ಒಬಿಸಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ; ಏನಿದು ಮಸೂದೆ..?

ಒಬಿಸಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ; ಏನಿದು ಮಸೂದೆ..?

ನವದೆಹಲಿ: ತಮ್ಮದೇ ಆದ ಪ್ರತ್ಯೇಕ ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಮಾಡಿಕೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆ ಲೋಕಸಭೆಯ ನಂತರ ಇದೀಗ ರಾಜ್ಯಸಭೆಯಲ್ಲೂ ಸಹ ಮಸೂದೆಗೆ ಅಂಗೀಕಾರವಾಗಿದೆ. ಲೋಕಸಭೆಯಲ್ಲಿ ವಿಪಕ್ಷಗಳು ಮಸೂದೆಗೆ ಬೆಂಬಲ ನೀಡಿದ್ದು, ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಲಾಗಿತ್ತು. ಮಸೂದೆಗೆ ಲೋಕಸಭೆಯ 385 ಸದಸ್ಯರ ಒಪ್ಪಿಗೆ ಸಿಕ್ಕಿತ್ತು. ನಂತರ ರಾಜ್ಯಸಭೆಯಲ್ಲೂ ಸಹ ಮಸೂದೆಯನ್ನ ಮಂಡಿಸಲಾಗಿದ್ದು ಅಂಗೀಕಾರ ಸಿಕ್ಕಿದೆ.

ಏನಿದು ಒಬಿಸಿ ಮಸೂದೆ..?

ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ರಾಜ್ಯ ಸರ್ಕಾರಗಳಿಗೆ ಸಾಮಾಜಿಕ, ಶೈಕ್ಷಣಿಕ, ಮತ್ತು ಉದ್ಯೋಗ.. ಈ ಮೂರು ಮೀಸಲಾತಿಗಳನ್ನ ಹಿಂದುಳಿದ ವರ್ಗಗಳಿಗೆ ಪ್ರವೇಶ ನೀಡುವ ಹಕ್ಕು ಇರುವುದಿಲ್ಲ. ಸಂವಿಧಾನದ 102ನೇ ತಿದ್ದುಪಡಿಯಲ್ಲೂ ಇದರ ಉಲ್ಲೇಖವಿದೆ. ಇದೀಗ ಈ ಸಂವಿಧಾನದ 102ನೇ ತಿದ್ದುಪಡಿಯ ನಿಬಂಧನೆಗಳನ್ನು ಸ್ಪಷ್ಟಪಡಿಸಲು ಈ ಮಸೂದೆಯನ್ನ ಮಂಡಿಸಲಾಗುತ್ತಿದೆ. ಸಂವಿಧಾನದ 127ನೇ ತಿದ್ದುಪಡಿ ಮಸೂದೆ ಮೂಲಕ ಮಂಡನೆಯಾಗಿದೆ. ಈ ಮಸೂದೆ ಮಂಡನೆಯಾದ್ರೆ ರಾಜ್ಯಗಳಿಗೆ ಹಿಂದುಳಿದ ಜಾತಿಗಳನ್ನು ಪಟ್ಟಿ ಮಾಡುವ ಹಕ್ಕು ಸಿಗಲಿದೆ. ಮಸೂದೆ ಅಂಗೀಕಾರವಾದ ಬಳಿಕ ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶದಿಂದ ಪ್ರತ್ಯೇಕ ಪಟ್ಟಿಗಳನ್ನ ಮಾಡಲಾಗುತ್ತದೆ.

ಇದನ್ನೂ ಓದಿ: ರಾಜ್ಯ ಸಭೆಯಲ್ಲಿ ಇಂದು ಒಬಿಸಿ ಬಿಲ್ ಮಂಡನೆ -ಏನಿದು ಮಸೂದೆ? ಏನೆಲ್ಲಾ ಲಾಭ?

ಇನ್ನು ಮಸೂದೆ ಅಂಗೀಕಾರವಾದ್ರೆ, ಕರ್ನಾಟಕ ಮಹಾರಾಷ್ಟ್ರ ಗುಜರಾತ್‌, ರಾಜಸ್ಥಾನದಲ್ಲಿ ಕೆಲ ಜಾತಿಗಳ ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟದ ಹಾದಿ ಸುಗಮವಾಗಲಿದೆ. ಕರ್ನಾಟಕದಲ್ಲಿ ಪಂಚಮಸಾಲಿ ಲಿಂಗಾಯತರ 2ಎ ಮೀಸಲಾತಿ ಹೋರಾಟ ಸುಗಮವಾಗಲಿದೆ. ಜೊತೆಗೆ ಹರಿಯಾಣದಲ್ಲಿ ಜಾಟರು, ರಾಜಸ್ಥಾನದಲ್ಲಿ ಗುಜ್ಜರು, ಮಹಾರಾಷ್ಟ್ರದಲ್ಲಿ ಮರಾಠರು, ಗುಜರಾತಿನಲ್ಲಿ ಪಟೇಲರು ಈ ಜಾತಿಗಳ ಮೀಸಲಾತಿ ಹೋರಾಟದ ಹಾದಿ ಸುಗಮವಾಗಲಿದೆ ಎನ್ನಲಾಗಿದೆ.

Source: newsfirstlive.com Source link