ಬಿಗ್​ಬಾಸ್​​ ಮನೇಲಿ ‘ಸೆಲಿಬ್ರಿಟಿಗಳ ಜಾತ್ರೆ’! ಏನಾದ್ರೂ ಇದೆಯಾ ಸಸ್ಪೆನ್ಸ್​..?

ಬಿಗ್​ಬಾಸ್​​ ಮನೇಲಿ ‘ಸೆಲಿಬ್ರಿಟಿಗಳ ಜಾತ್ರೆ’! ಏನಾದ್ರೂ ಇದೆಯಾ ಸಸ್ಪೆನ್ಸ್​..?

ಬಿಗ್​​ಬಾಸ್ ಎಷ್ಟು ಜನಕ್ಕೆ ಇಷ್ಟಾನೋ..? ಅದಕ್ಕಿಂತ ಹೆಚ್ಚು ಅಲ್ಲಿರುವ ಕಲರ್​ಫುಲ್​ ಮನೆ ಎಲ್ಲರನ್ನ ಒಂದು ಕ್ಷಣ ಮೈಮರೆಸುತ್ತೆ. ಒಂದ್​ ಸಾರಿ ಆ ಬಿಗ್​ ಮನೆಯನ್ನ ಹತ್ತಿರದಿಂದ ನೋಡ್ಬೇಕು ಅಂತಾ ಅದೆಷ್ಟೋ ವೀಕ್ಷಕರು ಕನಸು ಕಾಣ್ತಿರ್ತಾರೆ. ಈಗ ಬಿಗ್​ ಬಾಸ್​ ಮುಗಿದ್ರೂ ಕೂಡ ಬಿಗ್​ ಮನೆ ಸಖತ್​ ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ: ಮಂಜು ಪಾವಗಡ ಬಿಗ್​​ಬಾಸ್ ವಿನ್ನರ್​; ಅರವಿಂದ್ ಗೆಲ್ಬೇಕಿತ್ತು ಅಂತ ದಿವ್ಯಾ ಉರುಡುಗ ಬೇಸರ

blank

ಬಿಗ್​ ಮನೆಯ ಕ್ರೇಜ್​ ಸೀರಿಯಲ್​ ಸ್ಟಾರ್ಸ್​ನ ಕೂಡ ಬಿಟ್ಟಿಲ್ಲ.. ನಿಮ್ಮ ನೆಚ್ಚಿನ ಕಲರ್ಸ್​ ಕನ್ನಡದ ಅಷ್ಟು ತಾರೆಯರು ಬಿಗ್​ ಮನೆಯಲ್ಲಿ ರಶ್​ ಆಗಿದ್ದಾರೆ. ಈ ಬಗ್ಗೆ ಕಲರ್ಸ್​ ಕನ್ನಡ ಪ್ರೋಮೋ ಶೇರ್​ ಮಾಡಿದ್ದು, ನಿರೂಪಕ ಅಕುಲ್​ ಬಾಲಾಜಿ ಸೇರಿದಂತೆ ಕಲರ್ಸ್​ನ 15 ತಾರೆಗಳು ಬಿಗ್​ ಮನೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: ‘ಮರಳಿ ಮನಸ್ಸಾಗಿದೆ’.. ಅಂತಿದ್ದಾರೆ ಹರಿಣಿ ಶ್ರೀಕಾಂತ್

blank

ಈ ಎಪಿಸೋಡ್​ ಇದೇ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದ್ದು, ಸೀರಿಯಲ್​ ವಿಲನ್ಸ್​, ಮತ್ತು ನಾಯಕ ನಟಿ, ನಟರು 6 ದಿನಗಳ ಕಾಲ ಒಟ್ಟಿಗೆ ಇರಲಿದ್ದಾರೆ. ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಸ್ಟಾರ್ಸ್​ ಬಿಗ್​ ಮನೆಯಲ್ಲಿ ಏನೇನ್​ ಮಾಡಿದ್ರು, ಯಾವ ರೀತಿಯ ಮನರಂಜನೆ ಹೊತ್ತು ತರ್ತಿದ್ದಾರೆ ಅನ್ನೋದು ಕೂತುಹಲ ಮೂಡಿಸಿದೆ.

ಇದನ್ನೂ ಓದಿ: ಮಂಜು ಪಾವಗಡ ಬಿಗ್​​ಬಾಸ್ ವಿನ್ನರ್​; ಅರವಿಂದ್ ಗೆಲ್ಬೇಕಿತ್ತು ಅಂತ ದಿವ್ಯಾ ಉರುಡುಗ ಬೇಸರ

Source: newsfirstlive.com Source link