ಕ್ರಿಕೆಟ್ ದಿಗ್ಗಜ ತೆಂಡುಲ್ಕರ್​ ಜೊತೆ ಪದಕ ಗೆದ್ದ ಸಂಭ್ರಮ ಹಂಚಿಕೊಂಡ ಮೀರಾಬಾಯಿ

ಕ್ರಿಕೆಟ್ ದಿಗ್ಗಜ ತೆಂಡುಲ್ಕರ್​ ಜೊತೆ ಪದಕ ಗೆದ್ದ ಸಂಭ್ರಮ ಹಂಚಿಕೊಂಡ ಮೀರಾಬಾಯಿ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ವೇಯ್ಟ್​ ಲಿಫ್ಟರ್​​​ ಮೀರಾಬಾಯಿ ಚಾನು, ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟಿದ್ದರು. ಸದ್ಯ ಟೋಕಿಯೋ ಒಲಿಪಿಂಕ್ಸ್​​​​ ಮುಗಿದಿದ್ದು, ಪದಕ ಗೆದ್ದ ಕೊಟ್ಟವರಿಗೆ ಬಹುಮಾನಗಳ ಜೊತೆಗೆ ಶುಭಾಶಯಗಳ ಮಹಾಪುರವೇ ಹರಿದು ಬರುತ್ತಿದೆ. ಮಾಸ್ಟರ್ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಕೂಡ ಮಿರಾಬಾಯಿ ಸಾಧನೆಯನ್ನ ಹೊಗಳಿ, ಈ ಹಿಂದೆ ಟ್ವೀಟ್ ಮಾಡಿದ್ದರು. ಇದೀಗ ಮೀರಾಬಾಯಿ ಮುಂಬೈನಲ್ಲಿರೋ ಸಚಿನ್ ತೆಂಡುಲ್ಕರ್​ ನಿವಾಸಕ್ಕೆ ಭೇಟಿ ನೀಡಿದ್ರು. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗೆದ್ದ ಬೆಳ್ಳಿ ಪದಕವನ್ನ ತೋರಿಸಿ, ತಮ್ಮ ಸಂತಸವನ್ನ ಸಚಿನ್ ತೆಂಡುಲ್ಕರ್ ಜೊತೆ ಹಂಚಿಕೊಂಡಿದ್ದಾರೆ.

ಈ ಭೇಟಿ ವೇಳೆ ಸಚಿನ್, ತಮಗೆ ನೀಡಿರುವ ಸಲಹೆ ಕುರಿತು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಬೆಳಗ್ಗೆ ಸಚಿನ್ ತೆಂಡೂಲ್ಕರ್​ರನ್ನ ಭೇಟಿಯಾದೆ. ಅವರ ಸ್ಪೂರ್ತಿದಾಯಕ ಮಾತುಗಳು ಎಂದಿಗೂ ನನ್ನ ಜೊತೆ ಇರುತ್ತವೆ. ನಿಜವಾಗಿಯೂ ಅವರಿಂದ ಸ್ಫೂರ್ತಿ ಪಡೆದೆ ಎಂದು ಟ್ವಿಟರ್​ನಲ್ಲಿ ಮೀರಾಬಾಯಿ ಬರೆದುಕೊಂಡಿದ್ದಾರೆ.

Source: newsfirstlive.com Source link