ಊರ ತುಂಬ ಉಂಗುರದ್ದೇ ಡಂಗುರ.. ಕೊನೆಗೂ ಸತ್ಯ ಒಪ್ಪಿಕೊಂಡ ನಯನತಾರಾ

ಊರ ತುಂಬ ಉಂಗುರದ್ದೇ ಡಂಗುರ.. ಕೊನೆಗೂ ಸತ್ಯ ಒಪ್ಪಿಕೊಂಡ ನಯನತಾರಾ

ನಯನತಾರ.. ಸೌಥ್ ಸಿನಿ ದುನಿಯಾದ ಲೇಡಿ ಸೂಪರ್ ಸ್ಟಾರ್​.. ನಯನತಾರರ ಚೆಲುವಿನ ಮೇಲೆ ಹಲವು ವರ್ಷಗಳಿಂದ ಅಭಿಮಾನಿಗಳ ಒಲವಿದೆ.. ಆದ್ರೆ ಕೆಲ ದಿನಗಳಿಂದ ನಯನತಾರಾರ ನಯನ ಮನೋಹರವಾದ ಉಂಗುರುದ ಬೆರಳಿನ ಉಂಗುರದ ಮೇಲೆ ಭಾರಿ ಕುತೂಹಲವಿತ್ತು.. ಸೂಪರ್ ಸುಂದ್ರಿಯ ಸೂಪರ್ ಫೋಟೋ ನೋಡಿದಾಗಲೆಲ್ಲ ಪಡ್ಡೆ ಫ್ಯಾನ್ಸ್​​ ಜೂಮ್ ಮಾಡಿ ನೋಡಿದ್ದೋ ನೋಡಿದ್ದು.. ಆದ್ರೆ ಈ ಆ ಉಂಗುರದ ಒಡೆಯನ್ಯಾರು ಅನ್ನೋದು ಈಗ ಅಧಿಕೃತವಾಗಿದೆ..

blank

ನಯನತಾರಾ.. ಎಷ್ಟು ಅದ್ಭುತ ಸುಂದ್ರಿಯೋ ಅಷ್ಟೇ ಅತ್ಯಅದ್ಭುತ ನಟಿಯೂ ಹೌದು.. ನಯನತಾರಾರ ಸಿನಿಮಾಗಳು ಭಾಷೆಯ ಗಡಿ ಗುಡಿಯನ್ನ ಮೀರಿ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಾವೋ ಅಷ್ಟೇ ಸದ್ದುಗದ್ದಲ್ಲ ನಯನತಾರಾರ ಕಾಂಟ್ರವರ್ಸಿ ನ್ಯೂಸ್​​​ಗಳು ಮಾಡುತ್ತವೆ.. ಸೂಪರ್ ಸಿನಿಮಾದ ನಂತರ ಮತ್ತೊಮ್ಮೆ ಸ್ಯಾಂಡಲ್​​ವುಡ್​​​ಗೆ ನಯನತಾರಾ ಬಲಗಾಲಿಡಲೇ ಇಲ್ಲ.. ಕಬ್ಜ ಸಿನ್ಮಾಕ್ಕೆ ನಯನತಾರಾ ಹೀರೋಯಿನ್ ಆಗ್ತಾರೆ ಅನ್ನೋ ಸುದ್ದಿ , ಸುದ್ದಿಯಾಗಿಯೇ ಉಳಿಯಿತು.. ಅಬ್ ನಯನತಾರಾಕ ನಯಾ ಕಹಾನಿ ಏನ್ ಗೊತ್ತಾ.. ಉಂಗುರ..! ಸೌಥ್ ಸಿನಿ ದುನಿಯಾದ ತುಂಬ ನಯನತಾರಾರ ಉಂಗುರದ್ದೇ ಡಂಗುರ..

blank

ಊರ ತುಂಬ ನಯನತಾರಾ ಉಂಗುರದ್ದೇ ಡಂಗುರ
ಕೊನೆಗೂ ಸತ್ಯ ಒಪ್ಪಿಕೊಂಡ ‘ಸೂಪರ್’ ಸುಂದರಿ

ಹಲವು ದಿನಗಳಿಂದ ನಯನತಾರಾರ ಜೊತೆ ಜೊತೆಗೆ ನಯನತಾರಾ ಹಾಕಿಕೊಂಡ ಉಂಗುರ ಭಾರಿ ಸದ್ದು ಮಾಡಿತ್ತು.. ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ ದೂರಾ ದೂರ ಆದ್ಮಲೆ ನಿರ್ದೇಶಕ ವಿಘ್ನೇಶ್ ಶಿವನ್ ಕದ್ದು ಮುಚ್ಚಿ ಅಲ್ಲಿ ಇಲ್ಲಿ ಒಡಾಡುತ್ತಾ ಪ್ರೇಮ ಪಕ್ಷಿಗಳು ನಾವು ಎಂದು ಬಿಂಬಿಸುತ್ತಾ ಇದ್ದರು ಸೂಪರ್ ಸುಂದ್ರಿ..

blank

‘ನಾನುಮ್ ರೌಡಿಧಾನ್’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಮಧ್ಯೆ ಪ್ರೀತಿ ಚಿಗುರಿತ್ತು. ಈ ಚಿಗುರು ಪ್ರೀತಿ ಈಗ ಮರವಾಗಿ ಎಂಗೇಜ್ಮೆಂಟ್ ತನಕ ಬಂದು ನಿಂತಿದೆ.. ಸದ್ದು ಗದ್ದಲ್ಲ ವಿಲ್ಲದೆ ನಿಶ್ಚಿತಾರ್ಥವೂ ಆಗಿ ಈ ಮದುವೆಯ ತನಕ ಬಂದು ನಿಂತಿದೆ.. ಇದಕ್ಕೆ ಸಾಕ್ಷಿ ಉಂಗುರ , ನಯನತಾರಾ ಹಾಕಿಕೊಂಡಿರೋ ಉಂಗುರ..

blank

ಕಳೆದ ಮಾರ್ಚ್​​ನಲ್ಲಿ ವಿಜ್ಞೇಷ್ ಮತ್ತು ನಯನತಾರಾ ನಿಶ್ಚಿತಾರ್ಥವಾಗಿದೆ.. ಈ ಬಗ್ಗೆ ನಯನತಾರ ಟಿವಿ ಶೋ ಒಂದರ ಸಂದರ್ಶನದಲ್ಲಿ ಬಾಯಿಬಿಟ್ಟಿದ್ದಾರೆ.. ವಿಘ್ನೇಶ್ ಶಿವನ್ ಅವರಲ್ಲಿ ನೀವು ಲೈಕ್ ಮಾಡುವ ಅಂಶಗಳೇನು ಎಂದು ನಿರೂಪಕಿ ಕೇಳಿದಾಗ, ”ಏನು ಇಷ್ಟ ಆಗಿದೆ ಅನ್ನೋದಕ್ಕಿಂತ ಎಲ್ಲವೂ ಇಷ್ಟವಾಗಿದೆ” ಎಂದು ನಯನತಾರಾ ಹೇಳಿದ್ದಾರೆ. ಈ ಮೂಲಕ ತಮಗೆ ನಿಶ್ಚಿತಾರ್ಥ ಆಗಿರುವುದನ್ನು ನಯನತಾರಾ ಹೌದು ಎಂದು ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳಿಗೆ ನಯನತಾರಾ ಉಂಗುರದ ಮೇಲಿದ್ದ ಕುತೂಹಲಕ್ಕೆ ನಿರೀಕ್ಷೆಯ ಉತ್ತರ ಸಿಕ್ಕಂತೆ ಆಗಿದೆ..

Source: newsfirstlive.com Source link