ತ್ಯಾಗ ಮಾಡಿ ಬಂದಿರೋದ್ರಿಂದ ನನಗೆ 100% ಸಚಿವ ಸ್ಥಾನ ಸಿಗುತ್ತೆ- ಆರ್. ಶಂಕರ್

ತ್ಯಾಗ ಮಾಡಿ ಬಂದಿರೋದ್ರಿಂದ ನನಗೆ 100% ಸಚಿವ ಸ್ಥಾನ ಸಿಗುತ್ತೆ- ಆರ್. ಶಂಕರ್

ಬೆಂಗಳೂರು: ತ್ಯಾಗ ಮಾಡಿ ಬಂದಿರೋದ್ರಿಂದ ನನಗೆ 100% ಸಚಿವ ಸ್ಥಾನ ಸಿಗುತ್ತೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಮಾಜಿ ಸಚಿವ ಆರ್.ಶಂಕರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಇನ್ನೆರಡು ದಿನಗಳಲ್ಲಿ ನಾನು ಮಂತ್ರಿ ಆಗ್ತೀನಿ- ಆರ್. ಶಂಕರ್

ವಿಳಂಬ ಮಾಡದೇ ಶೀಘ್ರವಾಗಿ ಮಂತ್ರಿ ಸ್ಥಾನ ನೀಡಲು ಮನವಿ ಮಾಡಿದ್ದೇನೆ.. ಸಚಿವ ಸ್ಥಾನ ಕೊಡುವಂತೆ ಕೇಳಿದ್ದೇನೆ. ವರಿಷ್ಠರ ಜತೆ ಚರ್ಚಿಸಿ ತಿಳಿಸುವುದಾಗಿ ಸಿಎಂ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಭೇಟಿಯಾಗಿ ನನಗೆ ಆಗಿರುವ ಅನ್ಯಾಯ ತೋಡಿಕೊಂಡಿದ್ದೇನೆ. ಮೊನ್ನೆ ಮಂತ್ರಿ ಮಂಡಲ ರಚನೆ ಆದಾಗಲೂ ಭೇಟಿ ಮಾಡಿದ್ದೆ. ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು ಎಂದು ಮನವಿ ಮಾಡಿದ್ದೆ. ಇನ್ನೂ ನಾಲ್ಕು ಸ್ಥಾನ ಇವೆ.. ಮುಂದೆ ವರಿಷ್ಠರ ಗಮನಕ್ಕೆ ತಂದು ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ. ನಾನು ಕೂಡ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತೇನೆ. ನಾನು ತ್ಯಾಗ ಮಾಡಿ ಬಂದಿದ್ದೇನೆ. ನನಗೆ ನ್ಯಾಯ ಕೊಡಲೇಬೇಕು ಎಂದು ನಿಲುವು ತಿಳಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ನನ್ನಿಂದ ನಿಮ್ಮ ಸರ್ಕಾರ ಬಂದಿದೆ.. ನನಗೇ ವಿಪ್ ಕೊಡ್ತೀಯಾ..? ಆರ್. ಶಂಕರ್ ಆಕ್ರೋಶ

ನಾನು ಏನು ಸನ್ಯಾಸಿ ಅಲ್ಲ.. ಅವತ್ತು ಸರ್ಕಾರ ತರುವುದಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅವತ್ತು ನಾನು ಒಳ್ಳೆಯದು ಮಾಡಿದ್ದಕ್ಕೆ ಇವತ್ತು ನನಗೆ ಹೀಗೆ ಆಗಿದೆ. ಹೀಗಾಗಿ ಆದಷ್ಟು ಬೇಗ ನನಗೆ ಮಾಡಿಕೊಡಿ ಎಂದು ಕೇಳಿದ್ದೇನೆ. ನಮ್ಮಲ್ಲಿ ಒಗ್ಗಟ್ಟು ಇದೆಯೋ ಇಲ್ವೋ ಎಂಬ ಪ್ರಶ್ನೆ ಬೇಡ. ನಾನಂತೂ ಯಾರ ಪರ ವಿರುದ್ಧವೂ ಮಾತಾಡಲ್ಲ. ಆದರೆ ನನ್ನ ತ್ಯಾಗಕ್ಕೆ ಬೆಲೆ ಸಿಗಲಿ ಎಂದು ನಾನು ಕೇಳುತ್ತಿದ್ದೇನೆ ಅಷ್ಟೇ ಎಂದು ಇದೇ ವೇಳೆ ಆರ್. ಶಂಕರ್ ಹೇಳಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕೊರೊನಾ ಇದೆ.. ಮುಟ್ಟಲು ಹೋದವರಿಗೂ ಬರುತ್ತೆ- ಆರ್. ಶಂಕರ್

Source: newsfirstlive.com Source link