ದೇಶದ ಆರ್ಥಿಕತೆ ಮತ್ತೊಮ್ಮೆ ಚೇತರಿಕೆ ಕಾಣುತ್ತಿದೆ.. ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ- ಮೋದಿ

ದೇಶದ ಆರ್ಥಿಕತೆ ಮತ್ತೊಮ್ಮೆ ಚೇತರಿಕೆ ಕಾಣುತ್ತಿದೆ.. ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ- ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಿಐಐ ವಾರ್ಷಿಕ ಸೆಷನ್​ ಉದ್ದೇಶಿಸಿ ಮಾತನಾಡಿದರು.. ಈ ವೇಳೆ ದೇಶದ ಅಭಿವೃದ್ಧಿಗೆ ಎಲ್ಲ ಉದ್ಯಮದ ಎಲ್ಲ ಗೆಳೆಯರು ಹಾಗೂ ಸಂಘಟನೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ದೇಶದ ಆರ್ಥಿಕತೆ ಮತ್ತೊಮ್ಮೆ ಚೇತರಿಕೆ ಕಾಣುತ್ತಿದೆ ಎಂದಿದ್ದಾರೆ.

ನವಭಾರತ ಜಗತ್ತಿನ ಎದುರು ಬೆಳೆಯಲು ಕಟಿಬದ್ಧವಾಗಿದೆ. ಹಿಂದೊಮ್ಮೆ ವಿದೇಶಿ ಬಂಡವಾಳ ಹೂಡಿಕೆಗೆ ಭಾರತ ಆತಂಕಕಾರಿ ಎಂಬಂತಾಗಿತ್ತು.. ಇದೀಗ ಭಾರತ ಎಲ್ಲ ರೀತಿಯ ವಿದೇಶಿ ಬಂಡವಾಳವನ್ನು ಸ್ವಾಗತಿಸುತ್ತಿದೆ. ಬ್ಯಸಿನೆಸ್ ರ್ಯಾಂಕಿಂಗ್​ನಲ್ಲಿ ಭಾರತ ಈಗ ಮಹತ್ವದ ಹೆಜ್ಜೆಯನ್ನಿಡುತ್ತಿದೆ.

ಇದನ್ನೂ ಓದಿ: ಉಜ್ವಲ 2.0 ಯೋಜನೆಗೆ ಚಾಲನೆ; ಇದುವರೆಗೂ 8 ಕೋಟಿ ಎಲ್​ಪಿಜಿ ಸಂಪರ್ಕ ಕಲ್ಪಿಸಿದ್ದೇವೆ ಎಂದ ಮೋದಿ

ಭಾರತದ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಇಂದು ದೇಶದ ಜನರು ದೇಶದಲ್ಲೇ ತಯಾರಾಗುವ ವಸ್ತುಗಳ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಇದು ಅನಿವಾರ್ಯತೆಯಲ್ಲ ಆದರೂ ಭಾರತೀಯರು ಇಂದು ಭಾರತದಲ್ಲೇ ತಯಾರಾದ ಪ್ರಾಡಕ್ಟ್​​ಗಳನ್ನ ಬಳಸಲು ಇಚ್ಛಿಸುತ್ತಾರೆ. ದೇಶ ತನ್ನ ನಿರ್ಧಾರ ಮಾಡಿಯಾಗಿದೆ. ಹಿಂದೊಮ್ಮೆ ಕೃಷಿಯನ್ನು ಕೇವಲ ಮಧ್ಯಮವರ್ಗದ ಸೆಕ್ಟರ್ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಕೃಷಿ ವಲಯದಲ್ಲಿ ಬದಲಾವಣೆಗಳನ್ನು ತರುವ ಮೂಲಕ ಸ್ವದೇಶಿ ಹಾಗೂ ಜಾಗತಿಕ ಮಟ್ಟದಲ್ಲಿ ರೈತರಿಗೆ ಸಂಪರ್ಕ ಕಲಿಸಲಾಗುತ್ತಿದೆ.

ಇದನ್ನೂ ಓದಿ: ಸಾಗರ ಭದ್ರತೆ ಬಲವರ್ಧನೆ ಅಂತರಾಷ್ಟ್ರೀಯ ಸಹಕಾರ ಅಭಿವೃದ್ಧಿಗೆ ಉದಾಹರಣೆ; ಪ್ರಧಾನಿ ಮೋದಿ

ಭಾರತ ಇಂದು ದಾಖಲೆ ಮಟ್ಟದ ಎಫ್​ಡಿಐ ಸ್ವೀಕರಿಸುತ್ತಿದೆ. ಸರ್ಕಾರದ ಕೆಲವು ಪ್ರಯತ್ನಗಳಿಂದಾಗಿ ಎಫ್​ಪಿಐ ಹೂಡಿಕೆ ಕೂಡ ದಾಖಲೆಯಾಗುತ್ತಿದೆ. ಇಂದಿನ ದೇಶದ ಫೊರೆಕ್ಸ್ ರಿಸರ್ವ್ ಎಲ್ಲ ಸಮಯಕ್ಕಿಂತ ಹೆಚ್ಚಿದೆ. ಯುವಕರು ಈಗ ತಮ್ಮ ಫಲಿತಾಂಶವನ್ನು ಮುಂದಿಡುತ್ತಿದ್ದಾರೆ. ಹೌದು.. ನಾವು ಇದೇ ಸ್ಥಾನದಲ್ಲಿ ಇರಬೇಕಾದವರು.. ಭಾರತದ ಸ್ಟಾರ್ಟ್​​ಅಪ್​ಗಳೂ ಕೂಡ ಇಂದು ಇದೇ ಆತ್ಮ ವಿಶ್ವಾಸ ಹೊಂದಿವೆ. ಭಾರತೀಯರಲ್ಲಿ ಇಂದು ಆತ್ಮವಿಶ್ವಾಸ ಹೆಚ್ಚುತ್ತಿದೆ. ನೀವು ಒಲಿಂಪಿಕ್ಸ್​ನ ಅನುಭವವನ್ನು ಪಡೆದಿದ್ದೀರಿ. ಫೀಲ್ಡ್​ಗೆ ಇಳಿದ ದೇಶದ ಯುವಕರಲ್ಲಿ ಇಂದು ಅಂಜಿಕೆಯಿಲ್ಲ. ಅವರು ಶ್ರಮವಹಿಸಲು ಮತ್ತು ರಿಸ್ಕ್  ತೆಗೆದುಕೊಳ್ಳಲು ಇಚ್ಛಿಸುತ್ತಾರೆ.

Source: newsfirstlive.com Source link