ಬಿಎಸ್​ವೈಗೆ ಟ್ವಿಟರ್​​ನಲ್ಲಿ 10 ಲಕ್ಷ ಫಾಲೋವರ್ಸ್; ನಿಮ್ಮೆಲ್ಲರ ಪ್ರೀತಿಯ ಸಂಕೇತ ಎಂದ ಮಾಜಿ ಸಿಎಂ

ಬಿಎಸ್​ವೈಗೆ ಟ್ವಿಟರ್​​ನಲ್ಲಿ 10 ಲಕ್ಷ ಫಾಲೋವರ್ಸ್; ನಿಮ್ಮೆಲ್ಲರ ಪ್ರೀತಿಯ ಸಂಕೇತ ಎಂದ ಮಾಜಿ ಸಿಎಂ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮೈಕ್ರೋ ಬ್ಲಾಗಿಂಗ್ ವೆಬ್​ಸೈಟ್ ಟ್ವಿಟರ್​ನಲ್ಲಿ ಫಾಲೋವರ್ಸ್​ಗಳ ಸಂಖ್ಯೆ ಹೆಚ್ಚಾಗಿದೆ. ಇಂದಿಗೆ ಟ್ವಿಟರ್​​ನಲ್ಲಿ ಬಿಎಸ್​ವೈ ಅಕೌಂಟ್ ಫಾಲೋ ಮಾಡುವವರ ಸಂಖ್ಯೆ ಒಂದು ಮಿಲಿಯನ್ ದಾಟಿದೆ. ಅಂದ್ರೆ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನ ಬಿಎಸ್​ವೈ ಹೊಂದಿದ್ದಾರೆ.

ಈ ಹಿನ್ನೆಲೆ ಟ್ವಿಟರ್​​ನಲ್ಲಿ ಟ್ವೀಟ್ ಮಾಡಿರುವ ಬಿ.ಎಸ್. ಯಡಿಯೂರಪ್ಪ ಧನ್ಯವಾದ ಹೇಳಿದ್ದಾರೆ. ಟ್ವಿಟರ್​ನಲ್ಲಿ ನಮ್ಮ ಬಳಗ ದಶಲಕ್ಷದ ಮೈಲಿಗಲ್ಲನ್ನು ದಾಟಿರುವುದು ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳ ಸಂಕೇತ ಎಂದು ಭಾವಿಸುತ್ತೇನೆ. ತಮ್ಮ ಬೆಂಬಲ, ಅಭಿಮಾನದಿಂದ ಸದಾ ನನ್ನನ್ನು ಹಾರೈಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವ ಧನ್ಯವಾದಗಳು ಎಂದಿದ್ದಾರೆ.

 

Source: newsfirstlive.com Source link