‘ಕನ್ಯಾಕುಮಾರಿ’ ತಂಡ ಸೇರಿದ ‘ಗ್ಲಾಮರಸ್ ಅಮ್ಮ’: ಭಕ್ತಿ ಪ್ರಧಾನ ಚಿತ್ರಕ್ಕೆ ಮತ್ತೊಂದು ಸ್ಟ್ರೆಂಥ್   

‘ಕನ್ಯಾಕುಮಾರಿ’ ತಂಡ ಸೇರಿದ ‘ಗ್ಲಾಮರಸ್ ಅಮ್ಮ’: ಭಕ್ತಿ ಪ್ರಧಾನ ಚಿತ್ರಕ್ಕೆ ಮತ್ತೊಂದು ಸ್ಟ್ರೆಂಥ್   

ಸಾಕಷ್ಟು ಕುತೂಹಲ ಮೂಡಿಸಿರುವ ಭಕ್ತಿ ಪ್ರಧಾನ ಧಾರಾವಾಹಿ ಕನ್ಯಾಕುಮಾರಿ. ಈ ಸೀರಿಯಲ್​ ಈಗಾಗಲೇ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಜನರ ಮೆಚ್ಚುಗೆ ಪಡೆದಿದೆ. ಗ್ಲಾಮರ್ಸ್​ ಅಮ್ಮ ಅಂತಾನೆ ಫೇಮಸ್​ ಆಗಿರುವ ಸ್ವಾತಿ ಹೆಚ್​.ವಿ ಕನ್ಯಾಕುಮಾರಿ ಟೀಮ್​ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಮಂಜು ಪಾವಗಡ ಬಿಗ್​​ಬಾಸ್ ವಿನ್ನರ್​; ಅರವಿಂದ್ ಗೆಲ್ಬೇಕಿತ್ತು ಅಂತ ದಿವ್ಯಾ ಉರುಡುಗ ಬೇಸರ

ಹೌದು, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್​ ಗಟ್ಟಿಮೇಳದಲ್ಲಿ ವೇದಾಂತ್​ ವಸಿಷ್ಠ ಅಮ್ಮ ಸುಹಾಸಿನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಸ್ವಾತಿ, ಖಡಕ್​ ರೋಲ್​ಗಳಿಂದಲೇ ಮನೆ ಮಾತಾಗಿದ್ದಾರೆ.
ಇನ್ನು ಕನ್ಯಾಕುಮಾರಿ ಧಾರಾವಾಹಿ ಶ್ರೀಮಂತ ಕುಟುಂಬದ ಹುಡುಗಿಯ ಸುತ್ತ ಹೆಣೆದಿರುವ ಕತೆಯಾಗಿದೆ. ಇಲ್ಲಿ ಹುಡುಗಿ ದೇವರ ಮೇಲೆ ತುಂಬಾನೆ ಭಕ್ತಿಯಿರುವವಳು. ಇನ್ನೊಂದೆಡೆ ಹೀರೋ ಮನೆಯವರು ಕಡು ಬಡವರು, ಊಟಕ್ಕೂ ಪರದಾಡುವಂತಹ ಕಷ್ಟ ಇರುವವರು. ಇವರಿಬ್ಬರ ಮಧ್ಯ ನಡೆಯುವ ಕತೆಯೇ ಈ ಧಾರಾವಾಹಿಯ ಮುಖ್ಯ ಎಳೆ.

blank

 

ಇದನ್ನೂ ಓದಿ: ‘ಮರಳಿ ಮನಸ್ಸಾಗಿದೆ’.. ಅಂತಿದ್ದಾರೆ ಹರಿಣಿ ಶ್ರೀಕಾಂತ್

ಈ ಧಾರಾವಾಹಿಯಲ್ಲಿ ಶ್ರೀಮಂತ ಕುಟುಂಬದ ಹೆಣ್ಮಗಳಾಗಿರುವ ಕನ್ನಿಕಾಳ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಸ್ವಾತಿ ಎಚ್​.ವಿ. ಇಷ್ಟು ದಿನ ಗಟ್ಟಿಮೇಳ ಸೀರಿಯಲ್​ನ ಸುಹಾಸಿನಿ ಪಾತ್ರದ ಮೂಲಕ ಮನೆ ಮಾತಾಗಿದ್ದ ಸ್ವಾತಿ, ಇನ್ಮೇಲೆ ಕನ್ಯಾಕುಮಾರಿ ಸೀರಿಯಲ್​ ಮೂಲಕ ರಂಜಿಸಲಿದ್ದಾರೆ. ರಾತ್ರಿ 10 ಗಂಟೆಗೆ ಕನ್ಯಾಕುಮಾರಿ ಧಾರಾವಾಹಿ ಪ್ರಸಾರವಾಗುತ್ತಿದ್ದು, ಸ್ವಾತಿ ಅವರ ಹೊಸ ಪ್ರಾಜೆಕ್ಟ್​ಗೆ ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್​.

ಇದನ್ನೂ ಓದಿ: ಹ್ಯಾಟ್ರಿಕ್​ ಹೀರೋ ಶಿವಣ್ಣನ ಭೇಟಿ ಮಾಡಿ ಆಶೀರ್ವಾದ ಪಡೆದ ಬಿಗ್​ಬಾಸ್​ ವಿನ್ನರ್​

Source: newsfirstlive.com Source link