ಎಲ್ಲೆಡೆ 3ನೇ ಅಲೆ ಭೀತಿ; ರಾಜ್ಯದಲ್ಲಿ ಶೇ.100 ಥಿಯೇಟರ್​​ ಓಪನ್​ ಮಾಡುವಂತೆ ಸಿಎಂ ಮೇಲೆ ಒತ್ತಡ

ಎಲ್ಲೆಡೆ 3ನೇ ಅಲೆ ಭೀತಿ; ರಾಜ್ಯದಲ್ಲಿ ಶೇ.100 ಥಿಯೇಟರ್​​ ಓಪನ್​ ಮಾಡುವಂತೆ ಸಿಎಂ ಮೇಲೆ ಒತ್ತಡ

ಬೆಂಗಳೂರು: ಕೊರೊನಾ ಸೋಂಕು ಇನ್ನೂ ಸಂಪೂರ್ಣ ಹಿಡಿತಕ್ಕೆ ಬಂದಿಲ್ಲ. ಇಂದಿಗೂ ರಾಜ್ಯವೂ ಸೇರಿದಂತೆ ದೇಶಾದ್ಯಂತ ಸಾಕಷ್ಟು ಸೋಂಕು ಪತ್ತೆಯಾಗುತ್ತಲೇ ಇದೆ. ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ತಜ್ಞರ ಸಮಿತಿ 3 ನೇ ಅಲೆ ತಡೆಯೋದು ಹೇಗೆ? ಅನ್ನೋ ಚಿಂತನೆಯಲ್ಲಿ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿವೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಬಂದರೆ ಏನು ಗತಿ? ಅಂತಾ ಪೋಷಕ ವರ್ಗ ಚಿಂತೆಯಲ್ಲಿದೆ. ಈ ನಡುವೆ ಏಕಕಲಾದಲ್ಲಿ ನೂರಾರು ಜನರು ಸರಿಯಾಗಿ ಗಾಳಿಯೇ ಆಡದ, ವೆಂಟಿಲೇಷನ್ ಇಲ್ಲದ.. ಕತ್ತಲೆಯಲ್ಲಿಯೇ ಕುಳಿತು ಚಿತ್ರ ನೋಡುವಂಥ ಚಿತ್ರಮಂದಿರಗಳನ್ನು ಓಪನ್ ಮಾಡಿ ಅಂತ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಬಿ.ಎಸ್ ಬೊಮ್ಮಾಯಿ ಮೇಲೆ ಒತ್ತಡ ಹೇರುವಲ್ಲಿ ನಿರತವಾಗಿದೆ.

blank

ಹೌದು,  ಕೊರೊನಾ ಬಿಕ್ಕಟ್ಟಿನಿಂದ ಹಲವಾರು ತಿಂಗಳುಗಳಿಂದ ಚಿತ್ರ ಮಂದಿರಗಳ ಬಾಗಿಲು ಮುಚ್ಚಿದ್ದು, ಕಲಾವಿದರು, ಚಿತ್ರ ಮಂದಿರದ ಮಾಲೀಕರು ಸೇರಿದಂತೆ ಚಲನಚಿತ್ರ ಕಾರ್ಮಿಕರು ಸಾಕಷ್ಟು ತೊಂದದರೆಯಲ್ಲಿದ್ದು, ಶೀಘ್ರವಾಗಿ ಸಂಪೂರ್ಣ ಆಸನ ಸಾಮರ್ಥ್ಯ ಥಿಯೇಟರ್ ತೆರೆಯಲು ಅನುವು ಮಾಡಿಕೊಡಬೇಕೆಂದು ಫಿಲ್ಮ್ ಚೇಂಬರ್ ಮುಖಂಡರು ಸಿಎಂಗೆ ಮನವಿ ಮಾಡಿದ್ದಾರೆ.

ಲಾಭ-ನಷ್ಟದ ಲೆಕ್ಕಾಚಾರ: 

ಕೊರೋನಾದಿಂದ ಸಿನಿಮಾ ಕ್ಷೇತ್ರ ಭಾರಿ ನಷ್ಟದಲ್ಲಿದ್ದು, ಸದ್ಯ ಈ ನಷ್ಟ ಸರಿದೂಗಬೇಕಾದ್ರೆ ಸಿನಿಮಾ ಥಿಯೇಟರ್ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದಿರುವ ಚಲಚಿತ್ರ ವಾಣಿಜ್ಯ ಮಂಡಳಿ ಮುಖಂಡರು. ಇವಾಗ ಇರುವ ಆಸನ ಸಾಮರ್ಥ್ಯ ಶೇ.50 ರಷ್ಟನ್ನು ಶೇಕಡಾ 100ರಷ್ಟು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಹೈ ಬಜೆಟ್ ಸಿನಿಮಾ ಬಂದ್ರೆ ಲೋ ಬಜೆಟ್ ಸಿನಿಮಾ ಗಳಿಗೆ ಅನುಕೂಲ ಆಗುತ್ತೆ ಎಂದಿರುವ ಮಂಡಳಿ, ಆದಷ್ಟು ಬೇಗ ಶೇ.100ರಷ್ಟು ಸಿನಿಮಾ ಮಂದಿರವನ್ನು ತರೆಯಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.

ಇನ್ನು ವಾಣಿಜ್ಯ ಮಂಡಳಿಯ ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಸದ್ಯದ ಪರಿಸ್ಥಿತಿ ಅವಲೋಕಿಸಿ, ತಜ್ಞರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವದಾಗಿ ಹೇಳಿದ್ದು, ಸದ್ಯಕ್ಕೆ ಇರುವ ನಿಯಮಗಳೇ ಮುಂದುವರೆಯಲಿವೆ ಎಂದಿದ್ದಾರೆ. ಇನ್ನು ನಾಳೆ ನಾನು ರಾಜ್ಯದ ಗಡಿ ಭಾಗಗಳಲ್ಲಿ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿಯ ಕೋವಿಡ್​ ಪರಿಸ್ಥಿತಿ ನೋಡಿಕೊಂಡು ಕೊವೀಡ್ ಪರಿಣಿತರ ಜೊತೆ ಚರ್ಚಿಸಿ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ ಎಂದು ನ್ಯೂಸ್​ ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link