstlive.com Source link