ಕೆ.ಎಲ್.ರಾಹುಲ್ ಫಾರ್ಮ್​​ ಮಯಾಂಕ್​ ಅಗರ್​ವಾಲ್​ಗೆ ಮುಳುವಾಯ್ತಾ..?

ಕೆ.ಎಲ್.ರಾಹುಲ್ ಫಾರ್ಮ್​​ ಮಯಾಂಕ್​ ಅಗರ್​ವಾಲ್​ಗೆ ಮುಳುವಾಯ್ತಾ..?

ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ ಪಂದ್ಯ, ಇಂದು ಲಾರ್ಡ್ಸ್​ನಲ್ಲಿ ನಡೆಯಲಿದೆ. ಕ್ರಿಕೆಟ್ ಕಾಶಿಯಲ್ಲಿ ಕಣಕ್ಕಿಳಿಯುವ ಕನಸಿನಲ್ಲಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್​ಗೆ, ಭಾರೀ ನಿರಾಸೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಮೊದಲ ಪಂದ್ಯ ಕನ್ಕಷನ್ ಕಾರಣ ಬೆಂಚ್ ಕಾದಿದ್ದ ಕನ್ನಡಿಗ ಮಯಾಂಕ್, 2ನೇ ಪಂದ್ಯಕ್ಕಾಗಿ ಭರದ ಸಿದ್ದತೆ ನಡೆಸಿದ್ದರು. ಆದ್ರೆ 2ನೇ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಆರಂಭಿಕರಾಗಿ ಮಯಾಂಕ್ ಕಣಕ್ಕಿಳಿಯುವ ಬಗ್ಗೆ ತಳ್ಳಿಹಾಕಿದ್ದಾರೆ. ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್​ ಅಲಭ್ಯದ ಕಾರಣ, ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಆಗಲಿದೆಯಾ ಎಂಬ ಪ್ರಶ್ನೆ ಎದಿತ್ತು.

ಆದ್ರೆ ಈ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿರುವ ನಾಯಕ ವಿರಾಟ್ ಕೊಹ್ಲಿ, ಮೊದಲನೇ ಟೆಸ್ಟ್ ಪಂದ್ಯದಲ್ಲಿ ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಜೋಡಿ, ಜವಾಬ್ದಾರಿಯುತ ಆಟವನ್ನಾಡಿದೆ. ಹೀಗಾಗಿ ನಮ್ಮ ತಂಡದಲ್ಲಿ ಸದ್ಯ ಬ್ಯಾಟ್ಸ್‌ಮನ್‌ಗಳ ಕೊರತೆ ಇಲ್ಲ ಎಂದಿದ್ದಾರೆ. ಆ ಮೂಲಕ ಮಯಾಂಕ್ ಸ್ಥಾನದಲ್ಲಿ ಅವಕಾಶ ಗಿಟ್ಟಿಸಿದ್ದ ಕೆ.ಎಲ್.ರಾಹುಲ್​ ಆರಂಭಿಕರಾಗಿ ಮುಂದುವರಿಯಲಿದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ.

Source: newsfirstlive.com Source link