ಕಾರಿಗೆ ಬೆಂಕಿ: ಯಾರೋ ದುರಾಲೋಚನೆಯ ಮೆಸೇಜ್ ಪಾಸ್ ಮಾಡಿದ್ದಾರೆ -ಸತೀಶ್ ರೆಡ್ಡಿ ಆಕ್ರೋಶ

ಕಾರಿಗೆ ಬೆಂಕಿ: ಯಾರೋ ದುರಾಲೋಚನೆಯ ಮೆಸೇಜ್ ಪಾಸ್ ಮಾಡಿದ್ದಾರೆ -ಸತೀಶ್ ರೆಡ್ಡಿ ಆಕ್ರೋಶ

ಬೆಂಗಳೂರು: ಯಾರೋ ಒಂದು ದುರಾಲೋಚನೆಯ ಮೆಸೇಜ್ ಪಾಸ್ ಮಾಡಿದ್ದಾರೆ. ಯಾರ ಮನೆಯಲ್ಲಿ ಏನು ಬೇಕಾದ್ರೂ ಮಾಡಬಹುದು ಅಂತಾ ತೋರಿಸೋಕೆ ನನ್ನ ಕಾರುಗಳಿಗೆ ಬೆಂಕಿ ಇಟ್ಟಿದ್ದಾರೆ ಅಂತಾ ಶಾಸಕ ಸತೀಶ್ ರೆಡ್ಡಿ ಕಿಡಿಕಾರಿದ್ದಾರೆ.

ಮಧ್ಯರಾತ್ರಿ ತಮ್ಮ ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ರಾತ್ರಿ 1 ಗಂಟೆ 23 ನಿಮಿಷಕ್ಕೆ ಇಬ್ಬರು ದುಷ್ಕರ್ಮಿಗಳು ಎಂಟ್ರಿಯಾಗಿದ್ದಾರೆ. ಬೆಂಕಿ ಹಚ್ಚಿದ ಬಳಿಕ ಹಿಂದಿನ ಗೇಟ್​​ನಿಂದ ಇಬ್ಬರು ಎಸ್ಕೇಪ್ ಆಗಿದ್ದಾರೆ. ಹಿಂದಿನ ಗೇಟ್ ನಲ್ಲಿ ಸಿಸಿಟಿವಿ ಇದೆ, ಆದರೆ ಅದರಲ್ಲಿ ಮುಖ ಸರಿಯಾಗಿ ಕಾಣಿಸುತ್ತಿಲ್ಲ. ಪೊಲೀಸ್, ವಾಚ್​ಮನ್ ಇಬ್ಬರೂ ಮುಂದಿನ ಗೇಟಿನ ಬಳಿ ಇದ್ದರು.

ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿಯ ಫಾರ್ಚೂನರ್ ಸೇರಿ 2 ಕಾರಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

blank

ಬೈಕ್​ಗಳಲ್ಲಿ ಇಬ್ಬರು ಬಂದಿದ್ದರು ಅನ್ನೋದು ಗೊತ್ತಾಗಿದೆ. ಪೊಲೀಸರು ಈಗಾಗಲೇ ತನಿಖೆಯನ್ನ ಆರಂಭಿಸಿದ್ದಾರೆ. ನನಗೆ ಇಲ್ಲಿ ಯಾವುದೇ ರಾಜಕೀಯ ವೈಷಮ್ಯ ಇಲ್ಲ. ರಾಜಕೀಯ ದ್ವೇಷದ ಹಿನ್ನೆಲೆಯಿಂದಲೇ ನಡೆದಿದೆ ಅಂತಾ ಅನಿಸುತ್ತಿಲ್ಲ. ಇದನ್ನ ರಾಜಕೀಯವಾಗಿ ತೆಗೆದುಕೊಳ್ಳುವುದನ್ನ ನಿರಾಕರಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಸತೀಶ್​ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಕೇಸ್: ಕೇವಲ 3 ನಿಮಿಷದಲ್ಲಿ ಬೆಂಕಿಯಿಟ್ಟು ದುಷ್ಕರ್ಮಿಗಳು ಎಸ್ಕೇಪ್

Source: newsfirstlive.com Source link