ಹಾಕಿಯಲ್ಲಿ ಸಾಧನೆ – ಕೊಡಗಿನಲ್ಲಿ ಅಂಕಿತಾ ಸುರೇಶ್‍ಗೆ ಅದ್ಧೂರಿ ಸ್ವಾಗತ

ಮಡಿಕೇರಿ: ಭಾರತದ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಅಂಕಿತಾ ಸುರೇಶ್ ಅವರನ್ನು ಅದ್ಧೂರಿಯಾಗಿ ಜನತೆ ಸ್ವಾಗತಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಉತ್ತಮವಾಗಿ ಆಡಿ ಭಾರತ ತಂಡ ನಾಲ್ಕನೇಯ ಸ್ಥಾನ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದೆ. ಈ ಸಾಧನೆಯ ಹಿಂದೆ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅಂಕಿತಾ ಸುರೇಶ್ ಅವರ ಹಾಕಿ ಕೈಚಳಕ ಕೂಡ ಪ್ರಮುಖ ಪಾತ್ರವಹಿಸಿದೆ.

ಈ ಹಿನ್ನೆಲೆಯಲ್ಲಿ ಅಂಕಿತಾ ನಮ್ಮ ಮನೆಯ ಮಗಳೆಂಬ ಅಭಿಮಾನದಿಂದ ಕುಶಾಲನಗರ ಸುಂಟಿಕೊಪ್ಪ ಕಂಬಿಬಾಣೆ ನಾಗರಿಕರು ಇಂದು ಒಲಿಂಪಿಕ್ಸ್ ಕ್ರೀಡಾಕೂಟದಿಂದ ತವರಿಗೆ ಹಿಂತಿರುಗಿದ ಅಂಕಿತಾ ಸುರೇಶ್ ಹಾಗೂ ಅವರ ಪತಿ ಸುರೇಶ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡರು.  ಇದನ್ನೂ ಓದಿ: ಕ್ರೀಡೆಯಲ್ಲಿ ಅಲ್ಲ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’

ಈ ವೇಳೆ ಮಾತಾನಾಡಿದ ಅಂಕಿತಾ ಸುರೇಶ್ ಅವರು, ಹಾಕಿ ತಂಡಕ್ಕೆ ಆಯ್ಕೆಯಾಗಿದ್ದು ಒಮ್ಮೆಲೇ ಆಶ್ಚರ್ಯಗೊಂಡಿತ್ತು. ಹಾಕಿಯಲ್ಲಿ ಬಲಿಷ್ಠ ಎಂಬುದನ್ನು ಇಡೀ ಪ್ರಪಂಚಕ್ಕೆ ಭಾರತ ತೋರಿಸಿಕೊಟ್ಟಿದೆ ಎಂದರು.

ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರಮೋದಿ ಅವರು ಕರೆ ಮಾಡಿ ಪ್ರೋತ್ಸಾಹಿಸಿದ್ದು ತಂಡಕ್ಕೆ ಇನ್ನಷ್ಟು ಹುಮ್ಮಸ್ಸು ತುಂಬಿತು. ಪದಕ ಗೆಲ್ಲಲು ಸಾಧ್ಯವಾಗದೇ ಇದ್ದರೂ ರಾಷ್ಟ್ರದ ಹೆಸರನ್ನು ಉಳಿಸಿದ ಹೆಮ್ಮೆ ನಮಗಿದೆ. ಕೊಡಗಿನ ಹೆಬ್ಬಾಗಿಲಿನಿಂದ ಸುಂಟಿಕೊಪ್ಪದವರೆಗೆ ಅದ್ಧೂರಿ ಸ್ವಾಗತ ಕೋರಿರುವುದು ಮರೆಯಲಾರದ ಕ್ಷಣ. ಅಷ್ಟೇ ಅಲ್ಲದೇ ಸಣ್ಣ ವಯಸ್ಸಿನಿಂದ ಕಷ್ಟ ಪಟ್ಟು ಬೆಳೆದು ಈಗ ಈ ಸ್ಥಾನಕ್ಕೆ ಹೋಗಿ ಬಂದಿರುವುದು ನಿಜವಾಗಿಯೂ ಸಂತೋಷದ ವಿಷಯ ಎಂದು ಸಂತಸ ಹಂಚಿಕೊಡರು.

Source: publictv.in Source link