ಸಾವಿರಾರು ಕೋಟಿ ಆಸ್ತಿ ಇದ್ರೂ ಪುಟ್ಟ ಗೂಡಲ್ಲಿ ವಾಸ; ₹37 ಲಕ್ಷದ ಎಲಾನ್ ಮಸ್ಕ್ ಮನೆಗೆ ಜಗತ್ತೇ ಫಿದಾ

ಸಾವಿರಾರು ಕೋಟಿ ಆಸ್ತಿ ಇದ್ರೂ ಪುಟ್ಟ ಗೂಡಲ್ಲಿ ವಾಸ; ₹37 ಲಕ್ಷದ ಎಲಾನ್ ಮಸ್ಕ್ ಮನೆಗೆ ಜಗತ್ತೇ ಫಿದಾ

ಟೆಕ್ಸಾಸ್​: ಎಲಾನ್​ ಮಸ್ಕ್​.. ಇವ್ರು ಯಾರಿಗೆ ಗೊತ್ತಿಲ್ಲ ಹೇಳಿ. ಹೇಳಿ ಕೇಳಿ, ದೊಡ್​ ಮನುಷ್ಯರು ಅವ್ರು, ಟೆಸ್ಲಾ ಕಂಪನಿ ಸಿಇಓ ಎಲಾನ್​ ರೀವ್​ ಮಸ್ಕ್​. ಎಲಾನ್​ ಅನ್ನೋ ಹೆಸ್ರನ್ನ ಕೇಳಿದ್​ ತಕ್ಷಣ ನಿಮ್ಗೆ ಅವ್ರು ದೊಡ್ಡ  ಬಂಗ್ಲೋದಲ್ಲಿ ಇರ್ಬೋದು, ಚಿನ್ನದಲ್ಲಿ ಮನೆನ ಕಟ್ಕೊಂಡ್​ ಇರ್ಬೋದು, ಇಂಟಿರಿಯರ್ಸ್​ ಎಲ್ಲಾ ಫುಲ್​ ಡಿಸೈನರ್ ಮೇಡ್  ಆಗಿ ಇರ್ಬೋದು ಅಂತೆಲ್ಲಾ ನೀವು ಅಂದ್ಕೊಂಡಿದ್ರೆ. ನಿಮ್ಮ ಊಹೆ ತಪ್ಪು ತಪ್ಪು ತಪ್ಪು!

50 ಸಾವಿರ ಡಾಲರ್​ ಮನೆಯಲ್ಲಿದ್ದಾರೆ ಎಲಾನ್​ ಮಸ್ಕ್​
ನೀವು ನಂಬಿ ಬಿಡಿ.. ದಿನಕ್ಕೆ 50ಸಾವಿರ ಡಾಲರ್ಸ್ ಅಂದ್ರೆ ಭಾರತದ ರೂಪಾಯಿಗಳ ಪ್ರಕಾರ 37 ಲಕ್ಷ ದುಡಿಯೋ ಇವ್ರು, ಅದೇ 37 ಲಕ್ಷದ ಮನೆಯಲ್ಲಿದ್ದಾರೆ. ಅದೂ ಆ ಮನೆ ಕಟ್ಟಿರೋದಲ್ಲ, ಡಬ್ಬದ ರೂಪದಲ್ಲಿರೋ ಮನೆ. ಕಳೆದ ನವೆಂಬರ್​ನಲ್ಲಿ ಬಾಕ್ಸಬಲ್​ ಅನ್ನೋ ಕಂಪನಿ, ನಾವು ಒಂದು ಸೀಕ್ರೆಟ್ ಕಸ್ಟಮರ್​ಗೆ ತಮ್ಮ ಮನೆಯನ್ನ ಕೊಟ್ಟಿರೋದಾಗಿ ಹೇಳಿದ್ರು. ಆ ಕಸ್ಟಮರ್​ ಬೇರೇಯಾರೂ ಅಲ್ಲ, ಎಲಾನ್​ ಮಸ್ಕ್​. ಯೆಸ್​, ಚೀನಾದ ಈ ಬಾಕ್ಸಬಲ್ ಕಂಪನಿ ಟೆಕ್ಸಾಸ್​ನಲ್ಲಿ ಎಲಾನ್ರಿಗೆ ಈ ಬಾಕ್ಸಬಲ್​ನ ಒಂದು ಮನೆ ಕೊಟ್ಟಿದ್ದಾರೆ. ಹೊರಗೆಡಯಿಂದ ನೋಡೋದಕ್ಕೆ ಪುಟ್ಟದಾಗಿ ಕಾಣ್ಬೋದು, ಆದ್ರೆ ಒಳ್ಗಡೆ ಹೋದ್ರೆ ಯಾವ ಅರಮನೆಗೂ ಕಮ್ಮಿ ಇಲ್ಲ, ಹಂಗಿದೆ ಮನೆ. ಈ ಬಗ್ಗೆ, ಸ್ವತಹ ಎಲಾನ್​ ಮಸ್ಕ್​ ತಾವೇ ಜೂನ್​ನಲ್ಲಿ ಮನೆ ಬಗ್ಗೆ ಟ್ವೀಟ್​ ಮಾಡಿದ್ದರು. ​

ಅಷ್ಟಕ್ಕೂ, ಎಲಾನ್​ ಮಸ್ಕ್​ರ ಮನೆ ಹೇಗಿದ್ದೆ, ಅನ್ನೋದನ್ನ ಈ ವೀ

Source: newsfirstlive.com Source link