ಅರೆ..! ಭತ್ತದ ಗದ್ದೆಗೆ ಬಂತು ಗಡಿ ಕಾಯುವ ಡ್ರೋನ್; ಏನಿದು ಘಟನೆ?

ಅರೆ..! ಭತ್ತದ ಗದ್ದೆಗೆ ಬಂತು ಗಡಿ ಕಾಯುವ ಡ್ರೋನ್; ಏನಿದು ಘಟನೆ?

ಪಂಜಾಬ್: ಭಾರತೀಯ ವಾಯುಸೇನೆಯ ಮಾನವರಹಿತ ಏರಿಯಲ್ ವೆಹಿಕಲ್ ಡ್ರೋನ್ ಪಂಜಾಬ್​ನ ಗುರ್​ದಾಸ್​ಪುರ್ ಜಿಲ್ಲೆ ಕಾಲನೌರ್ ಎಂಬ ಗ್ರಾಮದಲ್ಲಿ ಭತ್ತದ ಗದ್ದೆಯೊಳಗೆ ಬಿದ್ದ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದಾಗಿ ಡ್ರೋನ್ ಫೇಲ್ ಆಗಿ ಗದ್ದೆಯೊಳಗೆ ಬಿದ್ದಿದೆ ಎನ್ನಲಾಗಿದೆ. ಮಂಗಳವಾರ ಈ ಘಟನೆ ನಡೆದಿದ್ದು ಸ್ಥಳೀಯರು ಡ್ರೋನ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಹತ್ತಿರದ ಭದ್ರತಾ ನೆಲೆಗೆ ಮಾಹಿತಿ ನೀಡಲಾಗಿದೆ. ಸದ್ಯ ಅಧಿಕಾರಿಗಳು ಯಾವ ತಾಂತ್ರಿಕ ದೋಷದಿಂದಾಗಿ ಡ್ರೋನ್ ಕೆಳಗೆ ಬಿದ್ದಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

blank

ಜಮ್ಮು ಕಾಶ್ಮೀರದಲ್ಲಿ ಡ್ರೋನ್ ದಾಳಿಗಳು ನಡೆದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಪಂಜಾಬ್ ಕೂಡ ಗಡಿಪ್ರದೇಶವಾದ್ದರಿಂದ ಭಾರತೀಯ ವಾಯುಸೇನೆ ಶತ್ರುದೇಶದ ಡ್ರೋನ್​ಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ಮಾನವರಹಿತ ಡ್ರೋನ್​ನ್ನು ಬಳಸುತ್ತಿತ್ತು ಎನ್ನಲಾಗಿದೆ.

ಇತ್ತ ನಿನ್ನೆಯಷ್ಟೇ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಿ ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಬಾರ್ಡರ್ ಸೆಕ್ಯುರಿಟಿಗಾಗಿ ಆ್ಯಂಟಿ ಡ್ರೋನ್ ಗ್ಯಾಡ್ಜೆಟ್​ಗಳು, ಬಿಎಸ್​ಎಫ್ ಮತ್ತು ಸಿಎಪಿಎಫ್​ನ 25 ಪಡೆಗಳನ್ನು ರಾಜ್ಯಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.

Source: newsfirstlive.com Source link