ಸಕ್ರಮ ಮಾಡಿ ಅನ್ನೋ ಮೊದಲು ಅಕ್ರಮ ಎಂದು‌ ಒಪ್ಪಿಕೊಳ್ಳಿ-ಸುಮಲತಾ ಅಂಬರೀಶ್​

ಸಕ್ರಮ ಮಾಡಿ ಅನ್ನೋ ಮೊದಲು ಅಕ್ರಮ ಎಂದು‌ ಒಪ್ಪಿಕೊಳ್ಳಿ-ಸುಮಲತಾ ಅಂಬರೀಶ್​

ಮಂಡ್ಯ: ಸಕ್ರಮ ಗಣಿಗಾರಿಕೆಗೆ ನನ್ನ ವಿರೋಧ ಇಲ್ಲ. ಸಕ್ರಮ ಮಾಡಿಕೊಡಿ ಎನ್ನುವವರು ಮೊದಲು ಅಕ್ರಮ ಎಂದು‌ ಮೊದಲು ಒಪ್ಪಿಕೊಳ್ಳಿ  ಅಂತ ಜಿಲ್ಲೆಯಲ್ಲಿ ಸಂಸದೆ ಸುಮಲತಾ ಹೇಳಿಕೆ‌ ನೀಡಿದ್ದಾರೆ. ಇದೇ ವೇಳೆ ಮಾತಾಡಿರೋ ಸಂಸದೆ, ಕೆಆರ್‌ಎಸ್ ಸುತ್ತಮುತ್ತ ಇರುವ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕಾ? ಇದೇನಾ ಜೆಡಿಎಸ್ ಶಾಸಕರ ಸಲಹೆ ಅಂತ ಪ್ರಶ್ನಿಸಿದ್ದಾರೆ.

blank

ಎರಡು ವರ್ಷದ ಹೋರಾಟ ಪ್ರಶ್ನಿಸಿದವರಿಗೆ ತಕ್ಕ ಉತ್ತರ ಕೊಟ್ಟಂತೆ ಆಗಿದೆ. ಸಕ್ರಮ ಮಾಡಿಕೊಡಿ ಎನ್ನುವ ಮೊದಲು ಅಕ್ರಮ ಎಂದು‌ ಮೊದಲು ಒಪ್ಪಿಕೊಳ್ಳಿ. ಎಲ್ಲಿ ಅಕ್ರಮ ಇರುತ್ತೋ ಅಲ್ಲಿ ಅಭಿವೃದ್ಧಿ ಇರಲ್ಲ. ದೃಷ್ಟಿ ಪೂಜೆ ಮಾಡಿಸಿಕೊಂಡಿರುವುದು ಅಣೆಕಟ್ಟೆಗಾಗಿಯಾ? ಅಥವಾ ಅಕ್ರಮ ಗಣಿಗಾರಿಕೆಗೆನಾ? ಎಂದು ಪ್ರಶ್ನಿಸಿದ್ರು.

ಇದನ್ನೂ ಓದಿ: ‘ನೀವು ಆದೇಶ ಕೊಡಬೇಕು.. ನಾನು ಪಾಲಿಸಬೇಕು’ ಹೀಗೆ ಸುಮಲತಾ ಅಂಬರೀಶ್​ ಹೇಳಿದ್ಯಾರಿಗೆ?

ಅಲ್ಲದೇ, ಅಕ್ರಮ ಗಣಿಗಾರಿಕೆ ಕುರಿತು ಸಿಎಂ ಹಾಗೂ ಗಣಿ ಸಚಿವರನ್ನು ಭೇಟಿ ಮಾಡುತ್ತೇನೆ. ನನ್ನ ಹೋರಾಟ ಈಗ ಒಂದು ಹಂತಕ್ಕೆ ಬಂದಿದೆ. ನೋಡೋಣ ಸರ್ಕಾರ ಏನು ಮಾಡೋತ್ತೋ ಎಂದು. ಈ ಕುರಿತು ನನ್ನ ಹೋರಾಟ ಮುಂದುವರೆಯುತ್ತದೆ. ನಾಲ್ಕು ವರ್ಷದಿಂದ ಬೇಬಿ ಬೆಟ್ಟದಲ್ಲಿ ಬ್ಲಾಸ್ಟಿಂಗ್ ಆಗುತ್ತಿಲ್ಲ ಎನ್ನುತ್ತಾರೆ. ಆದ್ರೆ ಇದೀಗ ಪದೇ ಪದೇ ಸ್ಫೋಟಕಗಳು ಪತ್ತೆಯಾಗುತ್ತಿವೆ. ಏನು ಇದರ ಅರ್ಥ ಅಂತ ಯೋಚನೆ ಮಾಡಬೇಕು ಅಂತ ಮತ್ತೆ ಅಕ್ರಮಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಕಿಡಿಕಾರಿದ್ದಾರೆ.

Source: newsfirstlive.com Source link