ಇಂದಿನಿಂದ ಇಂಗ್ಲೆಂಡ್​ ವಿರುದ್ಧ 2ನೇ ಟೆಸ್ಟ್​ ಹಣಾಹಣಿ; ಟೀಂ ಇಂಡಿಯಾಗೆ ಇರೋ ಚಾಲೆಂಜ್ ಏನು..?

ಇಂದಿನಿಂದ ಇಂಗ್ಲೆಂಡ್​ ವಿರುದ್ಧ 2ನೇ ಟೆಸ್ಟ್​ ಹಣಾಹಣಿ; ಟೀಂ ಇಂಡಿಯಾಗೆ ಇರೋ ಚಾಲೆಂಜ್ ಏನು..?

ನಾಟಿಂಗ್​​ಹ್ಯಾಮ್​​​ನಲ್ಲಿ ಗೆಲುವಿನ ಕನವರಿಕೆಯಲ್ಲಿದ್ದ ಟೀಮ್ ಇಂಡಿಯಾ, ಈಗ ಕ್ರಿಕೆಟ್ ಕಾಶಿಯಲ್ಲಿ ಗೆಲ್ಲೋ ಛಲದಲ್ಲಿದೆ. ಆದ್ರೆ ಲಾರ್ಡ್ಸ್​ ಅಂಗಳದಲ್ಲಿ ಟೀಮ್ ಇಂಡಿಯಾಗೆ ಗೆಲುವು ಬಿಗ್ ಚಾಲೆಂಜ್ ಅಂತಿದ್ದಾರೆ. ಹಾಗಾದ್ರೆ, ನಾವ್ ಗೆದ್ದೇ ಗೆಲ್ತೇವೆ ಅನ್ನೋ ಆತ್ಮವಿಶ್ವಾಸದಲ್ಲಿರುವ ವಿರಾಟ್​ ಪಡೆ ಮೆಟ್ಟಿ ನಿಲ್ಲಬೇಕಾದ ಸವಾಲುಗಳೇನು?

blank

ಭಾರತ, ಇಂಗ್ಲೆಂಡ್ ಎರಡನೇ ಟೆಸ್ಟ್​ ಪಂದ್ಯ, ಇಂದು ನಡೆಯಲಿದೆ. ಮದಗಜಗಳ ಈ ಕಾದಾಟಕ್ಕೆ ಕ್ರಿಕೆಟ್​ ಕಾಶಿ ಸಜ್ಜಾಗಿದ್ದು, ವಿಶ್ವ ಕ್ರಿಕೆಟ್ ಅಭಿಮಾನಿಗಳ ಚಿತ್ತ ಲಾರ್ಡ್ಸ್​ನತ್ತ ನೆಟ್ಟಿದೆ. ನಾಟಿಂಗ್​ಹ್ಯಾಮ್​​ನಲ್ಲಿ ಗೆಲ್ಲೋ ಸುವಾರ್ಣಾವಕಾಶವೊಂದಿದ್ದ ಟೀಮ್ ಇಂಡಿಯಾ, ವರುಣ ಅವಕೃಪೆಯಿಂದಾಗಿ ನಿರಾಸೆ ಅನುಭವಿಸಬೇಕಾಯ್ತು. ಆದ್ರೆ ಕ್ರಿಕೆಟ್​ ಕಾಶಿಯಲ್ಲಿ ಟೀಮ್ ಇಂಡಿಯಾ, ಕ್ರಿಕೆಟ್ ಜನಕರನ್ನ ಬಗ್ಗುಬಡಿಯೋ ಪ್ಲಾನ್ ಮಾಡಿಕೊಂಡಿದೆ. ಇದಕ್ಕಾಗಿ ಕೆಲ ಸವಾಲುಗಳನ್ನ ಮೆಟ್ಟಿ ನಿಲ್ಲಲು ರೆಡಿಯಾಗಿದೆ.

ಟೆಸ್ಟ್​ ಕ್ರಿಕೆಟ್​​ನಲ್ಲಿ ಹಿಟ್​​ಮ್ಯಾನ್ ತೋರಿಸಬೇಕು ಧಮ್..!
ವೈಟ್​ಬಾಲ್ ಕ್ರಿಕೆಟ್​ನಲ್ಲಿ ಖದರ್ ತೋರಿಸುವ ರೋಹಿತ್ ಶರ್ಮಾ, ರಿಯಲ್​​​ ಕ್ರಿಕೆಟ್​ನಲ್ಲಿ ಅಸಲಿ ಧಮ್​ ತೋರಿಲ್ಲ. ಅದ್ರಲ್ಲೂ ವಿದೇಶದಲ್ಲಿ ಫ್ಲಾಪ್ ಪಟ್ಟ ಹೊಂದಿರುವ ಹಿಟ್​ಮ್ಯಾನ್, ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ಸೂಪರ್​ ಹಿಟ್​ ಇನ್ನಿಂಗ್ಸ್​​ ಕಟ್ಟಬೇಕಿದೆ. ಅಷ್ಟೆ ಅಲ್ಲ..! ಇಂಗ್ಲೆಂಡ್ ಕಂಡೀಷನ್ಸ್​ನಲ್ಲಿ ರೋಹಿತ್ ಆಟ ನಡೆಯಲ್ಲ ತಮ್ಮ ಖದರ್​ ಏನೆಂದು ಸಾಬೀತು ಪಡೆಸಬೇಕಿದೆ.

ಮಯಾಂಕ್ ಫಿಟ್- ಕನ್ನಡಿಗನಿಗೆ ಸಿಗುತ್ತಾ ಸ್ಥಾನ..?
ಮೊದಲ ಪಂದ್ಯಕ್ಕೂ ಮುನ್ನ ಕನ್ಕಷನ್​ಗೆ ಒಳಗಾಗಿದ್ದ ಮಾಯಂಕ್, ಈಗ ಫೂಲ್ ಫಿಟ್ ಆಗಿದ್ದಾರೆ. ನೆಟ್ಸ್​ನಲ್ಲಿ ಚೆಂಡನ್ನ ಬಡಿದಟ್ಟುತ್ತಿರುವ ಮಯಾಂಕ್, ಲಾರ್ಡ್ಸ್​ನಲ್ಲಿ ಕಣಕ್ಕಿಳಿಯುವ ಕನಸಿನಲ್ಲಿದ್ದಾರೆ. ಆದ್ರೆ, ರಾಹುಲ್ ಸೂಪರ್ ಪರ್ಫಾಮೆನ್ಸ್​ ಮಯಾಂಕ್​ಗೆ ಮಂಕಾಗಿಸಿದ್ದರು. ಹೀಗಾಗಿ ಮಯಾಂಕ್​​ಗೆ ಬೆಂಚ್ ಗ್ಯಾರಂಟೀನಾ ಅನ್ನೋ ಪ್ರಶ್ನೆ ಶುರುವಾಗಿದೆ.

ಶಾರ್ದುಲ್ ಬದಲಿಗೆ ಯಾರು..? ಅblankಶ್ವಿನ್, ಇಶಾಂತ್, ಉಮೇಶ್
ಮೊದಲ ಪಂದ್ಯದಲ್ಲಿ ಗಮನ ಸೆಳೆದಿದ್ದ ಶಾರ್ದೂಲ್, 2ನೇ ಟೆಸ್ಟ್ ಪಂದ್ಯದಿಂದ ಔಟ್​ ಆಗಿದ್ದಾರೆ. ಹೀಗಾಗಿ ಹನ್ನೋದರಲ್ಲಿ ಸ್ಥಾನ ಪಡೆಯೋಕೆ ಮೂವರು ಪೈಪೋಟಿ ನಡೆಸ್ತಿದ್ದಾರೆ. ಈ ಪೈಕಿ ಅನುಭವಿ ಅಶ್ವಿನ್ ಮೊದಲ ಸ್ಥಾನದಲ್ಲಿದ್ರೆ, ಇಶಾಂತ್, ಜೊತೆಗೆ ಉಮೇಶ್ ಸಪ್ರೈಸ್​ ಎಂಟ್ರಿ ಪಡೆಯೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಲಾರ್ಡ್ಸ್​ನಲ್ಲಿ ಅಬ್ಬರಿಸಬೇಕಿದೆ ಕಿಂಗ್ ಕೊಹ್ಲಿ..!
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿದ್ದ ಕೊಹ್ಲಿಗೆ, ಲಾರ್ಡ್ಸ್​ ನಿಜಕ್ಕೂ ಚಾಲೆಂಜ್ ಆಗಿದೆ. ಸುಮಾರು 630 ದಿನಗಳಿಂದ ಶತಕದ ಬರ ಎದುರಿಸ್ತಿರುವ ವಿರಾಟ್, ಈಗ ಆಂಗ್ಲರ ಎದುರು ಅಬ್ಬರಿಸಲು ಕಠಿಣ ಸಿದ್ಧತೆ ನಡೆಸಿದ್ದಾರೆ.

blank

ಅಷ್ಟೇ ಅಲ್ಲ..! ಇಂಗ್ಲೆಂಡ್​ನ ಸೀಮ್ ಆ್ಯಂಡ್ ಸ್ವಿಂಗ್ ಕಂಡೀಷನ್ಸ್​ನಲ್ಲಿ ಟೀಮ್ ಇಂಡಿಯಾ ದಾಂಡಿಗರು ಪರದಾಟ ನಡೆಸ್ತಾರೆ. ಲಾರ್ಡ್ಸ್​ನ ಗ್ರೀನ್ ಟ್ರ್ಯಾಕ್​​ನಲ್ಲಿ,​​ ಭಾರತೀಯರ ಮುಂದೆ ದೊಡ್ಡ ಸವಾಲಿದೆ. ಹೀಗಾಗಿ ಈ ಹಿಂದಿನ ಕಳಪೆ ದಾಖಲೆ ಬದಿಗೊತ್ತಿ, ಆತ್ಮವಿಶ್ವಾಸದ ಬ್ಯಾಟಿಂಗ್ ನಡೆಸಬೇಕಿದೆ.

Source: newsfirstlive.com Source link