ಪ್ರಕಾಶ್​ ರಾಜ್​ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ.. ‘ಡೆವಿಲ್ ಈಸ್ ಬ್ಯಾಕ್’ ಎಂದ ನಟ

ಪ್ರಕಾಶ್​ ರಾಜ್​ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ.. ‘ಡೆವಿಲ್ ಈಸ್ ಬ್ಯಾಕ್’ ಎಂದ ನಟ

ಚೆನ್ನೈ: ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡಿದ್ದ ಚತುರ್ಭಾಷಾ ನಟ ಪ್ರಕಾಶ್​ ರಾಜ ಅವರಿಗೆ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಆರೋಗ್ಯವಾಗಿದ್ದಾರೆ.

ನಿನ್ನೆ ತಮಿಳು ನಟ ಧನುಷ್​ ಹೊಸ ಸಿನಿಮಾದಲ್ಲಿ ನಟಿಸುವಾಗ ನಡೆದ ಅವಘಡದಲ್ಲಿ ನಟ ಪ್ರಕಾಶ್​​ ರಾಜ್​ ತೀವ್ರ ಗಾಯಗೊಂಡಿದ್ದ ಪರಿಣಾಮ ಅವರ ಎಡಗೈಗೆ ಗಂಭೀರ ಗಾಯವಾಗಿತ್ತು. ಇಂದು ಎಡಗೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು ಯಶಸ್ವಿಯಾಗಿದೆ.

ಇದನ್ನೂ ಓದಿ: ಧನುಷ್​​ ಜತೆ ಫೈಟ್​ ಶೂಟ್​​ ಮಾಡುವಾಗ ಪ್ರಕಾಶ್ ರೈ ಕೈಗೆ ಗಾಯ​; ಶಸ್ತ್ರಚಿಕಿತ್ಸೆಗೆ ಸಿದ್ಧತೆ

ಡಾ.ಗುರುವ ರೆಡ್ಡಿ ನೇತೃತ್ವದ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಶಸ್ತ್ರ ಚಿಕಿತ್ಸೆ ಮುಗಿದಿದ್ದು, ಡಾ.ಗುರುವ ರೆಡ್ಡಿ ಅವರಿಗೆ ಧನ್ಯವಾದಗಳು ಮತ್ತು ಶೀಘ್ರದಲ್ಲೇ ಮತ್ತೆ ಶೂಟಿಂಗ್​ಗೆ ಹಾಜರಾಗುವೆ, ನನ್ನ ಯೋಗ ಕ್ಷೇಮದ ಬಗ್ಗೆ ಪ್ರಾರ್ಥಿಸಿದವರಿಗೆ ನನ್ನ ಧನ್ಯವಾದಗಳು ಎಂದು ಪ್ರಕಾಶ್​ ರಾಜ್​ ಟ್ವೀಟ್​ ಮಾಡಿದ್ದಾರೆ.

Source: newsfirstlive.com Source link