’ಸಲಾರ್​’ಗೆ ಕಾಡ್ತಿದೆಯಂತೆ ಅದೊಂದು ಸಮಸ್ಯೆ..ಆ ಸಮಸ್ಯೆಗೆ ಶೂಟಿಂಗ್ ಸ್ಪಾಟ್ ಕಾರಣವಂತೆ!

’ಸಲಾರ್​’ಗೆ ಕಾಡ್ತಿದೆಯಂತೆ ಅದೊಂದು ಸಮಸ್ಯೆ..ಆ ಸಮಸ್ಯೆಗೆ ಶೂಟಿಂಗ್ ಸ್ಪಾಟ್ ಕಾರಣವಂತೆ!

ಡೈನಾಮಿಕ್ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗೂ ಡಾರ್ಲಿಂಗ್ ಪ್ರಭಾಸ್ ಕಾಂಬಿನೇಷನ್ ಮೊದಲ ಸಿನಿಮಾ ಸಲಾರ್.. ಸೌತ್​ ನಿಂದ ನಾರ್ತ್ ತನಕ ಚಿತ್ರಪ್ರೇಮಿಗಳ ಗಮನ ಸೆಳೆದಿರುವ ನಯಾ ಸಿನಿಮಾ ಇದು.. ಆದ್ರೆ ಈ ಸಿನಿಮಾದ ಶೂಟಿಂಗ್ ದೃಶ್ಯಗಳು ಅದ್ಯಾಕೆ ಪದೇ ಪದೇ ಲೀಕ್ ಆಗುತ್ತಲೇ ಇವೆ..? ಇದಕ್ಕೆ ಕಾರಣವೇನು..?

ಸಲಾರ್.. ಸೌಥ್ ಸಿನಿ ದುನಿಯಾ ಮತ್ತೊಂದು ನಿರೀಕ್ಷಿತ ಸಿನಿಮಾ.. ಕೆಜಿಎಫ್ ಸಿನಿಮಾವನ್ನ ಅದ್ಭುತವಾಗಿ ಸೃಷ್ಟಿಸಿದ, ಬಾಹುಬಲಿಯಲ್ಲಿ ಅದ್ಭುತವಾಗಿ ಘರ್ಜಿಸಿದ ಇಬ್ಬರು ಪ್ರತಿಭಾವಂತರು ಸಲಾರ್ ಸಿನಿಮಾಕ್ಕಾಗಿ ಒಂದಾಗಿದ್ದಾರೆ.. ನಿರ್ದೇಶಕ ಪ್ರಶಾಂತ್ ನೀಲ್ ಕೆಲಸ ಬಾಹುಬಲಿ ಪ್ರಭಾಸ್​ಗೆ ಇಷ್ಟಮ, ಡಾರ್ಲಿಂಗ್ ಪ್ರಭಾಸ್ ಆ್ಯಕ್ಟಿಂಗ್ ಡೈರೆಕ್ಟರ್ ಪ್ರಶಾಂತ್ ನೀಲ್​ಗೂ ಇಷ್ಟ.. ಈ ಇಷ್ಟ ಪ್ಲಸ್ ಇಷ್ಟ ಸೇರಿ ಆಗ್ತಾ ಇರೋದು ಸಲಾರ್ ಅನ್ನೋ ಸಿನಿಮಾ..

blank

ಪೋಸ್ಟರ್ ಬಿಟ್ಟು, ಅದ್ದೂರಿಯಾಗಿ ಮುಹೂರ್ತ ಮಾಡಿಕೊಂಡು ಮೂರ್ನಾಲ್ಕು ಶೆಡ್ಯೂಲ್​ನಲ್ಲಿ ಶೂಟಿಂಗ್ ಮಾಡಿ ಬ್ರೇಕ್ ಪಡೆದಿದ್ದ ಸಲಾರ್ ಸಿನಿಮಾ ತಂಡ ಮತ್ತೆ ಹೈದ್ರಾಬಾದ್ನಲ್ಲಿ ಶೂಟಿಂಗ್​ಗೆ ಇಳಿದಿದೆ.. ಆದ್ರೆ ಸಲಾರ್ ಸಿನಿಮಾದ ಶೂಟಿಂಗ್ ಶುರುವಾದಾಗೆಲ್ಲ ಏನಾದ್ರೊಂದು ಶೂಟಿಂಗ್ ವಿಶ್ಯೂವಲ್ಸ್ ಲೀಕ್ ಆಗುತ್ತಿದೆ.. ಇದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ..
ಪದೆ ಪದೆ ಸಲಾರ್ ದೃಶ್ಯ ಲೀಕ್ ಆಗುತ್ತಿರೋದ್ಯಾಕೆ..?

blank

ಹೊಂಬಾಳೆ ಫಿಲಂಸ್ ಯಾವುದೇ ಸಿನಿಮಾ ಕೆಲಸ ಮಾಡಿದ್ರು ಗುಟ್ಟಾಗಿ ಫರ್ಫೆಕ್ಟ್ ಆಗಿ ಮಾಡಿ ಮುಗಿಸೋ ಫಿಲ್ಮ್ ಟೀಮ್.. ಆದ್ರೆ ಸಲಾರ್ ಸಿನಿಮಾದ ಶೂಟಿಂಗ್ ವಿಶುವಲ್ಸ್ ಲೀಕ್ ಆಗೋದನ್ನ ತಡೆಹಿಡಿಯಲು ಹೊಂಬಾಳೆಗೆ ಸಾಧ್ಯವಾಗುತ್ತಿಲ್ಲ.. ಹೀಗಾಗೋಕೆ ಕಾರಣವೇನು..? ಅನ್ನೋ ಪ್ರಶ್ನೆಗೆ ಉತ್ತರ ಶೂಟಿಂಗ್ ಸ್ಪಾಟ್..

blank

ಹೌದು.. ಸಲಾರ್ ಸಿನಿಮಾದ ಸೀನ್ಸ್ ಲೀಕ್ ಆಗುತ್ತಿರೋದಕ್ಕೆ ಕಾರಣ ಚಿತ್ರತಂಡ ಆಯ್ಕೆ ಮಾಡಿಕೊಂಡಿರುವ ಶೂಟಿಂಗ್ ಸ್ಪಾಟ್ .. ಸಿಟಿ ಆಫ್ ಬ್ಲಾಕ್ ಗೋಲ್ಡ್ ಅಂತಾ ಕರೆಸಿಕೊಳ್ಳೋ ಗೋದಾವರಿ ಕಣಿವೆಯಲ್ಲಿ ಸಲಾರ್ ಟೀಂ ಚಿತ್ರೀಕರಣ ಮಾಡಿದೆ.. ಜೊತೆಗೆ ಹೈದ್ರಾಬಾದ್ನ ಅಲ್ಯುಮಿನಿಯನ್ ಫ್ಯಾಕ್ಟ್ರಿಯಲ್ಲಿಯೂ ಸಲಾರ್ ಚಿತ್ರೀಕರಣವಾಗಿದೆ.. ಇಲ್ಲಿ ಅಷ್ಟಾಗಿ ಭದ್ರತೆಯನ್ನ ಮಾಡಿಕೊಂಡು ಚಿತ್ರೀಕರಣ ಮಾಡಲು ಆಗುತ್ತಿಲ್ಲ ಚಿತ್ರತಂಡಕ್ಕೆ.. ಆಲ್ಲೊಬ್ಬರು ಇಲ್ಲೊಬ್ಬರು ಮೊಬೈಲ್ನಲ್ಲಿ ಸಲಾರ್ ಚಿತ್ರೀಕರಣವನ್ನ ಸೇರೆ ಹಿಡಿದು ಸೋಶಿಯಲ್ ಸುಮುದ್ರದಲ್ಲಿ ತೇಲಿಬಿಡುತ್ತಿದ್ದಾರೆ.. ಈ ಕಾರಣದಿಂದಾಗಿ ಸಲಾರ್ ಸಿನಿಮಾ ಶೂಟಿಂಗ್ ತುಣುಕುಗಳು ಸೋಶಿಯಲ್ ಸಮುದ್ರದ ದಡದಲ್ಲಿ ತೇಲಾಡುತ್ತಿವೆ..

blank

ಶೃತಿ ಹಾಸನ್​ಗೆ ಪ್ರಭಾಸ್ ಕೊಟ್ರು ನಾನ್ ವೆಜ್ ಊಟ..!
ಬಾಹುಬಲಿ ಕೊಟ್ಟ ಭೂರಿ ಭೋಜನಕ್ಕೆ ಶೃತಿ ಫುಲ್ ಫಿದಾ.

ಸಲಾರ್ ಸಿನಿಮಾದಲ್ಲಿ ಹೀರೋಯಿನ್ ಆಗಿ ಬಹುಭಾಷ ನಟಿ ಶೃತಿ ಹಾಸನ್ ನಟಿಸುತ್ತಿದ್ದಾರೆ.. ಮೊನ್ನ್ ಮೊನ್ನೆ ಪ್ರಶಾಂತ್ ನೀಲ್ ಕೆಲಸವನ್ನ ಕೊಂಡಾಡಿದ್ದ ಶೃತಿ ಹಾಸನ್ ಈ ಬಾರಿ ಪ್ರಭಾಸ್ ಕೊಟ್ಟ ಊಟದ ಬಗ್ಗೆ ದಿಲ್ ಖುಷ್ ಆಗಿ ಮಾತನಾಡಿದ್ದಾರೆ.. ನಟಿ ಶೃತಿ ಹಾಸನ್​ಗೆ ಪ್ರಭಾಸ್ ಕಡೆಯಿಂದ ನಾನ್ ವೆಜ್ ಸಿಕ್ಕಿದೆಯಂತೆ..

blank

ಒಟ್ಟಿನಲ್ಲಿ ಸಲಾರ ಸಿನಿಮಾ ಶೂಟಿಂಗ್ ಸೆಟ್​ನಿಂದ ಆಗೊಂದು ಈಗೊಂದು ಇಂಟ್ರಸ್ಟಿಂಗ್ ಸಮಚಾರವನ್ನ ಚಿತ್ರಪ್ರೇಮಿಗಳಿಗೆ ನೀಡ್ತಾ ಇಂಪ್ರೇಸ್ ಮಾಡ್ತಿದೆ.. ಮುಂದಿನ ವರ್ಷದ ಏಪ್ರಿಲ್ ತಿಂಗಳು ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಮುಂದೆ ಸಲಾರ್ ಸಿನಿಮಾ ಬಂದು ನಿಲ್ಲಲಿದೆ..

Source: newsfirstlive.com Source link