ಹೆಚ್ಚುತ್ತಿರುವ ಕೊರೊನಾ: ಬೆಂಗಳೂರಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧ

ಹೆಚ್ಚುತ್ತಿರುವ ಕೊರೊನಾ: ಬೆಂಗಳೂರಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧ

ಬೆಂಗಳೂರು: ನಗರದಲ್ಲಿ ಕೋವಿಡ್​ ಮಹಾಮಾರಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಭಕ್ತರಿಗೆ ದೇವಾಲಯಗಳಿಗೆ ಪ್ರವೇಷ ನಿಷೇಧಿಸಿ ಆದೇಶ ಹೊರಡಿಸಿದೆ.

ನೆರೆ ರಾಜ್ಯಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವದರಿಂದ ನಗರದಲ್ಲಿ ಆತಂಕ ಹೆಚ್ಚಾಗಿದ್ದು, ಬೆಂಗಳೂರು ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಮುಜರಾಯಿ ಇಲಾಖೆ, ಹಾಗೂ ಖಾಸಗಿ ದೇವಾಲಯಗಳಿಗೆ ನಿರ್ಬಂಧ ಆದೇಶ ಹೊರಡಿಸಿರುವ ಜಿಲ್ಲಾಡಳಿತ ಶ್ರಾವಣ ಮಾಸದ ವಾರಂತ್ಯದ ದಿನಗಳು, ಸಾರ್ವತ್ರಿಕ ರಜಾ ದಿನಗಳಲ್ಲಿ ಭಕ್ತರಿಗೆ ದೇವಸ್ಥಾನ ಪ್ರವೇಷ ನಿಷೇಧ ಹೇರಿದೆ.

ಇದನ್ನೂ ಓದಿ: ಕೋವ್ಯಾಕ್ಸಿನ್​-ಕೋವಿಶೀಲ್ಡ್​ ಮಿಕ್ಸಿಂಗ್ ಅಧ್ಯಯನಕ್ಕೆ DCGI ಅನುಮೋದನೆ

Source: newsfirstlive.com Source link