ಹೊಸಬರ ‘ಗ್ರೂಫಿ’ಗೆ ಮೈಸೂರು ಒಡೆಯರ್​ ಆಶೀರ್ವಾದ

ಹೊಸಬರ ‘ಗ್ರೂಫಿ’ಗೆ ಮೈಸೂರು ಒಡೆಯರ್​ ಆಶೀರ್ವಾದ

ಸ್ಯಾಂಡಲ್​ವುಡ್​ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಶಿಷ್ಯ ಬಳಗ ‘ಗ್ರೂಫಿ’ ಅನ್ನೋ ಸಿನಿಮಾವನ್ನ ಮಾಡಿದೆ ಅನ್ನೋದನ್ನ ನಾವು ನಿಮಗೆ ಹೇಳಿದ್ವಿ.. ಈಗ ‘ಗ್ರೂಫಿ’ ಸಿನಿಮಾದ ಮುಂದುವರೆದ ಭಾಗ.. ಹೊಸಬರ ಹೊಸ ಸಿನಿ ಪ್ರಯತ್ನಕ್ಕೆ ಮೈಸೂರು ಮಹಾರಾಜರ ವಿಶೇಷ ಬೆಂಬಲ ಸಿಕ್ಕಿದೆ..

ಎರಡನೇ ಲಾಕ್ಡೌನ್ ನಂತರ ಚಿತ್ರರಂಗದಲ್ಲಿ ಸಿನಿ ಕೆಲಸಗಳು ಚುರುಕು ಗೊಂಡಿವೆ.. ಈ ಗ್ಯಾಫ್ನಲ್ಲಿ ಅರ್ಜನ್ ಜನ್ಯ ಗರಡಿಯಲ್ಲಿ ಪಳಗಿರುವ ತಂಡವೊಂದು ನವಿರಾದ ಪ್ರೇಮಕಥೆಯನ್ನ ‘ಗ್ರೂಫಿ’ ಅನ್ನೋ ಸಿನಿಮಾದ ಮೂಲಕ ಹೇಳಲು ಹೊರಟಿದೆ..

blank

ಗ್ರೂಫಿ ಹಾಡುಗಳ ಮೂಲಕ ಗಮನ ಸೆಳೆಯುತ್ತಿರೋ ಹೊಸ ಸಿನಿಮಾ..ಹೊಸ ಪ್ರತಿಭೆಗಳಾಗಿರೋ ಆರ್ಯನ್ ಎಸ್.ಜಿ , ಪದ್ಮಶ್ರೀ ಎಸ್ ಜೈನ್ ಗ್ರೂಫಿ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.. ಅರ್ಜುನ್ ಶಿಷ್ಯ ಡಿ. ಅರ್ಜುನ್ ಗ್ರೂಫಿ ಸಿನಿಮಾಕ್ಕೆ ಚಿತ್ರಕಥೆ ಬರೆದು ಡೈರೆಕ್ಟರ್ ಚೇರ್ ಮೇಲೆ ಕುಳಿತು ಆ್ಯಕ್ಷನ್ ಕಟ್ ಹೇಳಿದ್ದಾರೆ ಮಾಡಿದ್ದಾರೆ..

ಜನ್ಯ ಅವರ ಮತ್ತೊಬ್ಬ ಶಿಷ್ಯ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಈ ಹೊಸಬರ ಗ್ರೂಫಿ ಸಿನಿ ಕನಸಿಗೆ ಲಿಯಾ ಗ್ಲೋಬಲ್ ಮೀಡಿಯಾ ಹೌಸ್ ನ ಮುಖ್ಯಸ್ಥ ಕೆ.ಜಿ ಸ್ವಾಮಿ ಬಂಡವಾಳ ಹೂಡಿದ್ದಾರೆ.. ಈ ಹೊಸಬರ ಸಿನಿಮಾಕ್ಕೆ ಮೈಸೂರು ಮಹಾರಾಜರ ಮೆಚ್ಚಗೆ ಸಿಕ್ಕಿದೆ..
ಕೆ.ಜಿ.ಸ್ವಾಮಿ ನಿರ್ಮಾಣ ಮಾಡಿರುವ, ರವಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದಿರುವ “ಗ್ರೂಫಿ” ಚಿತ್ರದ ಟ್ರೇಲರನ್ನು ಮೈಸೂರು ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆ ಮಾಡಿರೋದು ವಿಶೇಷ…‌ಟ್ರೇಲರ್ ಬಿಡುಗಡೆ ಮಾಡಿ ವೀಕ್ಷಿಸಿರುವ ಮಹಾರಾಜರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

blank
ಟ್ರೈಲರ್ , ಸಾಂಗ್ಸ್ ಫೊಸ್ಟರ್ಸ್ಗಳಿಂದ ಗಮನ ಸೇಳೆದಿರೋ ಗ್ರೂಫಿ ಸಿನಿಮಾ ಮುಂದಿನ ವಾರ ಪ್ರೇಕ್ಷಕರ ಮುಂದೆ ತಮ್ಮ ಅದೃಷ್ಟ ಪರೀಕ್ಷೆ ಇಳಿಯುತ್ತಿದೆ.. ಚಿತ್ರಪ್ರೇಮಿಗಳೇ ಮುಂದಿನ ಶುಕ್ರವಾರ ರಾಜ್ಯಾದ್ಯಂತ ಗ್ರೂಫಿ ಸಿನಿಮಾ ತೆರೆಣುತ್ತಿದೆ ಇರ್ಲಿ ಹೊಸ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ..

Source: newsfirstlive.com Source link