ವಿಕ್ರಾಂತ್ ರೋಣ ಸಿನಿಮಾದಲ್ಲಿ ಗಂಡಗ್ ರಕ್ಕಮ್ಮನ ಪಾತ್ರ ರಿವೀಲ್

ಬೆಂಗಳೂರು: ಬಾಲಿವುಡ್ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ವಿಕ್ರಾಂತ್ ರೋಣ ಚಿತ್ರತಂಡ ಗಡಂಗ್ ರಕ್ಕಮ್ಮ ಹೊಸದೊಂದು ಪೋಸ್ಟರ್ ಬಿಡುಗಡೆ ಮಾಡಿದೆ.

ಪೋಸ್ಟರ್‌ನಲ್ಲಿಏನಿದೆ?
ಈ ಸಿನಿಮಾದಲ್ಲಿ ಜಾಕ್ವೆಲಿನ್ ಅವರು ಕೇವಲ ಹಾಡಿನಲ್ಲಿ ಡ್ಯಾನ್ಸ್ ಮಾಡಿ ಸುಮ್ಮನಾಗಿಲ್ಲ. ಅವರದ್ದು ಒಂದು ವಿಶೇಷ ಪಾತ್ರ. ಇಂದು ರಿಲೀಸ್ ಮಾಡಿರುವ ಪೋಸ್ಟರ್‌ನಲ್ಲಿ ಆ ಬಗ್ಗೆ ಸುಳಿವು ನೀಡಲಾಗಿದೆ. ಜಾಕ್ವೆಲಿನ್ ಭಾವಚಿತ್ರದ ಪಕ್ಕದಲ್ಲಿ ಟಾರ್ಗೆಟ್ ಮಾಡಿರುವ ರೀತಿ ಚಾಕು ಚುಚ್ಚಲಾಗಿದೆ. ಜೊತೆಗೆ ನ್ಯೂಸ್ ಪೇಪರ್ ಕಟ್ಟಿಂಗ್ಸ್ ಇವೆ. ಅದರಲ್ಲಿ ಬಂದ ಸುದ್ದಿ ನೋಡಿದರೆ ಕಥೆಯ ಬಗ್ಗೆ ಇನ್ನಷ್ಟು ಕೌತುಕ ಮೂಡುತ್ತದೆ. ಸ್ಥಳೀಯ ಸಾರಾಯಿ ಮಾರಾಟಗಾರ್ತಿ ಮೇಲೆ ಕೊಲೆ ಆರೋಪ. ಹೆಸರು: ರಾಕೆಲ್ ಡಿಕೋಸ್ತಾ ಅಲಿಯಾಸ್ ಗಡಂಗ್ ರಕ್ಕಮ್ಮ. ಜನ್ಮ ದಿನಾಂಕ 11 ಆಗಸ್ಟ್ 1948 ಎಂದು ಬರೆಯಲಾಗಿದೆ. ಅಂದರೆ ಈ ಸಿನಿಮಾದಲ್ಲಿ ಜಾಕ್ವೆಲಿನ್ ಅವರು ಕೊಲೆ ಆರೋಪ ಹೊತ್ತ ಸಾರಾಯಿ ಮಾರಾಟಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಮಾಸ್ಕ್ ಹಾಕಿಕೊಳ್ಳಿ ಎಂದು ಕೊರೊನಾ ಜಾಗೃತಿ ಮೂಡಿಸಿದ ಸುಮಲತಾ ಅಂಬರೀಶ್

ಹುಟ್ಟುಹಬ್ಬದ ಶುಭಾಶಯಗಳು, ನಿಮಗೆ ಸದಾ ಒಳ್ಳೆಯಾಗಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿರುವ ಸುದೀಪ್ ಅವರು ಗಡಂಗ್ ರಕ್ಕಮ್ಮನ ಪಾತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ರಕ್ಕಮ್ಮನ ಫಸ್ಟ್‍ಲುಕ್ ಬಿಡುಗಡೆ ಮಾಡಲಾಗಿತ್ತು. ಇಂದು ಬರ್ತ್‍ಡೇ ಪ್ರಯುಕ್ತ ಚಿತ್ರತಂಡದ ಕಡೆಯಿಂದ ಹೊಸ ಪೋಸ್ಟರ್ ಅನಾವರಣ ಮಾಡಲಾಗಿದೆ.

ಗಡಂಗ್ ರಕ್ಕಮ್ಮ ಪಾರ್ಟಿ ಎಲ್ಲಿ? ಹ್ಯಾಪಿ ಬರ್ತ ಡೇ ಮುಂದಿನ ನಮ್ಮ ಭೇಟಿಯ ವೇಳೆ ಕೇಕ್ ತರುವುದು ಮರಿಯಬೇಡಿ ಎಂದು ನಿರ್ದೇಶಕ ಅನೂಪ್ ಭಂಡಾರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Anup Bhandari (@anupsbhandari)

ಈ ಹಿಂದೆ ನಿಷೇಧಗೊಂಡಿರುವ ತೊಟ್ಟೆ ಸಾರಾಯಿ ಅಂಗಡಿಗೆ ತುಳು ಭಾಷೆಯಲ್ಲಿ ‘ಗಂಡಗ್’ ಅಂಗಡಿ ಎಂದು ಕರೆಯಲಾಗುತ್ತಿತ್ತು ಮತ್ತು ಗ್ರಾಮೀಣ ಭಾಗದಲ್ಲಿ ಈ ಗಂಡಗ್ ಅಂಗಡಿ ಬಹಳ ಫೇಮಸ್ ಆಗಿತ್ತು. ಈಗ ಆ ‘ಗಂಡಗ್’ ಹೆಸರನ್ನು ಅನೂಪ್ ಭಂಡಾರಿ ತಮ್ಮ ಸಿನಿಮಾಕ್ಕೆ ತಂದಿದ್ದಾರೆ.

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ವಿಕ್ರಾಂತ್ ರೋಣ ಚಿತ್ರ ಕೂಡ ಮುಂಚೂಣಿಯಲ್ಲಿದೆ. ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡುತ್ತಿರುವ ವಿಕ್ರಾಂತ್ ರೋಣ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಲು ಪಾತ್ರವರ್ಗವೂ ಕಾರಣ ಆಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್​ ಫರ್ನಾಂಡಿಸ್ ಅವರು ನಟಿಸಿರುವುದು ವಿಶೇಷ. ಗಡಂಗ್ ರಕ್ಕಮ್ಮ ಎಂಬ ಪಾತ್ರವನ್ನು ಅವರಿಗೆ ನೀಡಲಾಗಿದೆ.

Source: publictv.in Source link