ಲಾರ್ಡ್ಸ್​​​ ಟೆಸ್ಟ್​ಗೂ ಮುನ್ನವೇ ಟೀಂ ಇಂಡಿಯಾಗೆ ಕಾಡ್ತಿದೆ ‘ಆ’ ಆತಂಕ..!

ಲಾರ್ಡ್ಸ್​​​ ಟೆಸ್ಟ್​ಗೂ ಮುನ್ನವೇ ಟೀಂ ಇಂಡಿಯಾಗೆ ಕಾಡ್ತಿದೆ ‘ಆ’ ಆತಂಕ..!

ಮೊದಲ ಟೆಸ್ಟ್​ ಪಂದ್ಯದಲ್ಲಿ ಭರವಸೆಯ ಪ್ರದರ್ಶನ ನೀಡಿರುವ ಭಾರತ, ಲಾರ್ಡ್ಸ್​​ ಅಂಗಳದಲ್ಲಿ ಅದೇ ಪರ್ಫಾಮೆನ್ಸ್​ ನೀಡೋದು ಸಿಕ್ಕಾಪಟ್ಟೆ ಕಷ್ಟ..! ಯಾಕಂದ್ರೆ ಈ ಹಿಂದಿನ ಅಂಕಿ-ಅಂಶಗಳೇ ಅದನ್ನ ನಿರೂಪಿಸ್ತಿವೆ. ಕ್ರಿಕೆಟ್​​ ಕಾಶಿಯಲ್ಲಿ ಭಾರತಕ್ಕೆ ಹಿನ್ನಡೆಯಾಗಿರೋ ಅಂಶಗಳ್ಯಾವುವು? ಇಲ್ಲಿದೆ ಡಿಟೇಲ್ಸ್​.

blank

ನಾಟಿಂಗ್​ಹ್ಯಾಮ್​ನ ಟ್ರೆಂಟ್​ ಬ್ರಿಡ್ಜ್​ನಿಂದ ಟೀಮ್​ ಇಂಡಿಯಾ ಕ್ರಿಕೆಟ್​​ ಕಾಶಿ ಲಾರ್ಡ್ಸ್​​ಗೆ ಕಾಲಿಟ್ಟಿದೆ. ಅಭಿಮಾನಿಗಳ ಚಿತ್ತವೂ ಮೊದಲ ಟೆಸ್ಟ್​ನಿಂದ 2ನೇ ಟೆಸ್ಟ್​​ ಕಡೆಗೆ ಶಿಫ್ಟ್ ಆಗಿದೆ. ಅದರ ಜೊತೆಗೆ ಸೋಲು ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ.

ಟ್ರೆಂಟ್​ಬ್ರಿಡ್ಜ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​​ 181 ರನ್​ಗಳಿಗೆ ಆಲೌಟ್​ ಆದ್ರೆ, ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 278 ರನ್​ ಕಲೆ ಹಾಕುವಲ್ಲಿ ಯಶಸ್ಸು ಕಂಡಿತ್ತು. ಹಲವು ಸ್ಟಾರ್​​ಗಳ ವೈಫಲ್ಯದ ಹೊರತಾಗಿಯೂ, ಭಾರತದ ಮೊದಲ ಇನ್ನಿಂಗ್ಸ್​ನ ಬ್ಯಾಟಿಂಗ್​ ಭರವಸೆ ಮೂಡಿಸಿತ್ತು. ಆದ್ರೆ ಲಾರ್ಡ್ಸ್​​ ಅಂಗಳದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಈ ಪ್ರದರ್ಶನವನ್ನ ನೀಡೋದು ಬಹುತೇಕ ಅನುಮಾನವಾಗಿದೆ.

blank

ವಿರಾಟ್​ ಕೊಹ್ಲಿ, ಅಜಿಂಕ್ಯಾ ರಹಾನೆ, ಚೇತೇಶ್ವರ್​​ ಪೂಜಾರ ಈ ಮೂವರು ಬಿಗ್ ​ಸ್ಟಾರ್​​ಗಳು, ಮೊದಲ ಟೆಸ್ಟ್​ನಲ್ಲಿ ವೈಫಲ್ಯ ಕಂಡ್ರು. ಜವಾಬ್ಧಾರಿಯುತ ಇನ್ನಿಂಗ್ಸ್​ ಕಟ್ಟಿದ ಕೆ.ಎಲ್​ ರಾಹುಲ್,​ ತಂಡಕ್ಕೆ ಆಸರೆಯಾದ್ರು. ಆದ್ರೆ ಲಾರ್ಡ್ಸ್​​​​​ ಅಂಗಳದ ಇತಿಹಾಸ ನೋಡಿದ್ರೆ, ಆಸರೆಯಾಗಿದ್ದ ರಾಹುಲ್​ ಕೂಡ ಇಲ್ಲಿ ಡಮ್ಮಿಯಾಗ್ತಾರಾ ಅನ್ನೋ ಅನುಮಾನ ಮೂಡಿದೆ.

ಲಾರ್ಡ್ಸ್​​ನಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು
ಲಾರ್ಡ್ಸ್​​ನಲ್ಲಿ ಈವರೆಗೆ 1 ಪಂದ್ಯವನ್ನಾಡಿರುವ ರಾಹುಲ್​ 9.00ರ ಸರಾಸರಿಯಲ್ಲಿ ರನ್​ ಕಲೆ ಹಾಕಿದ್ರೆ, 2 ಪಂದ್ಯವನ್ನಾಡಿರುವ ವಿರಾಟ್​ ಕೊಹ್ಲಿ 16.25, ಚೇತೇಶ್ವರ್ ಪೂಜಾರ 22.25ರ ಌವರೇಜ್​ನಲ್ಲಿ ರನ್​ಗಳಿಸಿದ್ದಾರೆ. ಇನ್ನು 34.75ರ ಸರಾಸರಿಯಲ್ಲಿ ಉಪನಾಯಕ ಅಜಿಂಕ್ಯಾ ರಹಾನೆ ರನ್​ ಕಲೆ ಹಾಕಿರೋದು ತಂಡಕ್ಕೆ ಸಮಾಧಾನವಾಗಿದ್ರೂ, ಕೆಲ ಪಂದ್ಯಗಳ ಸತತ ವೈಫಲ್ಯ ಆ ಭರವಸೆಯನ್ನೂ ಕಸಿದುಕೊಂಡಿದೆ.

blank

ನಂಬಿಕಸ್ಥ ಬ್ಯಾಟಮನ್​ಗಳ ಈ ಕಳಪೆ ಟ್ರ್ಯಾಕ್​ ರೆಕಾರ್ಡ್,​ ಮ್ಯಾನೇಜ್​ಮೆಂಟ್​ ತಲೆನೋವು ಹೆಚ್ಚಿಸಿದೆ. ಆದ್ರೆ ಲಾರ್ಡ್ಸ್​ನಲ್ಲಿ ರವಿಂದ್ರ ಜಡೇಜಾ 35.50ರ ಸರಾಸರಿ ಹೊಂದಿರೋದು ಸ್ವಲ್ಪ ಸಮಾಧಾನ ತಂದಿದೆ. ಆದ್ರೆ, ರವಿಚಂದ್ರನ್​ ಅಶ್ವಿನ್​ ಕ್ರಿಕೆಟ್​ ಕಾಶಿಯಲ್ಲಿ ನೀಡಿರೋ ಪ್ರದರ್ಶನ ಮತ್ತೆ ಗೊಂದಲಕ್ಕೀಡು ಮಾಡಿದೆ. ಅಶ್ವಿನ್​ ಲಾರ್ಡ್ಸ್​ನಲ್ಲಿ 62ರ ಸರಾಸರಿಯಲ್ಲಿ ಬ್ಯಾಟಿಂಗ್​ ನಡೆಸಿದ್ದಾರೆ. ಹೀಗಾಗಿ ಆಯ್ಕೆಯ ವಿಚಾರ ಮತ್ತೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಇಂದಿನಿಂದ ಇಂಗ್ಲೆಂಡ್​ ವಿರುದ್ಧ 2ನೇ ಟೆಸ್ಟ್​ ಹಣಾಹಣಿ; ಟೀಂ ಇಂಡಿಯಾಗೆ ಇರೋ ಚಾಲೆಂಜ್ ಏನು..?

Source: newsfirstlive.com Source link