ಎಚ್ಚರಿಕೆ ತೆಗೆದುಕೊಂಡ್ರೂ ಏರುತ್ತಿವೆ ಕೊರೊನಾ ಪ್ರಕರಣ: 6 ಕ್ಷೇತ್ರಗಳಲ್ಲಿ 300ಕ್ಕಿಂತ ಅಧಿಕ ಆ್ಯಕ್ಟಿವ್​ ಕೇಸ್

ಎಚ್ಚರಿಕೆ ತೆಗೆದುಕೊಂಡ್ರೂ ಏರುತ್ತಿವೆ ಕೊರೊನಾ ಪ್ರಕರಣ: 6 ಕ್ಷೇತ್ರಗಳಲ್ಲಿ 300ಕ್ಕಿಂತ ಅಧಿಕ ಆ್ಯಕ್ಟಿವ್​ ಕೇಸ್

ಬೆಂಗಳೂರು: ಲಾಕ್​ಡೌನ್​, ಕೊರೊನಾ ಸಾವು ನೋವಿನಿಂದ ಸುಧಾರಿಸಿಕೊಂಡು ಯಥಾಸ್ಥಿತಿಗೆ ಸಿಲಿಕಾನ್ ಸಿಟಿ ಮರಳುತ್ತಿದೆ ಅನ್ನುವಷ್ಟರಲ್ಲಿ ಈಗ ಮತ್ತೆ ಹೆಮ್ಮಾರಿ ಆರ್ಭಟಿಸೋಕೆ ಮುಂದಾಗಿದೆ. ಇದು ಜನರ ನಿರ್ಲಕ್ಷ್ಯದಿಂದ ಅನ್ನೋದು ಮುಖ್ಯ ಕಾರಣ. ಹಾಗಿದ್ರೆ ಬೆಂಗಳೂರಿನ ಯಾವ ಏರಿಯಾ ಡೇಂಜರ್​​? ಯಾವ ಏರಿಯಾ ಸೇಫ್​​?

ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೊನಾ ಹೆಚ್ಚಾಗ್ತಿರೋ ಹಿನ್ನೆಲೆ ಗಡಿಜಿಲ್ಲೆಗಳಲ್ಲಿ ಸ್ಟ್ರಿಕ್ಟ್​ ಮಾಡಿರೋ ಸರ್ಕಾರ, ಅನ್ಯರಾಜ್ಯಗಳಿಂದ ಬರೋರನ್ನ ರೈಲ್ವೇ ನಿಲ್ದಾಣದಲ್ಲೇ ಟೆಸ್ಟ್​ ಮಾಡಿ, ರಿಪೋರ್ಟ್​ ಬರೋ ವರ್ಗೂ ಕ್ವಾರಂಟೀನ್​​ ಮಾಡಲಾಗ್ತಿದೆ. ಇಷ್ಟೆಲ್ಲಾ ಕ್ರಮಗಳನ್ನ ತೆಗೆದುಕೊಂಡ್ರೂ ನಗರದಲ್ಲಿ ಪಾಸಿಟಿವ್​ ಕೇಸ್​​ಗಳು ಹೆಚ್ಚಾಗ್ತಿದೆ.

blank

ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರವಿದ್ದು, ಅದರಲ್ಲಿ ಆರು ವಿಧಾನಸಭಾ ಕ್ಷೇತ್ರಗಳು ಡೇಂಜರ್​​ ಝೋನ್​ನಲ್ಲಿದ್ರೆ, ಮತ್ತೆ ಆರು ಕ್ಷೇತ್ರಗಳು ಸೇಫ್​​ ಝೋನ್​ನಲ್ಲಿದೆ. ಪ್ರತೀ ಕ್ಷೇತ್ರದಲ್ಲಿ 300ಕ್ಕಿಂತ ಅಧಿಕ ಆ್ಯಕ್ಟೀವ್​ ಕೇಸ್​ ದಾಖಲಾಗ್ತಿರೋದು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಹಾಗಿದ್ರೆ ಡೇಂಜರ್ ಝೋನ್​ ಮತ್ತು ಸೇಫ್​ ಝೋನ್​ಗಳಲ್ಲಿರೋ ಕ್ಷೇತ್ರಗಳಾವುವು ಅಂತ ನೋಡೋದಾದ್ರೆ,

ಡೇಂಜರ್​ ಝೋನ್​ನಲ್ಲಿರೋ ಕ್ಷೇತ್ರಗಳು​​  

ಮಹದೇವಪುರ: 455 ಸಕ್ರಿಯ ಕೇಸ್- 1.09% ಪಾಸಿಟಿವಿಟಿ ರೇಟ್

ಕೆ.ಆರ್​.ಪುರ: 376 ಸಕ್ರಿಯ ಕೇಸ್- 0.11% ಪಾಸಿಟಿವಿಟಿ ರೇಟ್

ಬೊಮ್ಮನಹಳ್ಳಿ: 341 ಸಕ್ರಿಯ ಕೇಸ್- 0.90% ಪಾಸಿಟಿವಿಟಿ ರೇಟ್

ಬೆಂಗಳೂರು ದಕ್ಷಿಣ: 337 ಸಕ್ರಿಯ ಕೇಸ್- 0.67% ಪಾಸಿಟಿವಿಟಿ ರೇಟ್

ರಾಜರಾಜೇಶ್ವರಿ ನಗರ: 332 ಸಕ್ರಿಯ ಕೇಸ್- 0.45% ಪಾಸಿಟಿವಿಟಿ ರೇಟ್

ಬ್ಯಾಟರಾಯನಪುರ: 316 ಸಕ್ರಿಯ ಕೇಸ್- 0.91% ಪಾಸಿಟಿವಿಟಿ ರೇಟ್

blank

100ರ ಗಡಿಯನ್ನೇ ದಾಟದ ಈ ವಿಧಾನಸಭಾ ಕ್ಷೇತ್ರಗಳು ಸದ್ಯ ಸೇಫ್ ಝೋನ್​ಲ್ಲಿವೆ. ಅದೇನೇ ಇರ್ಲಿ ಅನ್ಯ ದೇಶ ಮತ್ತು ರಾಜ್ಯಗಳಿಂದ ಬರುವವರು ಹೆಚ್ಚಾಗಿ ಡೇಂಜರ್​ ಝೋನ್​ನಲ್ಲಿರೋ ಕ್ಷೇತ್ರಗಳಿಗೆ ಬರೋದ್ರಿಂದ ಸೋಂಕು ಹೆಚ್ಚಾಗ್ತಿದ್ದು, ಪಾಲಿಕೆ ಕೊರೊನಾ ಕಂಟ್ರೋಲ್​ಗೆ ಬೇಕಾದ ಕಟ್ಟು ನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.

blank

ಅನ್ಯ ರಾಜ್ಯ ಮತ್ತು ದೇಶದ ಜನರು ನಮ್ಮ ಸುತ್ತ ಮುತ್ತ ಓಡಾಡ್ತಿದ್ರೂ ನಮ್ಮ ಗಮನಕ್ಕೆ ಬರೋಲ್ಲ. ಹೀಗಾಗಿ ಮಾಸ್ಕ್​​ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಹೋದ್ರಷ್ಟೇ ಮಹಾಮಾರಿಯಿಂದ ದೂರಾಗೋಕೆ ಸಾಧ್ಯ ಅನ್ನೋದನ್ನ ಜನರು ಮರೆಯಬಾರದಷ್ಟೇ.

Source: newsfirstlive.com Source link