ಸೆಲೆಕ್ಷನ್ ಕಮಿಟಿ-ಟೀಂ ಮ್ಯಾನೇಜ್​ಮೆಂಟ್ ಗ್ಯಾಪ್ ಫಿಲ್​​ಗೆ BCCI ಹೊಸ ಸೂತ್ರ

ಸೆಲೆಕ್ಷನ್ ಕಮಿಟಿ-ಟೀಂ ಮ್ಯಾನೇಜ್​ಮೆಂಟ್ ಗ್ಯಾಪ್ ಫಿಲ್​​ಗೆ BCCI ಹೊಸ ಸೂತ್ರ

ಬಿಸಿಸಿಐ ಮನೆಯೊಂದು ಮೂರು ಬಾಗಿಲಾಗಿದ್ಯಾ..? ಈ ಒಂದು ಚರ್ಚೆ, ಕಳೆದ್ಮೂರು ವರ್ಷಗಳಿಂದ ನಡೀತಿದೆ. ಬಿಸಿಸಿಐ, ಆಯ್ಕೆಗಾರರು, ಆಟಗಾರರ ನಡುವಿನ ಹೊಂದಾಣಿಕೆ, ಸಂವಹದ ಕೊರತೆ ಭಾರೀ ವಿವಾದದ ತಿರುವನ್ನೇ ಪಡೆದಿತ್ತು. ಆದ್ರೀಗ ಇದೆಲ್ಲದಕ್ಕೂ ಫುಲ್​​ಸ್ಟಾಪ್ ಇಡೋಕೆ ಬಿಸಿಸಿಐ, ಬ್ಲೂಪ್ರಿಂಟ್ ರೆಡಿ ಮಾಡ್ತಿದೆ.

ಕಳೆದ್ಮೂರು ವರ್ಷಗಳಿಂದ ಬಿಸಿಸಿಐ, ಟೀಮ್ ಮ್ಯಾನೇಜ್​​ಮೆಂಟ್, ಸಲೆಕ್ಷನ್​ ಕಮಿಟಿ ಪದೇ ಪದೇ ಚರ್ಚೆಯ ಕೇಂದ್ರ ಬಿಂದುವಾಗ್ತಿವೆ. ಈ ಮೂವರ ನಡುವೆ ಭಿನ್ನಾಭಿಪ್ರಾಯ ಇದೆಯಾ..? ಎಂಬ ಅನುಮಾನಕ್ಕೂ ನಾಂದಿ ಹಾಡಿತ್ತು. ಅಷ್ಟೇ ಯಾಕೆ ಸ್ವತಃ ಬಿಸಿಸಿಐ, ಸೆಲೆಕ್ಷನ್​ ಕಮಿಟಿ V/S ಕೋಚ್ ರವಿ ಶಾಸ್ತ್ರಿ, ವಿರಾಟ್​ ಕೊಹ್ಲಿ ಎಂಬಂತೆ ಮಾರ್ಪಟ್ಟಿದೆಯಾ ಟೀಮ್ ಇಂಡಿಯಾ..? ಎಂಬ ವಿವಾದದ ತಿರುವನ್ನೂ ಪಡೆದಿತ್ತು. ಆದ್ರೀಗ ಇಂಥಹ ಗೊಂದಲಗಳಿಗೆ ಬ್ರೇಕ್​ ಹಾಕೋಕೆ ಬಿಸಿಸಿಐ ಪ್ಲಾನ್ ಮಾಡ್ತಿದೆ.

blank

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಬಿಗ್ ಡೆವಲಪ್ಮೆಂಟ್! ವಿಶ್ವಕಪ್​​ ಬಳಿಕ ವಿರಾಟ್​ ಸೇನೆಗೆ ಹೊಸ ‘ಗುರು’!?

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ ಇಂಜುರಿ ವಿಚಾರದಲ್ಲಿ ಎದ್ದಿದ್ದ ಭಿನ್ನಾಭಿಪ್ರಾಯದ ಅನುಮಾನ. ಸದ್ಯ ಶುರುವಾಗಿರುವ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಮರುಜೀವ ಪಡೆದಿತ್ತು. ಗಿಲ್ ಇಂಜುರಿ ರಿಪ್ಲೇಸ್​ಮೆಂಟ್​​ಗೆ ಟೀಮ್ ಮ್ಯಾನೇಜ್​​ಮೆಂಟ್, ಸೆಲೆಕ್ಷನ್ ಕಮಿಟಿಗೆ ಮನವಿ ಮಾಡಿತ್ತು. ಆದ್ರೆ ಸೆಲೆಕ್ಷನ್ ಕಮಿಟಿ ಚೇರ್​ಮನ್ ಚೇತನ್ ಶರ್ಮಾ ಸರಾಸಗಟಾಗಿ ತಿರಸ್ಕರಿಸಿದ್ದರು. ಇದು ವಿವಾದದ ರೂಪವೇ ಪಡಿದಿತ್ತು. ಅಷ್ಟೇ ಅಲ್ಲ, ಸಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್​ಮೆಂಟ್ ನಡುವೆ ಸಂವಹದ ಕೊರತೆ ಇದೆಯಾ ಎಂಬ ಅನುಮಾನವನ್ನ ಮತ್ತಷ್ಟು ಬಲಪಡಿಸಿತ್ತು. ಆದ್ರೆ, ಈ ವಿವಾದದ ಬಳಿಕ ಎಚ್ಚೆತ್ತಿರುವ ಬಿಸಿಸಿಐ, ಸಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್​​ಮೆಂಟ್ ಸಂವಹನ ವೃದ್ಧಿಗೆ ಮುಂದಾಗಿದೆ.

BCCI AGM: Chetan Sharma set to become new chief selector, two other former pacers join panel

ಚೇತನ್ ಶರ್ಮಾ ನೇತೃತ್ವದ ಸೆಲೆಕ್ಷನ್ ಕಮಿಟಿ ಜಾರಿಗೆ ಬಂದು, ಒಂದು ವರ್ಷ ಕಳೆಯುತ್ತಾ ಬರ್ತಿದೆ. ಆದ್ರೆ ಟೀಮ್ ಮ್ತಾನೇಜ್​ಮೆಂಟ್, ಸೆಲೆಕ್ಷನ್ ಕಮಿಟಿ ನಡುವೆ ಹೊಂದಾಣಿಕೆ ಸಾಧಿಸಲು ಸಾಧ್ಯವೇ ಆಗಿಲ್ಲ. ಇದಕ್ಕೆ ಮೂಲ ಕಾರಣ ಮಿಸ್ ಕಮ್ಯೂನಿಕೇಷನ್​.. ಇದೇ ಮಿಸ್​ ಕಮ್ಯುನಿಕೇಷನ್​​ ಸಮಸ್ಯೆಯ ಜೊತೆಗೆ ಆಟಗಾರರನ್ನ ಗೊಂದಲಕ್ಕೆ ದೂಡುವಂತೆ ಮಾಡ್ತಿದೆ. ಪ್ರಮುಖವಾಗಿ ಆಟಗಾರರ ಆಯ್ಕೆ, ನಿರ್ವಹಣೆ, ಇಂಜುರಿ ಬಗ್ಗೆ ಅಸ್ಪಷ್ಟತೆ ಇವೆಲ್ಲಕ್ಕೂ ಸಂವಹನದ ಕೊರತೆಯ ಸಮಸ್ಯೆಯೇ ಕಾರಣವಾಗ್ತಿದೆ. ಇದಕ್ಕಾಗಿ ಮ್ಯಾನೇಜ್​ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ನಡುವೆ ಸಂವಹದ ಕೊರತೆ ಕಾಡದಂತೆ ಹೊಸ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಇದಕ್ಕಾಗಿಯೇ ಸೆಲೆಕ್ಷನ್ ಕಮಿಟಿ ಚೇರ್​ಮನ್ ಚೇತನ್ ಶರ್ಮಾ ಜೊತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತ್ಯೇಕ ಸಭೆಯನ್ನೇ ನಡೆಸ್ತಿದ್ದಾರೆ ಕೂಡ.

ಒಟ್ನಲ್ಲಿ ಪದೇ ಪದೇ ಸಂವಹನದ ಕೊರತೆಯಿಂದ ವಿವಾದದ ಸ್ವರೂಪ ಪಡೀತಿದ್ದ ಎಲ್ಲದಕ್ಕೂ ಬಿಸಿಸಿಐ, ಬ್ರೇಕ್​ ಹಾಕಲು ಮುಂದಡಿ ಇಟ್ಟಿದ್ದು, ಇನ್ನಾದರೂ ಟೀಮ್ ಇಂಡಿಯಾದಲ್ಲಿ ಉಂಟಾಗುತ್ತಿದ್ದ ಗೊಂದಲಗಳಿಗೆ ಮುಕ್ತಿ ಸಿಗುತ್ತಾ ಕಾದುನೋಡಬೇಕಿದೆ.

ಇದನ್ನೂ ಓದಿ: ಕ್ರಿಕೆಟ್ ದಿಗ್ಗಜ ತೆಂಡುಲ್ಕರ್​ ಜೊತೆ ಪದಕ ಗೆದ್ದ ಸಂಭ್ರಮ ಹಂಚಿಕೊಂಡ ಮೀರಾಬಾಯಿ

Source: newsfirstlive.com Source link