ಆಗಸ್ಟ್ 23 ಕ್ಕೆ ಓಪನ್ ಆಗ್ತಾವಾ ಸ್ಕೂಲ್ & ಕಾಲೇಜ್..? ಶಿಕ್ಷಣ ಇಲಾಖೆ ಮುಂದಿವೆ 8 ಸವಾಲು

ಆಗಸ್ಟ್ 23 ಕ್ಕೆ ಓಪನ್ ಆಗ್ತಾವಾ ಸ್ಕೂಲ್ & ಕಾಲೇಜ್..? ಶಿಕ್ಷಣ ಇಲಾಖೆ ಮುಂದಿವೆ 8 ಸವಾಲು

ಬೆಂಗಳೂರು: ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ರೂ, ಕೊರೊನಾ ಮಾತ್ರ ಅಡ್ಡಗಾಲಾಗ್ತಿದೆ. ವರ್ಷಗಳ ಬಳಿಕ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜುಗಳ ಮುಖ ನೋಡೋ ಅವಕಾಶ ಸಿಗಲಿದೆ. ಆದ್ರೀಗ, ಶಾಲಾ-ಕಾಲೇಜುಗಳೇ ಓಪನ್ ಆಗೋದು ಅನುಮಾನ ಎನ್ನಲಾಗ್ತಿದೆ.

ಒಂದಲ್ಲ, ಎರಡಲ್ಲ. ಬರೋಬ್ಬರಿ 2 ವರ್ಷಗಳ ಕಾಲ ಶಾಲಾ-ಕಾಲೇಜುಗಳು ಬಂದ್ ಆಗಿದ್ವು. ಕೇವಲ ಆನ್​​ಲೈನ್ ಕ್ಲಾಸ್​ನಲ್ಲಿದ್ದ ವಿದ್ಯಾರ್ಥಿಗಳಿಗೆ, ಮತ್ತೆ ಶಾಲೆ-ಕಾಲೇಜು ಮೆಟ್ಟಿಲು ಹತ್ತೋ ಭಾಗ್ಯ ಸಿಕ್ಕಿದೆ. ತಜ್ಞರ ಎಚ್ಚರಿಕೆ ನಡುವೆ ಆಗಸ್ಟ್ 23ರಿಂದ 9-12ನೇ ತರಗತಿಗಳ ಆರಂಭಕ್ಕೆ, ಈಗಾಗ್ಲೇ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದ್ರೀಗ, ಶಾಲಾ-ಕಾಲೇಜುಗಳು ಓಪನ್ ಆಗೋದೇ ಅನುಮಾನವಾಗಿದೆ.

blank

ನಗರದಲ್ಲಿ ಹೆಮ್ಮಾರಿ ಕೊರೊನಾರ್ಭಟ ಕಡಿಮೆಯಾಯ್ತು ಅನ್ಕೊಳ್ತಿರುವಾಗ್ಲೇ, ಮತ್ತೆ ಸೋಂಕಿನ ಪ್ರಮಾಣ ಏರಿಯಾಗ್ತಿದೆ. ಸೋಂಕು ನಿರಂತರ ಏರಿಕೆಯಾದ್ರೆ, ಶಾಲೆ-ಕಾಲೇಜುಗಳನ್ನ ತೆರೆಯೋದು ಹೇಗೆ ಎಂಬುದೇ, ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ.

ಶೇಕಡ 2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿರೋ ಜಿಲ್ಲೆಯಲ್ಲಿ ಶಾಲೆಗಳನ್ನ ತೆರೆಯುವುದಿಲ್ಲ. 1 ರಿಂದ 8ನೇ ತರಗತಿಗಳ ಪ್ರಾರಂಭ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆ ಮೊರೆ ಹೋಗಿದೆ. ಮತ್ತೊಂದು ಸುತ್ತಿನ ಕೊರೊನಾ ಸಭೆಯನ್ನ,  ಆರೋಗ್ಯ ಇಲಾಖೆ ಜೊತೆ ನಡೆಸಿ, ಬಳಿಕ ಶಾಲೆ ತೆರೆಯೋ ಬಗ್ಗೆ ತಿರ್ಮಾನ ಕೈಗೊಳ್ಳಲಾಗುತ್ತೆ. ಇನ್ನೆರಡು ದಿನಗಳಲ್ಲಿ ಆರೋಗ್ಯ ಇಲಾಖೆ ಜೊತೆ ಸಭೆಗೆ, ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಇನ್ನೇನಿದ್ರು, ಆರೋಗ್ಯ ಇಲಾಖೆ, ತಜ್ಞರ ಸಲಹೆ ಆಧಾರದಲ್ಲಿ ಶಾಲೆ ತರೆಯ ಬೇಕೋ, ಬೇಡ್ವೋ ಎಂಬ ಭವಿಷ್ಯ ನಿರ್ಧಾರವಾಗಲಿದೆ.

blank

ಇನ್ನು, ಶಾಲೆ-ಕಾಲೇಜುಗಳನ್ನ ತೆರೆಯೋದಕ್ಕೂ, ಶಿಕ್ಷಣ ಇಲಾಖೆ ಮುಂದೆ ಹಲವಾರು ಸವಾಲುಗಳಿವೆ

  1. ಮಕ್ಕಳಿಂದ ಮಾರ್ಗಸೂಚಿಗಳ ಪಾಲನೆ ಮಾಡಿಸೋದು ಸವಾಲಿನ ಕೆಲಸ
  2. ಮಕ್ಕಳಿಗೆ ಸಾಮಾಜಿಕ ಅಂತರದ ಪಾಠ ಹೇಳಿ ಕೊಡೋದು ಸುಲಭವಲ್ಲ
  3. ಇಡೀ ದಿನ ಮಾಸ್ಕ್ ಧರಿಸಿ, ಮಾರ್ಗಸೂಚಿ ಪಾಲನೆ ಮಾಡಿಸೋದು ಕಷ್ಟ
  4. ಆಟ, ಊಟದ ಸಮಯಗಳಲ್ಲಿ ಕೊರೊನಾ ನಿಯಮ ಪಾಲನೆ ಸುಲಭವಲ್ಲ
  5. ವಿದ್ಯಾರ್ಥಿಗಳು ಶಾಲೆಗೆ ಬರೋಕೆ ಸಾರಿಗೆ ವ್ಯವಸ್ಥೆ ಮಾಡೋದು ಸವಾಲು
  6. ಪಾಠಕ್ಕಿಂತ ಮಾರ್ಗಸೂಚಿ ಪಾಲನೆ ಮಾಡಿಸೋದು ಶಿಕ್ಷಕರಿಗೆ ಚಾಲೆಂಜ್
  7. ಒಂದು ಮಗುವಿಗೆ ಸೋಂಕು ತಗುಲಿದ್ರೆ ಇಡೀ ತರಗತಿ ಮಕ್ಕಳಿಗೆ ಅಪಾಯ
  8. ಮಕ್ಕಳ ಮೂಲಕ ಅವರ ಕುಟುಂಬಕ್ಕೂ ಸೋಂಕು ಹರಡೋ ಸಾಧ್ಯತೆ

ಒಟ್ಟಾರೆ, ಶಾಲೆ-ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಕ್ರೂ, ಹೆಮ್ಮಾರಿ ಮಾತ್ರ ಬೆನ್ನು ಬಿಡದ ಬೇತಾಳದಂತೆ ಕಾಡ್ತಿದೆ. ಇನ್ನೇನಿದ್ರೂ, ಶಿಕ್ಷಣ ಇಲಾಖೆ, ಮಕ್ಕಳ ಆರೋಗ್ಯದ ಹಿತಾದೃಷ್ಟಿ ಗಮನದಲ್ಲಿಟ್ಟುಕೊಂಡು, ಆರೋಗ್ಯ ಇಲಾಖೆ ಜೊತೆ ಚರ್ಚಿಸಿ, ಯಾಕ ಕ್ರಮ ಕೈಗೊಳ್ಳುತ್ತೆ ಅಂತ ಕಾದು ನೋಡಬೇಕಿದೆ.

Source: newsfirstlive.com Source link