ಇಲಿಗಳ ರೀತಿ ಕೆಲ್ಸ ಮಾಡಬಾರದು, ಮುಖಾಮುಖಿ ಎದುರಿಸಬೇಕು -ಸತೀಶ್ ರೆಡ್ಡಿ ಸವಾಲ್

ಇಲಿಗಳ ರೀತಿ ಕೆಲ್ಸ ಮಾಡಬಾರದು, ಮುಖಾಮುಖಿ ಎದುರಿಸಬೇಕು -ಸತೀಶ್ ರೆಡ್ಡಿ ಸವಾಲ್

ಬೆಂಗಳೂರು: ಇಲಿಗಳ ರೀತಿ ಬಂದು ಕೃತ್ಯ ಎಸಗಿಸುವ ಕೆಲಸ ಮಾಡಬಾರದು, ಮುಖಾಮುಖಿ ಎದುರಿಸಬೇಕು ಅಂತಾ ಶಾಸಕ ಸತೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವಾಸದ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮತ್ತೆ ಮಾತನಾಡಿದ ಅವರು, ಯಾರೋ ಬೆದರಿಸುವ ಕೆಲಸ ಮಾಡಿದ್ದಾರೆ, ರಾಜಕೀಯವಾಗಿ ಯಾವುದೇ ವೈಷಮ್ಯ ಇಲ್ಲ. ನಿನ್ನೆ ರಾತ್ರಿ ಅಪರಿಚಿತರು ಎಂಟ್ರಿಯಾಗಿ ಕೃತ್ಯ ಎಸಗಿದ್ದಾರೆ. ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆಯಾಗಿದೆ.

ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿಯ ಫಾರ್ಚೂನರ್ ಸೇರಿ 2 ಕಾರಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಕಾರ್ ಬ್ಯಾಟರಿ ಬ್ಲಾಸ್ಟ್ ಆದಾಗ ಎಚ್ಚರ ಆಯ್ತು. ಕಾರುಗಳು ಶೇಕಡಾ 80 ರಷ್ಟು ಸುಟ್ಟು ಕರಕಲಾಗಿದೆ. ಆನಂತರ ಬೆಂಕಿ ನಂದಿಸುವ ಕೆಲಸ ಮಾಡಲಾಯ್ತು. ಆಗಲೇ ಆಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದ್ರು. ಘಟನೆ ಬಗ್ಗೆ ಗೃಹ ಸಚಿವರು ಸಿಎಂ ಎಲ್ಲರು ಮಾತನಾಡಿದ್ದಾರೆ.

ಇದನ್ನೂ ಓದಿ:ಸತೀಶ್​ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಕೇಸ್: ಕೇವಲ 3 ನಿಮಿಷದಲ್ಲಿ ಬೆಂಕಿಯಿಟ್ಟು ದುಷ್ಕರ್ಮಿಗಳು ಎಸ್ಕೇಪ್

Source: newsfirstlive.com Source link