ಜಾಕ್ವೆಲಿನ್ ಬರ್ತ್​ಡೇ ಗೆ ವಿಕ್ರಾಂತ್ ರೋಣನ ಸರ್ಪ್ರೈಸ್ ಗಿಫ್ಟ್​

ಜಾಕ್ವೆಲಿನ್ ಬರ್ತ್​ಡೇ ಗೆ ವಿಕ್ರಾಂತ್ ರೋಣನ ಸರ್ಪ್ರೈಸ್ ಗಿಫ್ಟ್​

ವಿಕ್ರಾಂತ್ ರೋಣ.. ಕಿಚ್ಚ ಸುದೀಪ್ ಅವರ ಡೈ ಹಾರ್ಡ್ ಫ್ಯಾನ್ಸ್ನಿಂದ ಹಿಡಿದು ಬೇರೆ ಬೇರೆ ಭಾಷೆಯ ಸಿನಿಮಾ ಪ್ರೇಮಿಗಳನ್ನ ಸೇಳೆದಿರೋ ನಿರೀಕ್ಷಿತ ಸಿನಿಮಾ.. ಏನಾದ್ರೊಂದು ಎಕ್ಸ್ಸೈಟಿಂಗ್ ವಿಚಾರಗಳನ್ನ ಹೊರ ಬಿಡುತ್ತಾ ಚಿತ್ರಪ್ರೇಮಿಗಳ ಕುತೂಹಲದ ಕೋಟೆಯಲ್ಲಿ ಕೋಲಾಹಲವನ್ನ ಎಬ್ಬಿಸುತ್ತಿರೋ ವಿಕ್ರಾಂತ್ ರೋಣ ಫಿಲ್ಮ್ ಟೀಮ್ ಈ ಬಾರಿ ಮತ್ತೊಂದು ಸರ್ಪ್ರೈಸ್ ಕೊಟ್ಟಿದೆ.. ಶ್ರೀಲಂಕನ್ ಚೆಲುವೆ ಜಾಕ್ವೆಲಿನ್ ಬರ್ತ್​ಡೇ ಸಲುವಾಗಿ ಒಂದು ಪೋಸ್ಟರ್ ಬಿಟ್ಟಿದೆ.. ಆ ಪೋಸ್ಟರು ಹತ್ತಾರು ಕುತೂಹಲದ ಕಿಚ್ಚು ಚಿತ್ರಪ್ರೇಮಿಗಳಲ್ಲಿ ಹಬ್ಬಿಸಿದೆ..

blank

ಪ್ರತಿಷ್ಠಿತ ಐಎಮ್​ಡಿಬಿ ಪ್ರಕಟಿಸಿರುವ ಇಂಡಿಯಾದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅಗ್ರಮಾನ್ಯವಾಗಿರೋ ಸಿನಿಮಾ ವಿಕ್ರಾಂತ್ ರೋಣ.. ದಿ ವರ್ಲ್ಡ್ ಆಫ್ ಫ್ಯಾಂಟಮ್ ಎಂದು ಹೆಸರಿನಿಂದ ಶುರುವಾದಗಿಂದಲೂ ವಿಕ್ರಾಂತ್ ರೋಣ ಸಿನಿಮಾದ ಮೇಲೆ ಭಾರಿ ಭರವಸೆಯ ನಿರೀಕ್ಷೆಗಳು ಎದ್ದಿವೆ..

ಡಿಫರೆಂಟ್ ಡಿಫರೆಂಟ್ ಪೋಸ್ಟರ್ಸ್ಗಳಿಂದ ಗಮನ ಸೇಳೆಯುತ್ತಿದ್ದ ಅನೂಪ್ ಭಂಡಾರಿ ಫಿಲ್ಮ್ ಟೀಮ್ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರವಾಗಿ ಬಾಲಿವುಡ್ ತುಂಬಾ ಸದ್ದು ಮಾಡಿದೆ.. ಈಗ ಶ್ರೀಲಂಕನ್ ಚೆಲುವೆ ಜಾಕ್ವೆಲಿನ್ ಬರ್ತ್ಡೇ ಸಲುವಾಗಿ ಮತ್ತೊಂದು ಕುತೂಹಲದ ಕೋಲಾಹಲವನ್ನ ಪ್ರೇಕ್ಷಕರ ನಿರೀಕ್ಷೆಯ ಪುಟ್ಟದಲ್ಲಿ ಎಬ್ಬಿಸಿದೆ..

ಜಾಕ್ವೆಲಿನ್ ಬರ್ತ್​ಡೇ ಗೆ ವಿಕ್ರಾಂತ್ ರೋಣನ ಸರ್ಪ್ರೈಸ್ ಗಿಫ್ಟ್​

ಜಾಕ್ವೆಲಿನ್ ಫಡಿರ್ನಾಂಡಿಸ್ ಅವರ ಜಸ್ಟ್ 36ನೇ ಬರ್ತ್​ಡೇ ವಿಕ್ರಾಂತ್ ರೋಣ ಸಿನಿಮಾ ತಂಡ ಹೊರ ಬಿಟ್ಟಿರೋ ನಯಾ ಪೋಸ್ಟರ್ನಲ್ಲಿ ಕಾಣುತ್ತಿರೋ ಹೊಸ್ ಹೊಸ ಕೌತುಕಗಳು.. ಇವತ್ತು ಮನೋರಂಜನೆ ಅನ್ನೋದು ಸುಲಭವಾಗಿ ಅಂಗೈಲೆ ಸಿಗುತ್ತಿದೆ.. ಆದ್ರೆ ಜನಮನ ಅದನ್ನ ಇಷ್ಟ ಪಟ್ಟ ನೋಡೋ ಹಾಗೆ ಮಾಡೋದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜ್.. ಈ ಚಾಲೆಂಜ್ ಅಲ್ಲಿ ಡೈರೆಕ್ಟರ್ ಅನೂಪ್ ಭಂಡಾರಿ ಆಂಡ್ ಟೀಮ್ ಗೆದ್ದಿದೆ.. ವಿಕ್ರಾಂತ್ ರೋಣನಿಂದ ಹೊರ ಬರುತ್ತಿರೋ ಕುತೂಹಲದ ಕಂಟೆಂಟ್ಸ್ ವೈರಲ್ ಆಗುತ್ತಿವೆ.. ಅದರಂತೆ ಈ ಹೊರ ಬಂದಿರೋ ಜಾಕ್ಲಿನ್ ಬರ್ತ್ಡೇ ನಯಾ ಪೋಸ್ಟರ್ ನಯಾ ನಯಾ ನಿರೀಕ್ಷೆಗೆ ಕುತೂಹಲದ ಪರೀಕ್ಷೆಗೆ ಪ್ರೇಕ್ಷಕರನ್ನ ತಳುತ್ತಿದೆ..

ಕುತೂಹಲದ ಕೋಲಾಹಲ ಎಬ್ಬಿಸಿದೆ ‘ವಿಕ್ರಾಂತ್ ರೋಣ’
‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಜಾಕ್ವೆಲಿನ್ ಪಾತ್ರವೇನು..?

ಶ್ರೀಲಂಕನ್ ರೆಂಬೆ , ಬಾಲಿವುಡ್ನ ಗಜ ನಿಂಬೆ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನ ಆರು ದಿನಗಳ ಮಟ್ಟಿಗೆ ಬೆಂಗಳೂರಿಗೆ ಕರಸಿ ಒಂದು ಹಾಡಿಗೆ ಕುಣಿಸಿದಾಗಲೇ ಕಿಚ್ಚನ ದಿಲ್ಕಿ ಫ್ಯಾನ್ಸ್ಗಳಲ್ಲಿ ಒಂದು ಮಿಲ್ಕಿ ಡೌಟ್ ಬಂದಿತ್ತು.. ಬರಿ ಆರು ದಿನ ಕುಣಿಯೋಕೆ ಜಾಕ್ಲಿಗೆ 3ಕೋಟಿ ಕೊಟ್ರಾ ನಿರ್ಮಾಪಕ ಜಾಕ್ ಮಂಜು..? ಅಂತ.. ಆದ್ರೆ ಆಮೇಲೆ ಚಿತ್ರತಂಡವೇ ಬಾಯಿ ಬಿಟ್ಟಿತ್ತು ಬರಿ ಹಾಡಿಗಷ್ಟ ಜಾಕ್ಲಿ ಬಂದಿಲ್ಲ , ಒಂದೊಳ್ಳೆ ಪಾತ್ರವನ್ನ ವಿಕ್ರಾಂತ್ ರೋಣನಲ್ಲಿ ಮಾಡಿದ್ದಾರೆ ಶ್ರೀಲಂಕನ್ ಚೆಲುವೆ ಎಂದಿತ್ತು.. ಈಗ ಪಾತ್ರ ಗತ್ತು ಗಮತ್ತು ಹೊಸ ಪೋಸ್ಟರ್ನಲ್ಲಿ ಕಾಣಿಸುತ್ತಿದೆ..

blank
ಮೊನ್ ಮೊನ್ನೆ ಜಾಕ್ವೆಲಿನ್ ಫರ್ನಾಂಡಿಸ್ ಅವರ ಪಾತ್ರವೇನು ಎಂದು ಸಾರೋ ತ್ರಿಡಿ ಪೋಸ್ಟರ್ ಅನ್ನ ಹೊರ ಬಿಟ್ಟಿತ್ತು ವಿಕ್ರಾಂತ್ ರೋಣ ಟೀಮ್.. ಆ ಪೊಸ್ಟರ್ನಲ್ಲಿ ಕಿಚ್ಚ ಸುದೀಪ್ ಅವರ ಪಕ್ಕ ನಿಂತು ಮಧ್ಯಪಾವನ್ನ ಹಂಚೋ ಹರಡೋ ಮತ್ತೇರಿಸೋ ಮೋಹನಾಂಗಿಯಾಗಿ ಗಡಂಗ್ ರಕ್ಕಮ್ಮಳಾಗಿ ಜಾಕ್ಲಿ ಝಗಮಗಿಸಿದ್ರು.. ಈಗ ಈ ತ್ರಿಡಿ ಪೋಸ್ಟರ್ ಈ ನಯಾ ನ್ಯೂಸ್ ಪೇಪರ್ ಪೋಸ್ಟರ್ ಹೊಸ ರೂಪವನ್ನ ಕೊಡ್ತಿದೆ..

blank

ಆಗಸ್ಟ್ 11 -1948ರ ರಾಕ್ವಿಲ್ ಡಿ ಕೊಸ್ಟಾ ಅಲಿಯಾಸ್ ಗಡಂಗ್ ರಕ್ಕಮಗೂ ವಿಕ್ರಾಂತ್ ರೋಣನಿಗೂ ಎತ್ತಿದೆತ್ತ ಸಂಬಂಧ..? ಲಿಕ್ಕರ್ ಮಾಫಿಯಾ ಮಲ್ಡರ್ ಮಿಸ್ಟ್ರಿಯಲ್ಲಿ ರಾಕ್ವಿಲ್ ಡಿ ಕೊಸ್ಟಾ ಎನ್ ಆದ್ಲು.. ಈ ಲಿಕ್ಕರ್ ಮಾಫಿಯಾವನ್ನ ಮರ್ಡರ್ ಮಿಸ್ಟ್ರಿಯನ್ನ ಕಂಡುಹಿಡಿಯಲು ಹೋದವರಿಗೆ ಏನಾಗುತ್ತೆ.. ಈ ಸಾವಿನ ರಹಸ್ಯವನ್ನ ವಿಕ್ರಾಂತ್ ರೋಣನ ಕಂಡುಹಿಡಿಯುತ್ತಾನಾ..? ಗಡಂಗ್ ರಕ್ಕಮ್ಮ ಅಲಿನಾ ಅಥ್ವಾ ಕಾಣದ ಮಾಯೆನಾ..? ಈ ರೀತಿಯ ಇರಬಹುದಾ ಅನ್ನೋ ಅಂದದ ಅಂದಾಜು ವಿಕ್ರಾಂತ್ ರೋಣ ಜಾಕ್ವೆಲಿನ್ ಬರ್ತ್​ಡೇ ಹೊರ ಬಂದಿರೋ ಪೋಸ್ಟರ್ ನೀಡುತ್ತಿದೆ.. ಒಟ್ಟಿನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ದಿನದಿಂದ ದಿನಕ್ಕೆ ಸಿನಿ ಮಾರುಕಟ್ಟೆಯಲ್ಲಿ ಮಾರ್ಬಲ್ ಆಗಿ ಮೇರವಣಿಗೆ ಮಾಡುತ್ತಿದೆ..

Source: newsfirstlive.com Source link