ಸಿಎಂ ಜೊತೆ ಮಾತುಕತೆ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್

ಸಿಎಂ ಜೊತೆ ಮಾತುಕತೆ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್

ಬೆಂಗಳೂರು: ರಾಜ್ಯ ಸರ್ಕಾರದ ಸಂಪುಟ ಸಚಿವರ ಖಾತೆ ಹಂಚಿಕೆ ಬೆನ್ನಲ್ಲೇ ತನಗೆ ಪ್ರಬಲ ಖಾತೆ ಸಿಕ್ಕಿಲ್ಲ ಎಂದು ಸಚಿವ ಆನಂದ್ ಸಿಂಗ್ ಅಸಮಾಧಾನ ಹೊರಹಾಕಿದ್ದರು. ಇಂದು ಸಿಎಂ ಬಸವರಾಜ್ ಬೊಮ್ಮಾಯಿಯವರನ್ನ ಭೇಟಿಯಾದ ಆನಂದ್ ಸಿಂಗ್ ಸುಮಾರು 2 ಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ಪೂಜೆ ವೇಳೆ ಆನಂದ್​ಸಿಂಗ್​ ಮೊಬೈಲ್​​ ನೋಡ್ತಿದ್ದು ಯಾಕೆ? ಸಿಎಂರಿಂದ ಸಚಿವರಿಗೆ ಬಂತಾ ಕಾಲ್​?

ಮಾತುಕತೆಯ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಆನಂದ್ ಸಿಂಗ್ ತಾನು ರಾಜೀನಾಮೆ ನೀಡುತ್ತೇನೆಂದು ಎಲ್ಲೂ ಹೇಳಿಲ್ಲ. ಸಿಎಂ ಉತ್ತಮ ರೀತಿಯಲ್ಲಿ ನಮಗೆ ಸ್ಪಂದಿಸಿದ್ದಾರೆ. ಖಾತೆ ಬದಲಾವಣೆ ಮಾಡಿರುವಂತೆ ಕೇಳಿರುವುದು ಸತ್ಯ.. ಸಿಎಂ ಮಾತಿಗೆ ಗೌರವ ಕೊಟ್ಟು ಕಾಯುತ್ತೇನೆ.. ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದಿದ್ದಾರೆ.

ಇದನ್ನೂ ಓದಿ:ಪ್ರಬಲ ಖಾತೆ ಸಿಗದಿದ್ದಕ್ಕೆ ಮುನಿಸು; ಕಚೇರಿಯ ಬೋರ್ಡ್​ ತೆರವುಗೊಳಿಸಿದ ಆನಂದ್​ಸಿಂಗ್

ಇನ್ನು ಸಿಎಂ ಬೊಮ್ಮಾಯಿ ಮಾತನಾಡಿ.. ಸದ್ಯದ ಸ್ಥಿತಿಯಲ್ಲಿ ಖಾತೆ ಬದಲಾಯಿಸಲು ಸಾಧ್ಯವಿಲ್ಲ.. ಆನಂದ್ ಸಿಂಗ್‌ ಉತ್ತಮ ಖಾತೆ ಬಯಸಿರುವುದು ನಿಜ.. ಈ ಕುರಿತು ವರಿಷ್ಠರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ಎಲ್ಲರೂ ಒಟ್ಟಾಗಿ ಹೋಗುವ ತೀರ್ಮಾನ ಮಾಡಿದ್ದೇವೆ. ಆನಂದ್‌ ಸಿಂಗ್‌ ನಮ್ಮ ನಡುವೆ ಸುಖಾಂತ್ಯವೇ ಇದೆ. ಆಗಸ್ಟ್‌ 15ರಂದು ಆನಂದ್‌ ಸಿಂಗ್‌ ವಿಜಯನಗರದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎಂದರು.

Source: newsfirstlive.com Source link