ಮಾಗಡಿ ಪೊಲೀಸ್​​ ಅಧಿಕಾರಿ ಮೇಲೆಯೇ ಹಲ್ಲೆ ನಡೆಸಿದ ಗ್ರಾಮಸ್ಥರು; ಯಾಕೆ ಗೊತ್ತಾ?

ಮಾಗಡಿ ಪೊಲೀಸ್​​ ಅಧಿಕಾರಿ ಮೇಲೆಯೇ ಹಲ್ಲೆ ನಡೆಸಿದ ಗ್ರಾಮಸ್ಥರು; ಯಾಕೆ ಗೊತ್ತಾ?

ರಾಮನಗರ: ಮಾಗಡಿ ಪಿಎಸ್​​ಐ ಶ್ರೀಕಾಂತ್​​ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಬುಧವಾರ ಸಂಜೆ ಪಿಎಸ್​​ಐ ಶ್ರೀಕಾಂತ್​​ ಮೇಲೆ ಜೋಗಿಪಾಳ್ಯದ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎಂದು ಮಾಗಡಿ ಪೊಲೀಸ್​​ ಮೂಲಗಳು ತಿಳಿಸಿವೆ.

ಜೋಗಿಪಾಳ್ಯದ ಗ್ರಾಮದ ಆವರಣವೊಂದರಲ್ಲಿ ಜಲ್ಲಿ ಕ್ರಷರ್​​​ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರುವ ಜಲ್ಲಿ ಕ್ರಷರ್​​​ ತಡೆಯಲು ಗ್ರಾಮಸ್ಥರು ಮುಂದಾಗಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪಿಎಸ್​​​ಐ ಶ್ರೀಕಾಂತ್​​​ ಮತ್ತು ಗ್ರಾಮಸ್ಥರ ನಡುವೆ ಜಗಳ ನಡೆದಿದೆ.

ಇನ್ನು, ಪೊಲೀಸರು ಮತ್ತು ಗ್ರಾಮಸ್ಥರ ನಡುವಿನ ಜಗಳ ಮಾತಿಗೆ ಮಾತು ಬೆಳೆದು ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಪಿಎಸ್​​ಐ ಶ್ರೀಕಾಂತ್​​ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಇಲಿಗಳ ರೀತಿ ಕೆಲ್ಸ ಮಾಡಬಾರದು, ಮುಖಾಮುಖಿ ಎದುರಿಸಬೇಕು -ಸತೀಶ್ ರೆಡ್ಡಿ ಸವಾಲ್

ಇದಾದ ನಂತರ ಮತ್ತೆ ಪೊಲೀಸರ ತಂಡ ರಾತ್ರೋರಾತ್ರಿ ಗ್ರಾಮಕ್ಕೆ ನುಗ್ಗಿದೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ತಡರಾತ್ರಿ ಯಾಕೇ ಊರಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Source: newsfirstlive.com Source link