ಸಿದ್ದರಾಮಯ್ಯಗೆ ಅಭಿಮಾನಿಗಳು ಸರ್ಪ್ರೈಸ್; ‘ಟಗರು ಸಿದ್ದರಾಮಯ್ಯ’ ಸಾಂಗ್ ರಿಲೀಸ್

ಸಿದ್ದರಾಮಯ್ಯಗೆ ಅಭಿಮಾನಿಗಳು ಸರ್ಪ್ರೈಸ್; ‘ಟಗರು ಸಿದ್ದರಾಮಯ್ಯ’ ಸಾಂಗ್ ರಿಲೀಸ್

ಬೆಂಗಳೂರು: ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲ್ಲ ಅಂತಾ ಎಷ್ಟೇ ಸಾರಿ ಹೇಳಿದರೂ ಅವರ ಅಭಿಮಾನಿಗಳು, ಬೆಂಬಲಿಗರು ಮಾತ್ರ ಬಿಡೋ ಚಾನ್ಸೇ ಇಲ್ಲ.

ಅದರಂತೆ ಅವರ ಅಭಿಮಾನಿಗಳು ‘ಟಗರು.. ಟಗರು.. ಸಿದ್ದರಾಮಣ್ಣ’ ಎಂಬ ಶೀರ್ಷಿಕೆಯಲ್ಲಿ ಹಾಡೊಂದನ್ನ ರಚಿಸಿ ಸಿದ್ದರಾಮಯ್ಯರ ಬಳಿಯೇ ರಿಲೀಸ್ ಮಾಡಿಸಿದ್ದಾರೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯಿರುವ ವಿಪಕ್ಷ ನಾಯಕರ ಸರ್ಕಾರಿ‌ ನಿವಾಸದಲ್ಲಿ ಈ ಹಾಡು ಬಿಡುಗಡೆಯಾಗಿದೆ.

ಇನ್ನು ಸಿದ್ದರಾಮಯ್ಯರಿಗೆ ಶುಭಾಶಯ ತಿಳಿಸಲು ರಾಜ್ಯದ ಹಲವು ಭಾಗಗಳಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಕಾಂಗ್ರೆಸ್ ಸೇರಿದದಂತೆ ಇತರ ಪಕ್ಷಗಳಿಂದಲೂ ಸಿದ್ದರಾಮಯ್ಯಗೆ ಶುಭಾಶಯಗಳನ್ನ ಕೋರಿದ್ದಾರೆ.

 

 

Source: newsfirstlive.com Source link