ತಾಂತ್ರಿಕ ದೋಷ: GSLV-F10 ಮಿಷನ್​​ ವಿಫಲ ಎಂದ ಇಸ್ರೋ

ತಾಂತ್ರಿಕ ದೋಷ: GSLV-F10 ಮಿಷನ್​​ ವಿಫಲ ಎಂದ ಇಸ್ರೋ

ಭಾರತದ ಅತ್ಯಾಧುನಿಕ ಜಿಯೋ-ಇಮೇಜಿಂಗ್ ಉಪಗ್ರಹ GSLV-F10 ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆಯಾದರೂ ಉದ್ದೇಶಿತ ಗುರಿ ತಲುಪುವಲ್ಲಿ ವಿಫಲವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

ಕ್ರಯೋಜೆನಿಕ್​​ ಹಂತದ ವೇಳೆ ಉಂಟಾದ ತಾಂತ್ರಿಕ ದೋಷದಿಂದಾಗಿ GSLV-F10 ಮಿಷಕ್​​ ವಿಫಲಾಗಿದೆ. ಹೀಗಾಗಿ ಇದು ಉದ್ದೇಶಿತ ಗುರಿ ತಲುಪಿದೆ ಎಂದು ಹೇಳಲಾಗುವುದಿಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ.

ಇಸ್ರೋದ ಮತ್ತೊಂದು ಉಪಗ್ರಹ ಆಗಸ್ಟ್​ 12ನೇ ತಾರೀಕಿನಂದು ಬೆಳಿಗ್ಗೆ 5;43ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಯಾಯ್ತು. ಕಳೆದ ಫೆಬ್ರವರಿ 28ರಂದು, ಇಸ್ರೋ 18 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅದರಲ್ಲಿ ಪ್ರಾಥಮಿಕ ಬ್ರೆಜಿಲ್‌ನ ಅಮೆಜೋನಿಯಾ-1 ಉಪಗ್ರಹ ಮತ್ತು ಕೆಲವು ದೇಸೀ ಉಪಗ್ರಹಗಳನ್ನು ಹೊಂದಿದ್ದು, ನಿನ್ನೆ ಇದರ ಉಡಾವಣೆಯಾಗಿದೆ.

ಇದನ್ನೂ ಓದಿ: ಅಂತರಿಕ್ಷಕ್ಕೆ ಹಾರಿದ ಇಸ್ರೋ ರಾಕೆಟ್; ಈ ಉಪಗ್ರಹದ ವಿಶೇಷತೆ ಏನು ಗೊತ್ತಾ?

ಇದು ಪ್ರಕೃತಿ ವಿಕೋಪಗಳು ಮತ್ತು ಮೋಡ ಸ್ಫೋಟಗಳು ಅಥವಾ ಗುಡುಗು ಸಹಿತ ಹವಾಮಾನ ಘಟನೆಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ ಎಂದು ಇಸ್ರೋ ತಿಳಿಸಿತ್ತು.

Source: newsfirstlive.com Source link