ಭಜರಂಗಿ ಭಕ್ತೆಯನ್ನ ಭೇಟಿಯಾದ ಭಾಯಿಜಾನ್; ಸಲ್ಮಾನ್ ಕಂಡು ಮಿರಾಬಾಯಿ ಫುಲ್​ಖುಷ್

ಭಜರಂಗಿ ಭಕ್ತೆಯನ್ನ ಭೇಟಿಯಾದ ಭಾಯಿಜಾನ್; ಸಲ್ಮಾನ್ ಕಂಡು ಮಿರಾಬಾಯಿ ಫುಲ್​ಖುಷ್

ಮಣಿಪುರ: ಟೋಕಿಯೋ ಒಲಿಂಪಿಕ್ಸ್​ನ ಮೊದಲ ದಿನವೇ ವೇಯ್ಟ್ ಲಿಫ್ಟಿಂಗ್​ನಲ್ಲಿ ಭಾರತದ ಕ್ರೀಡಾಪಟು ಮೀರಾಬಾಯಿ ಚಾನು ಬೆಳ್ಳಿಪದಕ ಗೆದ್ದಿದ್ದರು. ತಮ್ಮ ಫೇವರೇಟ್ ನಟ ಬಾಲಿವುಡ್​ನ ಭಾಯಿಜಾನ್ ಸಲ್ಮಾನ್ ಖಾನ್ ಎಂದು ಹೇಳಿಕೊಂಡಿದ್ದರು. ಅಚ್ಚರಿ ಅಂದ್ರೆ ಇವತ್ತು ಸಲ್ಮಾನ್ ಖಾನ್ ಮಿರಾಬಾಯಿ ಚಾನು ಅವರನ್ನ ಭೇಟಿಯಾಗುವ ಮೂಲಕ ಬಿಗ್​ ಸರ್​ಪ್ರೈಸ್ ನೀಡಿದ್ದಾರೆ.

blank

ಮಿರಾಬಾಯಿ ಚಾನು ಅವರನ್ನ ಭೇಟಿಯಾದ ಸಲ್ಮಾನ್ ಖಾನ್ ಟ್ವಿಟರ್​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಬೆಳ್ಳಿ ಪದಕ ವಿಜೇತೆಯಾದ ನಿಮ್ಮನ್ನ ಭೇಟಿಯಾಗಿದ್ದು ಖುಷಿಯಾಯ್ತು.. ನಿಮಗೆ ಬೆಸ್ಟ್ ವಿಷಸ್ ಎಂದು ಬರೆದುಕೊಂಡಿದ್ದಾರೆ.

ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇಂದು ಮಿರಾಬಾಯಿ ಚಾನು ಅವರನ್ನ ಭೇಟಿಯಾಗಿದ್ದಾರೆ.  ತಮ್ಮ ಭೇಟಿಯ ಫೋಟೋಗಳನ್ನ ಸಚಿನ್ ಹಾಗೂ ಮಿರಾಬಾಯಿ ಇಬ್ಬರೂ ಹಂಚಿಕೊಂಡಿದ್ದಾರೆ.

Source: newsfirstlive.com Source link