ಓಬಿಸಿ ಬಿಲ್ ಪಾಸ್: ರಾಜ್ಯಸಭೆಯಲ್ಲಿ ಅಂಗೀಕಾರಕೊಂಡ ಮಸೂದೆ​ ಬಗ್ಗೆ ಮೋದಿ ಹೇಳಿದ್ದೇನು..?

ಓಬಿಸಿ ಬಿಲ್ ಪಾಸ್: ರಾಜ್ಯಸಭೆಯಲ್ಲಿ ಅಂಗೀಕಾರಕೊಂಡ ಮಸೂದೆ​ ಬಗ್ಗೆ ಮೋದಿ ಹೇಳಿದ್ದೇನು..?

ನವದೆಹಲಿ: ಸಂಸತ್​ನ ರಾಜ್ಯಸಭೆ ಅಧಿವೇಶನದಲ್ಲಿ ಇಂದು ಒಬಿಸಿ ಬಿಲ್​ಗೆ ಅಂಗೀಕಾರ ಸಿಕ್ಕಿದೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಈ ಬಿಲ್​ ಎರಡೂ ಮನೆಗಳಲ್ಲಿ ಅಂಗೀಕಾರಗೊಂಡಿದ್ದು ದೇಶದ ಪಾಲಿಗೆ ಮಹತ್ವದ ನಡೆ ಎಂದಿದ್ದಾರೆ.

ಸಾಂವಿಧಾನಿಕ ಬಿಲ್​ನ 127 ನೇ ತಿದ್ದುಪಡಿ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಪಾಸ್ ಆಗಿದ್ದು ಮಹತ್ವದ ನಡೆ. ಈ ಬಿಲ್​ನಿಂದಾಗಿ ಮುಂದಿನ ದಿನಗಳಲ್ಲಿ ಸಾಮಾಜಿಕ ಸಬಲೀಕರಣ ಸಾಧ್ಯವಾಗಲಿದೆ. ಅಲ್ಲದೇ ನಮ್ಮ ಸರ್ಕಾರ ಮೂಲೆಗುಂಪಾದ ಸಮುದಾಯಗಳ ಬಗ್ಗೆ ಸರ್ಕಾರಕ್ಕಿರುವ ಗೌರವ, ಅವಕಾಶ ಮತ್ತು ನ್ಯಾಯ ಒದಗಿಸುವ ಗುಣವನ್ನ ಪ್ರತಿಫಲಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯ ಸಭೆಯಲ್ಲಿ ಇಂದು ಒಬಿಸಿ ಬಿಲ್ ಮಂಡನೆ -ಏನಿದು ಮಸೂದೆ? ಏನೆಲ್ಲಾ ಲಾಭ?

ತಮ್ಮದೇ ಆದ ಪ್ರತ್ಯೇಕ ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಮಾಡಿಕೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆ ಲೋಕಸಭೆಯ ನಂತರ ಇದೀಗ ರಾಜ್ಯಸಭೆಯಲ್ಲೂ ಸಹ ಮಸೂದೆಗೆ ಅಂಗೀಕಾರವಾಗಿದೆ. ಲೋಕಸಭೆಯಲ್ಲಿ ವಿಪಕ್ಷಗಳು ಮಸೂದೆಗೆ ಬೆಂಬಲ ನೀಡಿದ್ದು, ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಲಾಗಿತ್ತು. ಮಸೂದೆಗೆ ಲೋಕಸಭೆಯ 385 ಸದಸ್ಯರ ಒಪ್ಪಿಗೆ ಸಿಕ್ಕಿತ್ತು. ನಂತರ ರಾಜ್ಯಸಭೆಯಲ್ಲೂ ಸಹ ಮಸೂದೆಯನ್ನ ಮಂಡಿಸಲಾಗಿದ್ದು ಅಂಗೀಕಾರ ಸಿಕ್ಕಿದೆ.

ಇದನ್ನೂ ಓದಿ: ಒಬಿಸಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ; ಏನಿದು ಮಸೂದೆ..?

ಏನಿದು ಒಬಿಸಿ ಮಸೂದೆ..?

ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ರಾಜ್ಯ ಸರ್ಕಾರಗಳಿಗೆ ಸಾಮಾಜಿಕ, ಶೈಕ್ಷಣಿಕ, ಮತ್ತು ಉದ್ಯೋಗ.. ಈ ಮೂರು ಮೀಸಲಾತಿಗಳನ್ನ ಹಿಂದುಳಿದ ವರ್ಗಗಳಿಗೆ ಪ್ರವೇಶ ನೀಡುವ ಹಕ್ಕು ಇರುವುದಿಲ್ಲ. ಸಂವಿಧಾನದ 102ನೇ ತಿದ್ದುಪಡಿಯಲ್ಲೂ ಇದರ ಉಲ್ಲೇಖವಿದೆ. ಇದೀಗ ಈ ಸಂವಿಧಾನದ 102ನೇ ತಿದ್ದುಪಡಿಯ ನಿಬಂಧನೆಗಳನ್ನು ಸ್ಪಷ್ಟಪಡಿಸಲು ಈ ಮಸೂದೆಯನ್ನ ಮಂಡಿಸಲಾಗುತ್ತಿದೆ. ಸಂವಿಧಾನದ 127ನೇ ತಿದ್ದುಪಡಿ ಮಸೂದೆ ಮೂಲಕ ಮಂಡನೆಯಾಗಿದೆ. ಈ ಮಸೂದೆ ಮಂಡನೆಯಾದ್ರೆ ರಾಜ್ಯಗಳಿಗೆ ಹಿಂದುಳಿದ ಜಾತಿಗಳನ್ನು ಪಟ್ಟಿ ಮಾಡುವ ಹಕ್ಕು ಸಿಗಲಿದೆ. ಮಸೂದೆ ಅಂಗೀಕಾರವಾದ ಬಳಿಕ ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶದಿಂದ ಪ್ರತ್ಯೇಕ ಪಟ್ಟಿಗಳನ್ನ ಮಾಡಲಾಗುತ್ತದೆ.

Source: newsfirstlive.com Source link