ಅಧಿವೇಶನ ಅಂತ್ಯ ಬೆನ್ನಲ್ಲೇ ಸರ್ವಪಕ್ಷ ಸಭೆ; ಪ್ರಧಾನಿ ಮೋದಿ, ಸೋನಿಯಾ ಮುಖಾಮುಖಿ

ಅಧಿವೇಶನ ಅಂತ್ಯ ಬೆನ್ನಲ್ಲೇ ಸರ್ವಪಕ್ಷ ಸಭೆ; ಪ್ರಧಾನಿ ಮೋದಿ, ಸೋನಿಯಾ ಮುಖಾಮುಖಿ

ನವದೆಹಲಿ: ಸಂಸತ್​ನ ಲೋಕಸಭಾ ಅಧಿವೇಶನ ಇಂದಿಗೆ ಕೊನೆಗೊಂಡಿದ್ದು ಅಧಿವೇಶನದಲ್ಲಿ ವಿಪಕ್ಷ ಮತ್ತು ಆಡಳಿತ ಸರ್ಕಾರದ ನಡುವಿನ ಮಾತಿನ ಚಕಮಕಿಯೇ ಹೆಚ್ಚಾಗಿದ್ದು ಅಭಿವೃದ್ಧಿ ಕೆಲಸಗಳ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದಿಲ್ಲ. ಈ ಮಧ್ಯೆ ಪ್ರಧಾನಿ ಮೋದಿ ವಿಪಕ್ಷ ನಾಯಕರ ಜೊತೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಟಿಎಂಸಿ, ಶಿರೋಮಣಿ ಅಕಲಿ ದಳ, ವೈಎಸ್​ಆರ್​​ಸಿಪಿ, ಬಿಜೆಡಿ ಪಕ್ಷಗಳ ಎಂಪಿಗಳು ಭಾಗಿಯಾಗಿದ್ದಾರೆ. ಅಲ್ಲದೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಹ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಸಂಸತ್ ಅಧಿವೇಶನ ಅಂದುಕೊಂಡತೆ ನಡೆಯದೆ ಗದ್ದಲ, ಗಲಾಟೆಯಿಂದಲೇ ಮುಗಿದುಹೋಗಿದೆ.. ಈ ಮಧ್ಯೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಹ ಸಂಸತ್​ನ ಕಾಲಾವಧಿ ಚರ್ಚೆಗಿಂತಲೂ ಗದ್ದಲದಿಂದಲೇ ಕಳೆದುಹೋಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಈ ಮಧ್ಯೆ ಮೋದಿ ಸರ್ವಪಕ್ಷ ಸಭೆ ಕರೆದಿರುವುದು ಮಹತ್ವ ಪಡೆದುಕೊಂಡಿದೆ.

Source: newsfirstlive.com Source link