‘ನೀವು ಆದೇಶ ಕೊಡಬೇಕು.. ನಾನು ಪಾಲಿಸಬೇಕು’ ಹೀಗೆ ಸುಮಲತಾ ಅಂಬರೀಶ್​ ಹೇಳಿದ್ಯಾರಿಗೆ?

‘ನೀವು ಆದೇಶ ಕೊಡಬೇಕು.. ನಾನು ಪಾಲಿಸಬೇಕು’ ಹೀಗೆ ಸುಮಲತಾ ಅಂಬರೀಶ್​ ಹೇಳಿದ್ಯಾರಿಗೆ?

ಮಂಡ್ಯ: ಅಂಬಿ ಹುಟ್ಟೂರು ದೊಡ್ಡರಸಿನ‌ಕೆರೆ ಗ್ರಾಮಕ್ಕೆ ಸಂಸದೆ ಸುಮಲತಾ ಅಂಬರೀಶ್​ ಆಗಮಿಸಿ ಕ್ಯಾತಮ್ಮ ದೇವಿ ದರ್ಶನ ಪಡೆದಿದ್ದಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನ‌ಕೆರೆ ಗ್ರಾಮದಲ್ಲಿ, 12 ವರ್ಷಗಳಿಗೊಮ್ಮೆ ನಡೆಯೊ ಈ ಹಬ್ಬದಲ್ಲಿ ಸಂಸದೆ ಪಾಲ್ಗೊಂಡು ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅವ್ರು, ನಾನು ಮಂಡ್ಯ ಜಿಲ್ಲೆಯ ಸಂಸದೆ. ನಾನು ಈ ಊರಿಗೆ ಬಂದಾಗ ಸಂಸದೆ ಅಲ್ಲ ಸೊಸೆ. ನಿಮ್ಮೆಲ್ಲರ ಆಶೀರ್ವಾದದಿಂದ ಸಂಸದೆಯಾಗಿದ್ದೀನಿ. ದೇವರು ಎಲ್ಲರ ಸಂಕಷ್ಟ ದೂರ ಮಾಡಲಿ. ದೊಡ್ಡರಸಿನಕೆರೆಗೆ ಬಂದಾಗ ನಾನು ಹೆಚ್ಚು ಮಾತನಾಡಲ್ಲ. ನೀವು ಮಾತಾಡಬೇಕು ನಾನು ಕೇಳಬೇಕು. ನೀವು ಆದೇಶ ಕೊಡಬೇಕು ನಾನು ಪಾಲಿಸಬೇಕು ಅಂತ ಅಂಬಿ ಹುಟ್ಟೂರಿನ ಜನರ ಬಳಿ ಸುಮಲತಾ ನುಡಿದ್ದಾರೆ.

blank

ಇನ್ನು ಮೊನ್ನೆ ತಾನೆ ಸಂಸದೆ ಸುಮಲತಾ ಅವರು ತಮ್ಮ ಪುತ್ರ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹಾಗೂ ನಟ ದರ್ಶನ್ ಜೊತೆ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದರು.

Source: newsfirstlive.com Source link