ಟೀಂ ಇಂಡಿಯಾದಲ್ಲಿ ಬಿಗ್ ಡೆವಲಪ್ಮೆಂಟ್! ವಿಶ್ವಕಪ್​​ ಬಳಿಕ ವಿರಾಟ್​ ಸೇನೆಗೆ ಹೊಸ ‘ಗುರು’!?

ಟೀಂ ಇಂಡಿಯಾದಲ್ಲಿ ಬಿಗ್ ಡೆವಲಪ್ಮೆಂಟ್! ವಿಶ್ವಕಪ್​​ ಬಳಿಕ ವಿರಾಟ್​ ಸೇನೆಗೆ ಹೊಸ ‘ಗುರು’!?

ಟಿ-20 ವಿಶ್ವಕಪ್​ ಬಳಿಕ ಕೋಚ್​ ರವಿ ಶಾಸ್ತ್ರಿ ಅವಧಿ ಮುಕ್ತಾಯಗೊಳ್ಳಲಿದೆ. ಆ ನಂತರ ಕೋಚ್​​ ಯಾರಾಗ್ತಾರೆ ಅನ್ನೋದು ಕುತೂಹಲವನ್ನ ಹುಟ್ಟುಹಾಕಿದೆ. ಆದರೆ ಕೋಚ್​ ರವಿ ಶಾಸ್ತ್ರಿ ಮತ್ತು ಕೋಚಿಂಗ್​ ಸಿಬ್ಬಂದಿಯ ಮುಂದಿನ ನಡೆ ಏನು..?

ಭಾರತ ತಂಡದ ನೂತನ ಕೋಚ್​ ಆಗಿ ರಾಹುಲ್​ ದ್ರಾವಿಡ್​ ಆಯ್ಕೆ ಔಪಚಾರಿಕವೇ? ಟಿ20 ವಿಶ್ವಕಪ್ ನಂತರ ರವಿ ಶಾಸ್ತ್ರಿ ನಿರ್ಗಮಿಸುವುದು ಖಚಿತವೇ? ಈ ಎಲ್ಲಾ ಪ್ರಶ್ನೆಗಳಿಗೆ ಹೌದೆನ್ನೋದೇ ಉತ್ತರ ಆಗಿದೆ. ಆ ಮೂಲಕ ತಂಡದ ಕೋಚಿಂಗ್​ ವಿಭಾಗ ಪ್ರಮುಖ ಬದಲಾವಣೆಗೆ ಒಳಪಡ್ತಿದ್ದು, ವಿರಾಟ್ ಕೊಹ್ಲಿ ನೇತೃತ್ವದ ತಂಡ ಟಿ20 ವಿಶ್ವಕಪ್ ನಂತರ ಹೊಸ ಯುಗಕ್ಕೆ ನಾಂದಿ ಹಾಡಲಿದೆ.

blank

ಕೋಚ್ ಹುದ್ದೆಗೆ ವಿದಾಯ ಹೇಳುವುದಾಗಿ ರವಿ ಶಾಸ್ತ್ರಿ ಈಗಾಗಲೇ, ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ಏಕೆಂದರೆ ವಿಶ್ವಕಪ್​ಗೆ ರವಿ ಶಾಸ್ತ್ರಿ ಒಪ್ಪಂದ ಮಗಿಯಲಿದ್ದು, ಅದರೊಂದಿಗೆ ಬಿಸಿಸಿಐ ಮತ್ತೆ ಹೊಸ ಮುಖ್ಯ ಕೋಚ್‌ ಮತ್ತು ಸಹಾಯಕ ಕೋಚ್‌ಗಳಿಗಾಗಿ ಅರ್ಜಿಗಳನ್ನ ಆಹ್ವಾನಿಸಲಿದೆ. ಒಂದ್ವೇಳೆ ರವಿ ಶಾಸ್ತ್ರಿ ನಿರ್ಗಮಿಸಲು ಬಯಸಿದ್ರೆ, ನೂತನ ಕೋಚ್ ಆಯ್ಕೆಯಲ್ಲಿ ದ್ರಾವಿಡ್ ಮುಂಚೂಣಿಯಲ್ಲಿ ಗುರುತಿಸಿದ್ದಾರೆ.

ಇದನ್ನೂ ಓದಿ: ಲಾರ್ಡ್ಸ್​​​ ಟೆಸ್ಟ್​ಗೂ ಮುನ್ನವೇ ಟೀಂ ಇಂಡಿಯಾಗೆ ಕಾಡ್ತಿದೆ ‘ಆ’ ಆತಂಕ..!

ಅಂಡರ್-19, ಭಾರತ-ಎ ತಂಡ ಕೋಚ್ ಆಗಿ ದ್ರಾವಿಡ್ ಕಾರ್ಯನಿರ್ವಹಿಸಿದ್ದಾರೆ. NCA ಮುಖ್ಯಸ್ಥರಾಗಿ ಬೆಂಚ್​ ಸ್ಟ್ರೆಂಥ್ ಹೆಚ್ಚಿಸಿದ್ದಾರೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ಕೋಚ್ ಆಗಿ ಕೂಡ ಯಶಸ್ವಿಯಾಗಿದ್ದಾರೆ. ಸದ್ಯ NCA ಮುಖ್ಯಸ್ಥ ದ್ರಾವಿಡ್​ರ ಒಪ್ಪಂದ ಸೆಪ್ಟೆಂಬರ್​​ಗೆ ಮುಗಿಯಲಿದೆ. ಹಾಗಾದ್ರೆ ದ್ರಾವಿಡ್​ ಮುಂದುವರೆಯಲ್ವಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ಇನ್ನು NCA ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ ನಡೆ ನೋಡಿದರೆ, ದ್ರಾವಿಡ್​ ಮುಖ್ಯ ಕೋಚ್​​ ಆಯ್ಕೆಯ ಸಂಕೇತ ಎಂದು ಹೇಳಲಾಗ್ತಿದೆ. ಆದರೆ ಪೂರ್ಣಾವಧಿಗೆ ಕೋಚ್ ಆಗುವ ಬಗ್ಗೆ ಯೋಚಿಸಿಲ್ಲ ಎಂದು ದ್ರಾವಿಡ್ ಹೇಳಿಕೆ ನೀಡಿದ್ರು.

ಐಪಿಎಲ್​ ಫ್ರಾಂಚೈಸಿಗಳೊಂದಿಗೆ ಭಾರತ ಕೋಚ್​​ಗಳ ಒಪ್ಪಂದ..?​​​
ಟೀಮ್​ ಇಂಡಿಯಾ ಕೋಚ್​​ ಆಗಿ ರವಿ ಶಾಸ್ತ್ರಿ, ಐಸಿಸಿ ಟ್ರೋಫಿ ಗೆದ್ದಿಲ್ಲ ಅನ್ನೋದು ಬಿಟ್ಟರೆ ಎಲ್ಲಾ ದಾಖಲೆಗಳನ್ನ ಬರೆದಿದ್ದಾರೆ. ಜೊತೆಗೆ ಪೇಸ್​ ಬೌಲಿಂಗ್​ ಕೂಡ ಎಂದಿಗಿಂತ ಬಲವಾಗಿಸಿದ್ದಾರೆ. ಶಾಸ್ತ್ರಿ ಮಾತ್ರವಲ್ಲ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೂಡ ನಿರ್ಗಮಿಸಲಿದ್ದಾರೆ.

blank

ಇಷ್ಟು ಕೋಚ್​ಗಳ ಮುಂದಿನ ನಡೆ ಏನಿರಬಹುದು ಎಂಬ ಚಿಂತೆ ನಿಮಗೆ ಕಾಡಹುದು. ಆದರೆ ಇವರೆಲ್ಲಾ ಸದ್ದಿಲ್ಲದೆ ವಿವಿಧ IPL ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. 2022ರ IPL​​​​​ನಲ್ಲಿ ಕೋಚ್​, ಮೆಂಟರ್​​ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಒಟ್ಟಿನಲ್ಲಿ, ಶಾಸ್ತ್ರಿ ಮತ್ತು ಇತರೆ ಸಹಾಯಕ ಕೋಚ್​ಗಳ ಮುಂಬರುವ ಬೆಳವಣಿಗೆಗಳು ಹೆಚ್ಚಿನ ಕುತೂಹಲ ಕೆರಳಿಸಿವೆ.

ಇದನ್ನೂ ಓದಿ: ಲಾರ್ಡ್ಸ್​​​ ಟೆಸ್ಟ್​ಗೂ ಮುನ್ನವೇ ಟೀಂ ಇಂಡಿಯಾಗೆ ಕಾಡ್ತಿದೆ ‘ಆ’ ಆತಂಕ..!

Source: newsfirstlive.com Source link