ಜರ್ಮನ್​​​ನಲ್ಲಿ ಸುಮಾರು 8,600 ಮಂದಿಗೆ ನಕಲಿ ಲಸಿಕೆ ನೀಡಿದ್ರಾ ನರ್ಸ್​​​? ನಡೆದಿದ್ದೇನು?

ಜರ್ಮನ್​​​ನಲ್ಲಿ ಸುಮಾರು 8,600 ಮಂದಿಗೆ ನಕಲಿ ಲಸಿಕೆ ನೀಡಿದ್ರಾ ನರ್ಸ್​​​? ನಡೆದಿದ್ದೇನು?

ಜರ್ಮನ್​​ನಲ್ಲಿ ಸುಮಾರು 8,600 ಮಂದಿಗೆ ನಕಲಿ ಕೋವಿಡ್​​-19 ಲಸಿಕೆ ನೀಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ರೆಡ್​​ ಕ್ರಾಸ್​​ ಸಂಸ್ಥೆಯ ನರ್ಸ್ ಒಬ್ಬರು ​​ಕೊರೋನಾ ರೋಗಿಗಳಿಗೆ ಕೋವಿಡ್​​​-19 ಲಸಿಕೆ ಬದಲಿಗೆ ಲವಣಯುಕ್ತ ದ್ರಾವಣವನ್ನು ಚುಚ್ಚಿರಬಹುದು ಎಂಬ ಶಂಕೆ ಜರ್ಮನ್​​ ಪೊಲೀಸರು ವ್ಯಕ್ತಪಡಿಸಿದ್ದಾರೆ. 

ಕೊರೋನಾ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಕೋವಿಡ್​​-19 ಲಸಿಕೆ ನೀಡಿ ವೈರಸ್​​ ತಡೆಗೆ ಜರ್ಮನ್​​ ಮುಂದಾಗಿದೆ. ಆದರೀಗ, ಕೆಲವು ಕಡೆ ಕೋವಿಡ್​​-19 ಲಸಿಕೆ ಬದಲಿಗೆ ಹೀಗೆ ಲವಣಯುಕ್ತ ದ್ರಾವಣವನ್ನು ನೀಡುತ್ತಿರುವ ಕೆಲಸಗಳು ನಡೆಯುತ್ತಿವೆ. ಇದರಿಂದ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜರ್ಮನ್​ ಪೊಲೀಸರು ನರ್ಸ್​​​ ಅನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಈ ಸಂಬಂಧ ಮಾತಾಡಿದ ಲೋಕಲ್​​ ಕೌನ್ಸಿಲರ್​​, ಕೋವಿಡ್​​​ ಲಸಿಕೆ ಬದಲಿಗೆ ಲವಣಯುಕ್ತ ದ್ರಾವಣವನ್ನು ನೀಡಿದ್ದಾರೆ ಎನ್ನಲಾದ ಸುದ್ದಿ ಕೇಳಿ ಶಾಕ್​​ ಆಯ್ತು. ಯಾರು ಈ ನರ್ಸ್​​ ಬಳಿ ಲಸಿಕೆ ಎಂದು ಲವಣಯುಕ್ತ ದ್ರಾವಣವನ್ನು ತೆಗೆದುಕೊಂಡಿದ್ದೀರೋ ಎಲ್ಲರು ಮತ್ತೊಮ್ಮೆ ಕೋವಿಡ್​​-19 ವ್ಯಾಕ್ಸಿನ್​​ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Source: newsfirstlive.com Source link