ವಂದೇ ಮಾತರಂ ಎಂದು ಹಾಡಿದ ಟೈಗರ್​ ಶ್ರಾಫ್​.. ಕೇಳಲು ಹಿತವಾಗಿದೆ ಅಂದ್ರು A.R​ ರೆಹಮಾನ್​

ವಂದೇ ಮಾತರಂ ಎಂದು ಹಾಡಿದ ಟೈಗರ್​ ಶ್ರಾಫ್​.. ಕೇಳಲು ಹಿತವಾಗಿದೆ ಅಂದ್ರು A.R​ ರೆಹಮಾನ್​

ಸ್ವಾಂತಂತ್ರ್ಯ ದಿನಾಚರಣೆಗೆ ಇನ್ನೇನ್​ 4 ದಿನ ಇದೆ. ಈಗಾಗ್ಲೆ ಅದೆಷ್ಟೋ ಹಾಡುಗಾರರು, ಬರಹಗಾರರು, ಭಾರತ ಮಾತೆಯ ಕುರಿತು ಹಾಡುಗಳನ್ನ ಹಾಡೋದು, ಬರೆಯೋದು, ನೃತ್ಯ ಮಾಡೋದು ಎಲ್ಲವನ್ನೂ ಪ್ರಿಪೇರ್​ ಮಾಡಿಕೊಳ್ತಿದ್ದಾರೆ. ಇದೇ ವೇಳೆ, ಬಾಲಿವುಡ್​​ ಹ್ಯಾಂಡ್ಸಮ್ ಹಂಕ್ ಟೈಗರ್​ ಶ್ರಾಫ್ ಇದೇ ಮೊದಲ ಬಾರಿ ಹಾಡಿರುವ ಹಾಡೊಂದನ್ನ ಹರಿಬಿಟ್ಟಿದ್ದಾರೆ. ಈ ಹಾಡು ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಮನಸ್ಸನ್ನು ಸೂರೆಗೊಂಡಿದೆ.

blank

ವಂದೇ ಮಾತರಂ ಅನ್ನೋ ಸಾಂಗ್ ಕೇಳಿದ್ರೆ ಸಾಕು, ಮಾ.. ತುಝೆ ಸಲಾಂ.. ವಂದೇ ಮಾತರಂ ಅನ್ನೋ ಹಾಡು ಗುಂಯಿಗುಡುತ್ತೆ. ಅದರ ಸೃಷ್ಟಿಕರ್ತ ಎ.ಆರ್ ರೆಹಮಾನ್ ಹಾಡಿನ ಶೈಲಿ ನೆನಪಾಗುತ್ತೆ. ಆದ್ರೆ.. ಅದೇ ಸಂಗೀತ ಮಾಂತ್ರಿಕ ಈಗ ಟೈಗರ್ ಶ್ರಾಫ್ ಹಾಡಿರೋ ವಂದೇ ಮಾತರಂ ಹಾಡನ್ನ ಮನಸಾರೆ ಇಷ್ಟ ಪಟ್ಟಿದ್ದಾರೆ.

ಎ.ಆರ್​ ರೆಹಮಾನ್​ರ ಹಾಡುಗಳು ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ? ಅದ್ರಲ್ಲೂ ಒಂದೇ ಮಾತರಂ ಹಾಡು ನಮ್ಮ ದೇಶ ಅಲ್ಲದೇ, ಬೇರೆ ದೇಶದವ್ರು ಈ ಹಾಡನ್ನ ತುಂಬಾ ಇಷ್ಟ ಪಟ್ಟಿರೋದು ಇದೆ. ಈಗ, ಟೈಗರ್​ ಶ್ರಾಫ್​ರವರು ಒಂದೇ ಮಾತರಂ ಹಾಡನ್ನ ಹಾಡಿದ್ದಾರೆ. ಇದಕ್ಕೆ ರೆಮೋ ಡಿಸೋಜಾ ನಿರ್ದೇಶನವಿದೆ. ಇನ್ನು ದೇಶದ ಪ್ರತಿಯೊಬ್ಬ ಯೋಧರಿಗೂ ನಾವು ಎಂದೆಂದು ಕೃತಜ್ಞತೆಗಳನ್ನ ಸಲ್ಲಿಸುತ್ತೀವಿ ಅಂತ ಹೇಳುತ್ತಾ ಈ ಹಾಡನ್ನ ಹಾಡಿದ್ದಾರೆ. ಇನ್ನೂ, ಈ ಹಾಡಿನ ಲಿಂಕ್​ ಅನ್ನ ಖುದ್ದು ರೆಹಮಾನ್​ರವರೇ ಟ್ವೀಟ್​ ಮಾಡಿದ್ದು, ‘‘ಟೈಗರ್​ ಶ್ರಾಫ್​ ನಿಮ್ಮಲ್ಲಿ ಒಬ್ಬ ಎನರ್ಜಿಕ್​​ ಸಿಂಗರ್​ನ ಹುಡುಕಿದ್ದೀವಿ.. ಕೇಳಲು ತುಂಬಾ ಹಿತವಾಗಿದೆ’‘ ಅಂತ ಟ್ವೀಟ್​ ಮಾಡಿದ್ದಾರೆ.

 

Source: newsfirstlive.com Source link