ಪ್ರೇಮ ವೈಫಲ್ಯ- ವಾಟ್ಸಪ್ ಸ್ಟೇಟಸ್ ಹಾಕಿ, ಪ್ರೇಮಿ ಆತ್ಮಹತ್ಯೆ

ದಾವಣಗೆರೆ: ಪ್ರೀತಿಸಿದ ಯುವತಿ ತನ್ನ ಜೊತೆ ಮದುವೆಯಾಗುವುದನ್ನು ನಿರಾಕರಿಸಿದ್ದಕ್ಕೆ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕರೂರು ಕೈಗಾರಿಕಾ ಪ್ರದೇಶದ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ.

ನಗರದ ಎಚ್‍ಕೆಆರ್ ವೃತ್ತದ ಲೆನಿನ್‍ನಗರದ ಹೊಸ ಬಡಾವಣೆ ನಿವಾಸಿ ಮಹಾಂತೇಶ್ (24) ಅತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಹಲವು ವರ್ಷಗಳಿಂದ ಕರೂರು ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಾಂತೇಶ್, ಕುಟುಂಬಕ್ಕೆ ಆಧಾರವಾಗಿದ್ದ. ಇದೇ ಗಾರ್ಮೆಂಟ್ಸ್ ನಲ್ಲಿನ ಯುವತಿಯೊಬ್ಬಳ ಪರಿಚಯವಾಗಿ, ಬಳಿಕ ಪ್ರೇಮಕ್ಕೆ ತಿರುಗಿದ್ದು, ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಮೂರು ವರ್ಷದ ಹಿಂದೆ ನಡೆದ ಕೊಲೆಗೆ ಮತ್ತೊಬ್ಬ ಬಲಿ

ಕೆಲ ದಿನಗಳಿಂದ ಯುವತಿ ಮದುವೆಗೆ ನಿರಾಕರಿಸಿದ್ದು, ಬೇರೆ ಯುವಕನ ಜೊತೆ ನಿಶ್ಚಿತಾರ್ಥವಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಮಾನಸಿಕವಾಗಿ ಕುಗ್ಗಿದ ಮಹಾಂತೇಶ್, ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ‘ನನ್ನ ಸಾವಿಗೆ ನಾನು ಪ್ರೀತಿಸಿದ ಹುಡುಗಿಯೇ ಕಾರಣ’, ಅಕ್ಕ ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ ಕ್ಷಮಿಸಿ ಎಂದು ವಾಟ್ಸಪ್ ನಲ್ಲಿ ಸ್ಟೇಟಸ್‍ಗೆ ಹಾಕಿ, ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: publictv.in Source link