ನಮಗೆ ಉಚಿತ ವಿದ್ಯುತ್‌ ಬೇಡ.. ಆದ್ರೆ ‘ಆ’ MLA ಬೇಕು ಅಂತಿದ್ದಾರೆ ಪಂಜಾಬ್ ಜನ; ಯಾಕೆ ಗೊತ್ತಾ?

ನಮಗೆ ಉಚಿತ ವಿದ್ಯುತ್‌ ಬೇಡ.. ಆದ್ರೆ ‘ಆ’ MLA ಬೇಕು ಅಂತಿದ್ದಾರೆ ಪಂಜಾಬ್ ಜನ; ಯಾಕೆ ಗೊತ್ತಾ?

ನಮ್ಮ ನಾಯಕ ಮುದ್ದು ಮುಖದ ಚೋರ. ಅವನನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಹೀಗೆ ಹೇಳುತ್ತಿರುವವರು ದೆಹಲಿಯ ಪ್ರಜೆಗಳು. ದೆಹಲಿ ರಾಜಿಂದರ್ ನಗರ ಕ್ಷೇತ್ರದ ಶಾಸಕ ಇವರು. ಆದ್ರೆ ಇವರಿಗೆ ದೆಹಲಿಯಲ್ಲಿ ಮಾತ್ರವಲ್ಲ.. ಭಾರತದ ಹಲವಾರು ಕನ್ಯಾಮಣಿಗಳು ಫಿದಾ ಆಗಿದ್ದಾರೆ. ಇವರ ನೋಟಕ್ಕೆ, ಭಾಷಣದ ಕಂಠಕ್ಕೆ ಮಹಿಳೆಯರು ಕಂಪ್ಲೀಟ್ ಬೋಲ್ಡ್‌ ಆಗಿದ್ದಾರೆ.

ಆ ಒಬ್ಬ ನಾಯಕನಿಗಾಗಿ ಇವತ್ತು ಅದೆಷ್ಟೋ ಹುಡುಗಿಯರು ಕಾದು ಕುಳಿತಿದ್ದಾರೆ.. ನೀನೆ ಬೇಕು ನೀನೇ ಬೇಕು, ಜೀವನದಲ್ಲಿ ಇನ್ನೇನು ಬೇಡವೇ ಬೇಡಾ ಅಂತಾ ಹೇಳಿಕೊಂಡು ಅಡ್ಡಾಡುತ್ತಿದ್ರು. ಈತ ಹುಟ್ಟಿದ್ದು ಬೆಳದಿದ್ದು ಒಂದು ಕಡೆ ಆದ್ರೆ ಇವತ್ತು ಇಡೀ ದೇಶದಲ್ಲಿರೋ ಕನ್ಯಾಮಣಿಯರು ಆ ಒಬ್ಬ ನಾಯಕನ ಹಿಂದೆ ಬಿದ್ದಿದೆ ಅಂದ್ರೆ ತಪ್ಪಾಗಲ್ಲ. ಯಾಕೆಂದ್ರೆ ಸಿನಿಮಾದಲ್ಲಿ ಹೀರೋ, ಜನ ನಾಯಕನಾಗಿ ಕಂಡರೇ ಹೇಗಾಗುತ್ತೋ ಹಾಗೆ ಇವರನ್ನು ಕಂಡರೆ ಆಡ್ತಾ ಇದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಮಹಿಳಾಮಣಿಗಳು ತಮ್ಮ ಪ್ರೇಮ ನಿವೇದನೆಯನ್ನ ಬಹಿರಂಗವಾಗಿಯೇ ಹೇಳಿಕೊಳ್ಳೋ ಮೂಲಕ ಸುದ್ದಿಯಾಗುತ್ತಿದ್ದಾರೆ. ಹಾಗಾದ್ರೆ ಆ ನಾಯಕ ಯಾರು?

blank

 

ಇವರನ್ನು ಚೆನ್ನಾಗಿ ನೋಡ್ಕೊಂಡ್ ಬಿಡಿ.. ಹಾಲಿನ ಬಣ್ಣ, ಹೊಳೆಯುವ ಕಣ್ಣುಗಳು, ಡಿಂಪಲ್ ಮುಗುಳುನಗೆ, ದೃಷ್ಟಿ ಬೀಳಬಾರದಂತೆ .., ಕೆನ್ನೆ ಮೇಲೆ ಹುಟ್ಟು ಮಚ್ಚೆ.. ಇದರ ಮೇಲೆ ಭಾಷಣದಲ್ಲಿ ಎದುರಾಳಿಗಳನ್ನು ಮೌನವಾಗಿಸಬಲ್ಲ ಕಂಠ. ಇವರನ್ನು ನೋಡ್ತಾ ಇದ್ರೆ ಒಂದು ಕಂಪ್ಲೀಟ್ ಜೆಂಟಲ್ ಮ್ಯಾನ್ ಪ್ಯಾಕೇಜ್. ಅವರ ಮುದ್ದು ಮುಖದಲ್ಲೂ ಗತ್ತಿದೆ., ತಿಳಿ ಕಣ್ಣುಗಳಲ್ಲ ಕೆಲಸ ಮಾಡಿಸುವ ತಾಕತ್ತು ಇದೆ. ಅಷ್ಟಕ್ಕೂ ಇವರು ಯಾರು ಗೊತ್ತಾ ? ನಮ್ಮ ದೇಶದ ರಾಜಧಾನಿ ದೆಹಲಿಯ ಆಮ್ ಆದ್ಮಿ ಪಾರ್ಟಿಯ ಶಾಸಕರು. ಹೆಸರು ರಾಘವ್ ಚಡ್ಡಾ. ನೋಡಲು ಬಾಲಿವುಡ್ ಸಿನಿಮಾ ನಟನ ರೀತಿ ಕಾಣ್ತಾರೆ. ಆದ್ರೆ ಇವರು ಜನ ಪ್ರತಿನಿಧಿ.

ನಿಮಗೆಲ್ಲರಿಗೂ ಅನಿಲ್ ಕಪೂರ್ ನಟಿಸಿರುವ ನಾಯಕ್ ಸಿನಿಮಾ ನೆನೆಪಿದ್ಯಾ ? ಒಬ್ಬ ನಾಯಕ, ಲೀಡರ್ ಹೇಗಿರ ಬೇಕು, ಅವನ ಕೆಲಸಗಳೇನು ಅನ್ನೋದನ್ನು ಎಳೆ ಎಳೆಯಾಗಿ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಆ ಸಿನಿಮೀಯ ಲೀಡರ್ ನ ತದ್ರೂಪವೇ ರಾಘವ್ ಚಡ್ಡಾ ಎಂದರೇ ತಪ್ಪಾಗೋದಿಲ್ಲ. ಇವರು ಸ್ಪಾರ್ಟ್. ಬ್ರಿಲಿಯಂಟ್, ಹಾಗೂ ಹ್ಯಾಂಡ್ ಸಮ್ ಲೀಡರ್.

ರಾಘವ್ ನೋಡಲು ಚೆಲುವ.., ಹುಡಿಗಿಯರ ಮನಸ್ಸನ್ನು ಕದಿಯಬಲ್ಲ ಚೋರ.. ಕೆಲಸ ಏನು ಮಾಡಲ್ಲಾ ಅನ್ನಿಸುತ್ತೆ, ಅಂತ ಅನುಮಾನವೇ ಬೇಡ. ಇವರು ಕಾಲಿಟ್ಟ ಜಾಗದಲ್ಲೆಲ್ಲ ಯಶಸ್ವಿಯಾಗಿ ಹೊರ ಬಂದಿದ್ದಾರೆ. ಎಲ್ಲ ಕೆಲಸವನ್ನು ಖದ್ದಾಗಿ ಇವರೇ ನಿಂತು ನಿರ್ವಹಿಸುತ್ತಾರೆ. ಕೋಪ ಬಂದರೇ ಅಧಿಕಾರ ಚಲಾಯಿಸುತ್ತಾರೆ, ಪ್ರೀತಿಯಿಂದ ಜನಗಳ ಮನವನ್ನು ಗೆಲ್ಲುತ್ತಾರೆ. ಎಲ್ಲ ವಿಷಯವನ್ನು ನಿಧಾನವಾಗಿ ಆಲಿಸಿ ಕಷ್ಟ ಅಂತ ಎದುರಾದ್ರೇ ಒಳ್ಳೆಯ ಮಾರ್ಗವನ್ನು ಸೂಚಿಸಿ ಬಿಡ್ತಾರೆ ರಾಘವ್.

blank

ಇಷ್ಟೆ ಅಲ್ಲ ಅಭಿಮಾನಿಗಳ ತರ್ಲೇ ಟ್ವೀಟ್ ಗಳಿಗೆ ತರ್ಲೇ ರಿಪ್ಲೇಗಳನ್ನು ಮಾಡಿ ಯಾವಾಗಲು ಜನರ ಸಂಪರ್ಕದಲ್ಲೇ ಇರ್ತಾರೆ. ಇವರ ಚೆಲುವು ಜೊತೆಗೆ ನಿಷ್ಠೆಯ ಕೆಲಸ ಸಧ್ಯಕ್ಕೆ ಇವರಿಗೆ ಒಳ್ಳೆಯ ಪ್ರಚಾರವನ್ನೆ ತಂದು ಕೊಡ್ತಾ ಇದೆ. ಇಂದು ಇವತ್ತು ಇವರು ಸುದ್ದಿ ಆಗಿರೋದು ಯಾಕೆ ಅನ್ನೋದನ್ನು ಕಂಪ್ಲೀಟಾಗಿ ಹೇಳ್ತಿವಿ.. ಅದಕ್ಕೂ ಮುಂಚೆ ಇವರ ಬಗ್ಗೆ ಸ್ಪಲ್ಪ ತಿಳಿದುಕೊಂಡು ಬಿಡೋಣ..

ಚೆಲುವ ರಾಘವ್ ಚಾರ್ಟೆಡ್ ಅಕೌಂಟೆಂಟ್ ಪದವೀಧರ
ಪೈಸಾ ಟು ಪೈಸಾ ಲೆಕ್ಕವಿಡುವ ಬ್ರಿಲಿಯಂಟ್ ಚಿತ್ತಚೋರ

ರಾಘವ್ ಚಡ್ಡಾರವರು ಹುಟ್ಟಿದ್ದು ನವೆಂಬರ್ 11 1988. ಹುಟ್ಟಿನಿಂದಲೂ ತುಂಬಾ ಬುದ್ದಿವಂತರು. ಈತ ದೆಹಲಿ ಶಾಲೆಗಳಲ್ಲೆ ತನ್ನ ವಿಧ್ಯಾಭ್ಯಾಸ ಮುಗಿಸಿ ಚಾರ್ಟೆಡ್ ಅಕೌಂಟೆಂಟ್ ಪದವಿಯನ್ನು ಓದಿ ಮುಗಿಸಿದವರು. ಇದರಿಂದ ಈತ ಲೆಕ್ಕದಲ್ಲಿ ಯಾವಾಗಲೂ ಪಕ್ಕ. ದೆಹಲಿ ಆಮ್ ಆದ್ಮಿ ಪಾರ್ಟಿಯಲ್ಲಿ ಚುನಾಯುತರಾದ ಶಾಸಕ ಇವರು. ಸರ್ಕಾರದಿಂದ ಸ್ಯಾಂಕ್ಷನ್ ಆದ ದುಡ್ಡು ಎಲ್ಲಿ ಹರಿಯುತ್ತಿದೆ., ಎಲ್ಲಿ ನಿಂತಿದೆ ಅನ್ನೋ ವರದಿಯನ್ನು ಪಿನ್ ಟು ಪಿನ್ ಹಿಡಿದಿಟ್ಟುಕೊಂಡಿದ್ದಾರೆ ಚಡ್ಡಾ.

ಎಲ್ಲಿಯಾದರು ಅವ್ಯವಹಾರ ನಡೆಯುತ್ತಿದೆ ಅನ್ನೋದು ಗೊತ್ತಾದ್ರೆ ಅಂತಹ ಸ್ಥಳಕ್ಕೆ ನೇರವಾಗಿ ಹೋಗಿ ಚರ್ಚೆ ಮಾಡಿ, ಜಗಳವಾಡಿ ಅಧಿಕಾರ ಚಲಾಯಿಸಿ ಕೆಲಸ ಮುಗ್ಸಿ ಬರ್ತಾರೆ. ಹಿಡಿದ ಕೆಲಸ ಮುಗಿಯುವ ತನಕ ಬಿಡಲ್ಲ ಅಂತಾರಲ್ಲ ಆ ಕ್ಯಾಟಗರಿ ರಾಘವ್ ಚಡ್ಡಾದು.

ಅಕೌಂಟೆಂಟ್ ಆಗಿದ್ದ ಚಡ್ಡಾ ರಾಜಕೀಯಕ್ಕೆ ಬಂದಿದ್ದು ಹೇಗೆ?
ಅಣ್ಣಾ ಹಜಾರೇ ಹೋರಾಟದಲ್ಲಿ ಭಾಗಿಯಾಗಿದ್ದ ರಾಘವ್

ರಾಘವ್ ಈ ಮುಂಚೆ ಪೊಲಿಟಿಕಲಿ ಆಕ್ಟೀವ್ ಆಗಿರಲಿಲ್ಲ. ಇವರು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ ಹೈಯರ್ ಎಡುಕೇಷನ್ ಮಾಡಿ ಕೆಲಸದಲ್ಲಿದ್ದರು. ದೇಶದಲ್ಲಿರೋ ಭ್ರಷ್ಟರ ವಿರುದ್ಧ ನಡೆದ ಬಹುದೊಡ್ಡ ಹೋರಾಟದಲ್ಲಿ ರಾಘವ್, ತಾನಾಗೆ ಅಣ್ಣ ಹಜಾರೆ ಅವರ ಪಕ್ಕದಲ್ಲಿ ನಿಂತು ಘೋಷಣೆಗಳನ್ನು ಕೂಗಿದ್ದರು. ಅಂದೆ ಮೊದಲ ಭಾರಿಗೆ ಅವರು ರಾಜಕೀಯವಾಗಿ, ಸಮಾಜದಲ್ಲಿ ನಡೆಯುತ್ತಿರುವ ತಪ್ಪುಗಳ ವಿರುದ್ಧ ದ್ವನಿ ಎತ್ತಿದ್ದು. ನಂತರ ಕೇಜ್ರೀವಾಲ್ ರವರ ಆಮ್ ಆದ್ಮಿ ಪಾರ್ಟಿಯಲ್ಲಿ ಸ್ಥಾನ ಪಡೆದು, ತನ್ನೆಲ್ಲ ವಿದ್ಯಾಭ್ಯಾಸದ ತಾಕತ್ತು ಅನ್ನು ದೇಶ ಹಾಗೂ ಪಾರ್ಟಿಯ ಬೆಳೆವಣೆಗೆಗೆ ಮುಡಿಪಾಗಿಟ್ಟರು.

blank

2015ರಲ್ಲಿ ಆಮ್ ಆದ್ಮಿ ಪಾರ್ಟಿಯ ಖಜಾಂಚಿಯಾದ ಚಡ್ಡಾ
2020ರ ಚುನಾವಣೆಯಲ್ಲಿ ರಾಜಿಂದ್ರನಗರದ ಶಾಸಕನಾಗಿ ಜಯಭೇರಿ

ಲಂಚ ವಿರೋಧಿ ಭಾರತ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕೇಜ್ರಿವಾಲ್ ಅ್ಯಂಡ್ ಟೀಂ 2015 ರಲ್ಲಿ ಬಹುಮತದಿಂದ ದೆಹಲಿ ಸರ್ಕಾರವನ್ನು ರಚಿಸಿತು. ಆ ಹೊತ್ತಿಗೆ ರಾಘವ್ ಕೇವಲ 26 ವರ್ಷದ ಯುವಕ. ಚಡ್ಡಾರವರ ಬುದ್ದಿವಂತಿಕೆಯನ್ನು ಮೆಚ್ಚಿದ್ದ ಕೇಜ್ರೀವಾಲ್, ಇವರಿಗೆ ಆಮ್ ಆದ್ಮಿ ಪಾರ್ಟಿಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸಲು ಹೇಳಿದ್ದರು. ಇದರಂತೆ ಯಶಸ್ವಿಯಾಗಿ ರಾಘವ್ ಚಡ್ಡಾ ಆಮ್ ಆದ್ಮಿ ಪಾರ್ಟಿಯ ಖಾಯಂ ಸಧಸ್ಯರಾದರು. ನಂತರದಲ್ಲಿ 2 ಎಲೆಕ್ಷನ್ ನಲ್ಲಿ ನಿಂತು ಸೋತು. 2020ರ ಚುನಾವಣೆಯಲ್ಲಿ ಬಹುಮತ ಸಾಧಿಸಿ, ಶಾಸಕರಾಗಿ ನೇಮಕವಾಗಿದ್ದಾರೆ ರಾಘವ್ ಈ ಮೂಲಕ ಆಮ್ ಆದ್ಮಿ ಪಾರ್ಟಿಯ ಕಿರಿಯ ಲೀಡರ್ ಆಗಿ ಚಡ್ಡಾ ನೇಮಕರಾಗಿದ್ದಾರೆ. ಇಷ್ಟೆ ಅಲ್ಲ ಇವರು ಪ್ರಸ್ತುತ ದೆಹಲಿ ಜಲ ಮಂಡಲಿಯ ಸಚಿವರು ಕೂಡ ಹೌದು.

ನ್ಯಾಯ ಬೆಲೆ ಅಂಗಡಿಗೆ ಏಕಾಏಕಿ ದಾಳಿ ನಡೆಸಿದ್ದ ರಾಘವ್
ಅಳತೆ ಹಾಗೂ ಗುಣ ಮಟ್ಟದ ಪರೀಕ್ಷೆ ಮಾಡಿ, ಎಚ್ಚರಿಕೆ

ಸಚಿವರಾದ ರಾಘವ್ ಚಡ್ಡಾ ಬಡವರಿಗೆ ಅಕ್ಕಿ ಹಂಚುವ ನ್ಯಾಯ ಬೆಲೆ ಅಂಗಡಿಗೆ ಏಕಾಏಕಿ ದಾಳಿ ಮಾಡಿದ್ದಾರೆ. ಅಲ್ಲಿನ ಸಿಬ್ಬಂದಿಯನ್ನು.. ಅಕ್ಕಿ ಎಷ್ಟು ಕೊಡ್ತಿರಾ ? ಬೇಳೆ ಎಷ್ಟು ಕೊಡ್ತೀರಾ? ಎಂದು ವಿಚಾರಿಸುತ್ತಾರೆ.. ಅಲ್ಲಿಂದ ಸೀದ ಒಳಗೆ ಹೋಗಿ, ಅಕ್ಕಿಯ ಗುಣಮಟ್ಟವನ್ನು ಪರಿಶೀಲಿಸಿ.. ಇಲ್ಲಿ ಬರುವ ಬಡವರಿಗೆ ಮೋಸ ಆಗಬಾರದು.., ಜನಗಳ ಜೊತೆ ದುರಹಂಕಾರದ ನಡೆಯನ್ನು ಕೈ ಬಿಡಿ.. ಅವರ ಮಾತಿಗೆ ಕೋ- ಆಪರೇಟ್ ಮಾಡಿ. ಒಂದು ವೇಳೆ ಗ್ರಾಹಕರ ಮೇಲೆ ಕೂಗಾಡಿದ್ದು ಕೇಳಿ ಬಂದರೆ ನಾನು ಸುಮ್ಮನೇ ಇರೋದಿಲ್ಲ ಎಂದು ಎಚ್ಚರಿಸಿದ್ದಾರೆ.

ನಂತರ ಆ ಅಂಗಡಿಯ ಮುಂಭಾಗದಲ್ಲಿ.. ಇಲ್ಲಿ ಮೋಸ ನಡೆಯುತ್ತಿದೆ ಎಂದು ಅನಿಸಿದರೇ ಕೂಡಲೇ ಈ ನಂಬರ್ ಗೆ ಕರೆ ಮಾಡಿ ಎಂದು ಬೋರ್ಡ್ ಗಳನ್ನು ಅಂಟಿಸಿದ್ದಾರೆ ಇದು ಕೇವಲ ಒಂದು ಅಂಗಡಿ ಮಾತ್ರವಲ್ಲ.. ದೆಹಲಿಯಲ್ಲಿ ಸಾಕಷ್ಟು ಅಂಗಡಿಗಳಿಗೆ ಖುದ್ಧು ರಾಘವ್ ಚಡ್ಡಾ ಬೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.

ಜಲ ಮಂಡಳಿ ಸಚಿವರಾಗಿ ಚಡ್ಡಾರ ಕೆಲಸ ಹೇಗಿದೆ ಗೊತ್ತಾ ?
ಕಂಪ್ಲೇಂಟ್ ಬಂದ್ರೆ ಕರೆ ಮಾಡ್ತಾರೆ, ಕೂಡಲೆ ಸಲಹೆ ನೀಡ್ತಾರೆ

ಚಡ್ಡಾರ ಈ ಒಂದು ವಿಡೋಯೊದಲ್ಲಿ ಇವರ ಕಾರ್ಯ ವೈಖರಿ ಅರ್ಥವಾಗಿ ಬಿಡುತ್ತೆ ನೋಡಿ. ಜಲ ಮಂಡಲಿ ಸಚಿವರಾಗಿ ಆಯ್ಕೆ ಆದಾಗಿನಿಂದ ಚಡ್ಡಾ ತನ್ನ ಕಾರ್ಯದಲ್ಲಿ ಸಂಪೂರ್ಣ ತೊಡಗಿದ್ದಾರೆ. ಜಲ ಮಂಡಲಿಯ ಕಛೇರಿಗೆ ತೆರಳಿ ಅಲ್ಲಿನ ಸಿಬ್ಬಂದಿಗಳನ್ನು ವಿಚಾರಿಸಿ.. ನೀರಿನ ಸ್ವಚ್ಚತೆ ಹಾಗೂ ಪರಿಪೂರ್ಣತೆಯ ಬಗ್ಗೆ ತಿಳಿದುಕೊಳ್ತಾರೆ. ನಂತರ ತೊಂದರೆ ಎಂದು ಮೇಲ್ ಮಾಡಿದ ಜನ ಸಾಮಾನ್ಯರಿಗೆ ಖುದ್ದು ರಾಘವ್ ಕರೆ ಮಾಡಿ ತೊಂದರೆಗೆ ಪರಿಹಾರವನ್ನು ನೀಡ್ತಾರೆ.

blank

ಇದು ಇವರ ಶೈಲಿಯ ರಾಜಕೀಯ. ಹಗಲು ರಾತ್ರಿಯನ್ನದೆ ಇವರು ಅಲ್ಲಿನ ಜನಗಳ ಕಷ್ಟಕ್ಕೆ ಸ್ಪಂಧಿಸುತ್ತಿದ್ದಾರೆ. ಅಲ್ಲದೆ ತನ್ನ ಪ್ಲಾನ್ ಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಇವರ ನಡೆಗೆ ಯಾವುದೆ ಆಮಿಷಗಳು ಅಡ್ಡ ಬರ್ತಾ ಇಲ್ಲ. ಈ ಲೀಡರ್ ಇತ್ತಿಚೆಗೆ ಸಕತ್ ಸುದ್ದಿಯಾಗಿದ್ದಾರೆ. ಕಾರಣ ಏನು ಗೊತ್ತಾ ?

ರಾಘವ್‌ಗೆ ಒಂದರ ಮೇಲೊಂದು ಮದುವೆಯ ರಿಕ್ವೆಸ್ಟ್
ಕಷ್ಟ ಕಾಲದಲ್ಲಿ ಸಂಭ್ರಮಾಚರಣೆ ಬೇಡ ಅಂತಾರೆ ಚಡ್ಡಾ

ರಾಘವ್ ಯಾವಾಗಲೂ ಜನರ ಜೊತೆಗೆ ಅವರ ಕಷ್ಟಗಳಿಗೆ ಜೊತೆಯಾಗಿರಲು ಬಯಸುತ್ತಾರೆ. ಇದೇ ಕಾರಣ, ಇವರು ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟೀವ್. ತಮ್ಮ ದಿನಚರಿಯನ್ನು, ಮುಂದಿನ ಪ್ಲಾನ್ ಗಳನ್ನು ಎಲ್ಲವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡುತ್ತಲೇ ಇರ್ತಾರೆ. ಈ ಪೋಸ್ಟ್ ಗಳಿಗೆ ಕಮೆಂಟ್ ಬಾಕ್ಸ್ ನಲ್ಲಿ ಪ್ರಶಂಸೆ ಜೊತೆ ಚಡ್ಡಾಗೆ ಸಿಗೋದು, ಕನ್ಯಾ ಮಣಿಗಳ ಮದುವೆ ರಿಕ್ವೆಸ್ಟ್.

ಅದು ಒಬ್ಬರು ಇಬ್ಬರು ಅಲ್ಲ.. ಸಾಲು ಸಾಲು ಕಮೆಂಟ್ ಗಳು ಇವರಿಗೆ ನನ್ನನ್ನು ಮದುವೆಯಾಗಿ ಬಿಡಿ ಎನ್ನುವುದು ಬರ್ತಾನೆ ಇರುತ್ತೆ. ಇದನ್ನೆಲ್ಲ ಇವರು ತುಂಬಾ ಈಜೀಯಾಗೆ ಸ್ವೀಕರಿಸಿ.. ನೋಡಿ ಇದು ಕಷ್ಟದ ಸಮಯ.. ನಾವು ಸಂಭ್ರಮಾಚರಣೆಯಿಂದ ದೂರ ಉಳಿಯ ಬೇಕು.. ಮದುವೆ ವಿಚಾರ ಪ್ರಸ್ತಾಪಿಸುವುದು ಬೇಡ ಅಂತಾರೆ.

ಪಂಜಾಬ್‌ನಲ್ಲಿ ಕರೆಂಟ್ ಫ್ರೀ ಕೊಟ್ರೇ ಬೇಡ್ವಂತೆ
ಕರೆಂಟ್ ಬದಲು ರಾಘವ್‌ನ ಕೊಟ್ಟುಬಿಡಿ ಅಂತಿದ್ದಾರೆ ಜನ

ಜಲ ಮಂಡಲಿ ಜೊತೆ ರಾಘವ್ ರವರಿಗೆ ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಸ್ಥಾಪಿಸುವ ಜವಾಬ್ದಾರಿಯನ್ನು ನೀಡಿದ್ದಾರೆ. ಪಂಜಾಬ್ ಜನರಿಗೆ ರೀಚ್ ಆಗಲು ರಾಘವ್ ತುಂಬ ಶ್ರಮ ವಹಿಸುತ್ತಿದ್ದಾರೆ. ಅದರಂತೆ ಇವರು ಟ್ವಿಟರ್ ನಲ್ಲಿ ಪಂಜಾಬ್ ನಲ್ಲಿ ಆಮ್ ಆದ್ಮಿಯನ್ನು ಗೆಲ್ಲಿಸಿ.. ನಿಮಗೆ ಕರೆಂಟ್ ಉಚಿತವಾಗಿ ಸಿಗುತ್ತೆ ಅಂತ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪಂಜಾಬ್ ನಿಂದ ಒಂದು ಹುಡುಗಿ.. ನಮಗೆ ಉಚಿತವಾಗಿ ಕರೆಂಟ್ ಬೇಡ.. ಬದಲಿಗೆ… ರಾಘವ್ ರನ್ನೆ ನೀಡಿ ಎಂದು ಕಮೆಂಟ್ ಮಾಡಿದ್ದಾಳೆ. ಈ ಕಮೆಂಟ್ ಗೆ ರಾಘವ್ ಹೇಳೋದೇ ನಂದರೆ.. ನಾನು ಮ್ಯಾನಿಫೆಸ್ಟೋ ನಲ್ಲಿ ಇಲ್ಲ.. ಕರೆಂಟ್ ಇದೆ.. ದಯಮಾಡಿ.. ಆಮ್ ಆದ್ಮಿಯನ್ನು ಗೆಲ್ಲಿಸಿ.. ಎಂದು ಹಾಸ್ಯಮಯ ಉತ್ತರ ನೀಡಿದ್ದಾರೆ.

blank

ಇದಿಷ್ಟೆ ಅಲ್ಲ, ಲಾಕ್ ಡೌನ್ ಟೈಮ್ ನಲ್ಲಿ ಜನಗಳಿಗೆ ಊಟ ಹಂಚುತ್ತಿದ್ದ ರಾಘವ್ ಫೋಟೋ ಒಂದನ್ನು ಟ್ವಿಟರ್ ನಲ್ಲಿ ಹಾಕಿದ್ದರು. ಇದಕ್ಕೆ ರಾಘವ್ ಅಭಿಮಾನಿ ಒಬ್ಬಳು.. ನೀವು ಊಟ ಹಂಚುತ್ತಿರುವಾಗ ತುಂಬ ಮುದ್ದಾಗಿ ಕಾಣ್ತಿರಾ, ನನಗೊಂದು ಬೈಟ್ ಸಿಗಬಹುದ ಎಂದು ಕಮೆಂಟ್ ಮಾಡಿದ್ದರು.. ಇದಕ್ಕೆ ರಾಘವ್.. ಇಲ್ಲಾ ಇಲ್ಲಾ.. ಸಾಮಾಜಿಕ ಅಂತರ ಕಾಯ್ದು ಕೊಳ್ಳೋದು ಬಹಳ ಮುಖ್ಯ.. ಬೈಟ್ ಕೊಡಲಾಗುವುದಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ರಾಘವ್.. ವಿಧಾನ ಸಭೆಯಲ್ಲಿ ಮಾತನಾಡಲು ಸೈ.. ಜನ ಸೇವೆಯಲ್ಲಿ ಬೀದಿಗಿಳಿಯಲು ಸೈ.. ಅಲ್ಲದೆ ಟ್ವೀಟ್‌ಗಳಿಗೆ ಕಾಮೆಂಟ್ಸ್ ನಲ್ಲಿ ಟಾಂಗ್ ಹೊಡೆಯಲು ಒಂದು ಕೈ ಮುಂದಾಗಿದ್ದಾರೆ. ಈ ತರಹದ ಸುಂದರ, ಬುದ್ದಿವಂತ, ಸಮಾಜಮುಖಿ ನಾಯಕ ಬೇರೆ ಯಾವ ಪಕ್ಷದಲ್ಲೂ ಇಲ್ಲ.. ಇರಲು ಸಾಧ್ಯವೂ ಇಲ್ಲ.. ಎನ್ನುವಂತೆ ಟ್ರೋಲ್‌ಗಳು ಸದ್ಯ ರಾಘವ್ ಮೇಲೆ ಬರುತ್ತಿದೆ. ನಾಯಕ್ ಸಿನಿಮಾದಲ್ಲಿ ಅನಿಲ್ ಕಪೂರ್ ಹೇಗೆಲ್ಲ ಅಭಿಮಾನಿ ಬಳಗವನ್ನು ವೃದ್ಧಿಸಿಕೊಂಡನೋ.. ಹಾಗೆ.,, ದೆಹಲಿಯ ನಾಯಕ ಕೂಡ ಜನರ ಮನಸ್ಸನ್ನು ಗೆಲ್ಲುತ್ತಿದ್ದಾನೆ‘..

ಶಾಸಕನ ನಿಜವಾದ ಜವಾಬ್ದಾರಿಯನ್ನು ರಾಘವ್ ನಿರ್ವಹಿಸುತ್ತಿದ್ದಾರೆ. ಆದರೇ ಇದಕ್ಕಿಂತ ಹೆಚ್ಚಾಗಿ ಅವರ ಆಟಿಟ್ಯೂಡ್ ಹಾಗೂ ಅವರ ರೂಪ ದೇಶದ ಹುಡುಗಿಯರ ಕಣ್ಮನ ಸೆಳೆದಿದೆ. ಇದರ ಜೊತೆಗೆ ತಮ್ಮ ಕಾರ್ಯಶೈಲಿಯಿಂದಲೂ ರಾಘವ್ ಫೇಮಸ್ ಆಗಿ ಬಿಟ್ಟಿದ್ದಾರೆ.

ವಿಶೇಷ ಬರಹ: ನಾಗೇಂದ್ರ ಬಾಬು, ಸ್ಪೆಷಲ್ ಡೆಸ್ಕ್​

Source: newsfirstlive.com Source link