‘ಹೆಜ್ಜೆ’ಗಾಗಿ ಮತ್ತೆ ಒಂದಾಗ್ತಿದೆ ಹಿಟ್ ಕಾಂಬಿನೇಷನ್ ಹೆಚ್​ಡಿಕೆ-ಎಸ್​ ನಾರಾಯಣ್​ ಜೋಡಿ

‘ಹೆಜ್ಜೆ’ಗಾಗಿ ಮತ್ತೆ ಒಂದಾಗ್ತಿದೆ ಹಿಟ್ ಕಾಂಬಿನೇಷನ್ ಹೆಚ್​ಡಿಕೆ-ಎಸ್​ ನಾರಾಯಣ್​ ಜೋಡಿ

ಬೆಂಗಳೂರು: ನಿರ್ಮಾಪಕ ಹೆಚ್​.ಡಿ.ಕುಮಾರಸ್ವಾಮಿ ಹಾಗೂ ನಿರ್ದೇಶಕ ಎಸ್.ನಾರಾಯಣ್ ಮತ್ತೆ ಒಂದಾಗ್ತಿದ್ದಾರೆ. ‘ಹೆಜ್ಜೆ’ ಎಂಬ ಕಾದಂಬರಿಯನ್ನು ಸಿನಿಮಾ ಮಾಡಲು ಹಿಟ್ ಕಾಂಬಿನೇಷನ್ ರೆಡಿಯಾಗಿದೆ ಎನ್ನಲಾಗಿದೆ.

ಹೆಜ್ಜೆ ಕಾದಂಬರಿಯನ್ನು ಸಿನಿಮಾ ಮಾಡಲು ಈಗಾಗಲೇ ಮಾತುಕತೆ ಮುಗಿಸಿದ್ದು, ಈ ಚಿತ್ರಕ್ಕೆ ಸ್ಟಾರ್ ನಟರನ್ನು ಕರೆತರಲು ಈಗಾಗ್ಲೆ, ನಾರಾಯಣ್ ತಯಾರಿ ಮಾಡ್ತಿದ್ದಾರಂತೆ. ಶೀಘ್ರದಲ್ಲೇ ಚಿತ್ರದ ನಾಯಕ ಯಾರು ಎಂದು ರಿವೀಲ್ ಮಾಡ್ತಿವಿ ಅಂತ ಎಸ್. ನಾರಾಯಣ್ ನ್ಯೂಸ್​ಫಸ್ಟ್​ಗೆ ತಿಳಿಸಿದ್ದಾರೆ.

ಇನ್ನು ಚಿತ್ರದಲ್ಲಿ ಬಹುದೊಡ್ಡ ತಾರಾಬಳಗ ಇರಲಿದ್ದು ಚಿತ್ರಕ್ಕೆ ‘ಹೆಜ್ಜೆ’ ಎಂದೇ ಟೈಟಲ್ ಇಡಬೇಕು ಎಂಬುದು ನನಗೆ ಹಾಗೂ ಕುಮಾರ್ ಸ್ವಾಮಿ ಅವರಿಗೆ ಆಸೆ ಇದೆ. ಆದ್ರೆ ಇನ್ನೂ ಫೈನಲ್ ಆಗಿಲ್ಲ.. ಇನ್ನೊಂದು ವಾರದಲ್ಲಿ ಎಲ್ಲಾ ಫೈನಲ್ ಆಗಲಿದೆ ಅಂತ ಹೇಳಿದ್ದಾರೆ.

Source: newsfirstlive.com Source link