ತಾಲಿಬಾನಿಗಳ ಅಟ್ಟಹಾಸ; ಅಫ್ಘಾನಿಸ್ತಾನಕ್ಕೆ ಭಾರತ ಕೊಟ್ಟಿದ್ದ ಹೆಲಿಕಾಪ್ಟರ್ ವಶಕ್ಕೆ ಪಡೆದ ಉಗ್ರರು

ತಾಲಿಬಾನಿಗಳ ಅಟ್ಟಹಾಸ; ಅಫ್ಘಾನಿಸ್ತಾನಕ್ಕೆ ಭಾರತ ಕೊಟ್ಟಿದ್ದ ಹೆಲಿಕಾಪ್ಟರ್ ವಶಕ್ಕೆ ಪಡೆದ ಉಗ್ರರು

ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದೆ. ಪ್ರತಿನಿತ್ಯ ತಾಲಿಬಾನಿಗಳು ಅಫ್ಗಾನ್​ನ ಒಂದೊಂದೇ ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸರ್ಕಾರಿ ಸಂಸ್ಥೆಗಳನ್ನೂ ಸಹ ತಮ್ಮ ವಶಕ್ಕೆ ತೆಗೆದುಕೊಳ್ತಿದ್ದಾರೆ. ಇದೀಗ 2019 ರಲ್ಲಿ ಭಾರತ ಸರ್ಕಾರ ಅಫ್ಗಾನಿಸ್ತಾನಕ್ಕೆ ಉಡುಗೊರೆಯಾಗಿ ನೀಡಿದ್ದ MI-24 ಅಟ್ಯಾಕ್ ಹೆಲಿಕಾಪ್ಟರ್​ನ್ನು ತಾಲಿಬಾನಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ ಉಗ್ರರು ಹೆಲಿಕಾಪ್ಟರ್​ನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ವಿಡಿಯೋವೊಂದನ್ನೂ ತಾಲಿಬಾನಿಗಳು ರಿಲೀಸ್ ಮಾಡಿದ್ದಾರೆ.

ಇನ್ನು ಕೆಲವು ಫೋಟೋಗಳನ್ನೂ ಸಹ ತಾಲಿಬಾನಿಗಳು ರಿಲೀಸ್ ಮಾಡಿದ್ದು ಭಾರತ ಉಡುಗೊರೆಯಾಗಿ ನೀಡಿದ ಹೆಲಿಕಾಪ್ಟರ್​ ಮುಂದೆ ತಾಲಿಬಾನಿಗಳು ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. 2019 ರಲ್ಲಿ ಭಾರತೀಯ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಈ ಹೆಲಿಕಾಪ್ಟರ್​ನ್ನು ಅಫ್ಗಾನ್ ಸರ್ಕಾರಕ್ಕೆ ಹಸ್ತಾಂತರಿಸಿದ್ದರು.

blank

ಇನ್ನು ಅಫ್ಗಾನ್​ನಲ್ಲಿ ಉಗ್ರರ ಉಪಟಳ ಹೆಚ್ಚಾದ ಬೆನ್ನಲ್ಲೇ ಅಫ್ಗಾನ್​ನಲ್ಲಿ ವಾಸವಿರುವ ಮತ್ತು ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿರುವ ಭಾರತೀಯರಿಗೆ ತಕ್ಷಣವೇ ಭಾರತಕ್ಕೆ ವಾಪಸ್ಸಾಗುವಂತೆ ನಿನ್ನೆ ಅಫ್ಗಾನ್​ನಲ್ಲಿರುವ ಭಾರತದ ರಾಯಭಾರಿ ಕಚೇರಿ ಹೇಳಿದೆ. ವಾಣಿಜ್ಯ ವಿಮಾನಗಳು ಭಾರತ- ಅಫ್ಗಾನ್ ಮಧ್ಯೆ ಸಂಚರಿಸುತ್ತಿದ್ದು ಈ ಸಂಚಾರ ನಿರ್ಬಂಧಗೊಳ್ಳುವುದರೊಳಗೆ ಎಲ್ಲರೂ ಭಾರತಕ್ಕೆ ವಾಪಸ್ ಆಗಿ ಎಂದು ರಾಯಭಾರಿ ಕಚೇರಿ ಹೇಳಿದೆ.

blank

ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ; ಭಾರತೀಯರಿಗೆ ತತ್​ಕ್ಷಣವೇ ಅಫ್ಘಾನ್​ ತೊರೆಯುವಂತೆ ರಾಯಭಾರಿ ಕಚೇರಿ ಸೂಚನೆ

ಈ ಹಿಂದೆ ಅಮೆರಿಕಾ ಸರ್ಕಾರ ಅಫ್ಗಾನ್​ನಲ್ಲಿ ತನ್ನ ಬೃಹತ್ ಸೇನೆಯನ್ನ ನಿಯೋಜಿಸಿತ್ತು. ದಶಕಗಳ ನಂತರ ಇತ್ತೀಚೆಗೆ ತನ್ನ ಸೇನೆಯನ್ನ ಅಮೆರಿಕಾ ಸೇನೆ ವಾಪಸ್ ಪಡೆದುಕೊಳ್ತು. ಹೀಗೆ ಸೇನೆ ವಾಪಸ್ ಕರೆಸಿಕೊಂಡ ಬೆನ್ನಲ್ಲೇ ಅಫ್ಗಾನ್​ನಲ್ಲಿ ತಾಲಿಬಾನಿಗಳು ತಮ್ಮ ಪರಾಕ್ರಮ ಮೆರೆಯುತ್ತಿದ್ದಾರೆ. ಇಡೀ ದೇಶದ ಬಹುತೇಕ ಭಾಗವನ್ನು ವಶಪಡಿಸಿಕೊಂಡಿದ್ದಾರೆ. ಈ ವಿಚಾರವಾಗಿ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ ಅಮೆರಿಕಾ ಅಧ್ಯಕ್ಷ ಬಿಡೆನ್.. ಈಗಲೂ ನಮ್ಮ ಸರ್ಕಾರ ಸೇನೆ ವಾಪಸ್ ಕರೆಸಿಕೊಂಡ ನಿರ್ಧಾರಕ್ಕೆ ನಾನು ಬಧ್ಧನಾಗಿದ್ದೇನೆ ಎಂದಿದ್ದಾರೆ.

Source: newsfirstlive.com Source link