ಶೂಟಿಂಗ್​ ವೇಳೆ ಫೈಟರ್ ವಿವೇಕ್ ಸಾವು; ‘ಲವ್​ಯೂ ರಚ್ಚು’ ಚಿತ್ರತಂಡದಿಂದ 10 ಲಕ್ಷ ಪರಿಹಾರ ಘೋಷಣೆ

ಶೂಟಿಂಗ್​ ವೇಳೆ ಫೈಟರ್ ವಿವೇಕ್ ಸಾವು; ‘ಲವ್​ಯೂ ರಚ್ಚು’ ಚಿತ್ರತಂಡದಿಂದ 10 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರೆ ರಂಜಿತ್ ಎಂಬ ಸಹಾಯಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಚಿತ್ರತಂಡದ ಇಂದು ಸುದ್ದಿಗೋಷ್ಠಿ ನಡೆಸಿತು. ಸುದ್ದಿಗೋಷ್ಠಿಯಲ್ಲಿ ಗುರುದೇಶ್ ಪಾಂಡೆ ಪತ್ನಿ ಪ್ರಿತೀಕಾ ದೇಶ್ ಪಾಂಡೆ, ಜಿ ಸಿನಿಮಾ ಅಕಾಡೆಮಿ ಪರ ವಕೀಲ ನಾಗಭೂಷಣ್, ಹಾಗೂ ಗುರು ದೇಶ್ ಪಾಂಡೆ ಪರ ವಕೀಲ ಕೆಂಪೇಗೌಡ ಉಪಸ್ಥಿತರಿದ್ದರು.

blank

ಲಾಯರ್​ಗೆ ಮೇಲ್ ಮೂಲಕ ಗುರು ದೇಶ್ ಪಾಂಡೆ ವಿವೇಕ್​ ಕುಟುಂಬಕ್ಕೆ 10 ಲಕ್ಷ ಪರಿಹಾರದ ಬಗ್ಗೆ ತಿಳಿಸಿದ್ದಾರೆ ಎಂದು ಗುರು ದೇಶ್ ಪಾಂಡೆ ಪತ್ನಿ ಹೇಳಿದರು. ಇವತ್ತು 5 ಲಕ್ಷ ಪರಿಹಾರ ಕೊಡ್ತಿದ್ದೀವಿ.. ಗುರು ದೇಶ್ ಪಾಂಡೆ ಅವರಿಗೆ ಜಾಮೀನು ಆದ ನಂತ್ರ ಉಳಿದ 5ಲಕ್ಷ ಕೊಡ್ತಾರೆ ಎಂದರು.

ಇದನ್ನೂ ಓದಿ: ಮನೆ ಮಂದಿಯ ಮುಗಿಲು ಮುಟ್ಟಿದ ಆಕ್ರಂದನ; ಪಂಚಭೂತಗಳಲ್ಲಿ ಲೀನನಾದ ಫೈಟರ್ ವಿವೇಕ್

ಜಿ ಸಿನಿಮಾಸ್ ಪರ ವಕೀಲ ನಾಗಭೂಷಣ್ ಮಾತನಾಡಿ.. ನಿನ್ನೆಯೇ ಈ ವಿಚಾರವಾಗಿ ವಿವೇಕ್ ಅವ್ರ ಚಿಕ್ಕಪ್ಪ ಜೊತೆ ಮಾತನಾಡಿದ್ದೇವೆ. ನಿನ್ನೆ ಕಾರ್ಯಕ್ಕೆ ಜಿ ಸಿನಿಮಾಸ್ ಕಡೆಯಿಂದ ಒಂದಷ್ಟು ಹಣಕಾಸಿನ ನೆರವು ನೀಡಿದ್ದೇವೆ ಎಂದರು. ವಿದ್ಯುತ್ ಅವಘಡದಲ್ಲಿ ಪೆಟ್ಟು ತಿಂದಿದ್ದ ರಂಜಿತ್ ಅವರ ಅಸ್ಪತ್ರೆಯ ಎಲ್ಲಾ ವೆಚ್ಚವನ್ನು ಜಿ ಸಿನಿಮಾಸ್ ಭರಿಸಲಿದೆ ಎಂದು ಪ್ರಿತೀಕಾ ದೇಶ್ ಪಾಂಡೆ ಇದೇ ವೇಳೆ ಹೇಳಿದರು. ವಿವೇಕ್ ಅವರ ತಾಯಿ ಉಮಾಜಿ ಹೆಸರಲ್ಲಿ ಪ್ರಿತೀಕಾ ದೇಶ್ ಪಾಂಡೆ ನೆರವಿನ ಚೆಕ್ ನೀಡಿದ್ದಾರೆ.

ಇದನ್ನೂ ಓದಿ: ಫೈಟರ್​​​ ವಿವೇಕ್​​​ ಅಂತಿಮ ದರ್ಶನದ ವೇಳೆ ಭಾವುಕರಾದ ನಟ ಅಜಯ್​​ ರಾವ್​​ ಹೇಳಿದ್ದೇನು?

Source: newsfirstlive.com Source link