ಶ್ರೇಯಸ್ ಅಯ್ಯರ್ ಫುಲ್ ಫಿಟ್- ಐಪಿಎಲ್, T20 ವಿಶ್ವಕಪ್ ಆಡಲು ಮುಂಬೈಕರ್ ರೆಡಿ..!

ಶ್ರೇಯಸ್ ಅಯ್ಯರ್ ಫುಲ್ ಫಿಟ್- ಐಪಿಎಲ್, T20 ವಿಶ್ವಕಪ್ ಆಡಲು ಮುಂಬೈಕರ್ ರೆಡಿ..!

ಕಳೆದ ನಾಲ್ಕು ತಿಂಗಳಿಂದ ಕ್ರಿಕೆಟ್ ಚಟುವಟಿಕೆಯಿಂದ ದೂರ ಉಳಿದಿದ್ದ ಟೀಮ್ ಇಂಡಿಯಾ ಮಿಡಲ್ ಆರ್ಡರ್ ಬ್ಯಾಟ್ಸ್​ಮನ್ ಶ್ರೇಯಸ್​ ಅಯ್ಯರ್, ಈಗ ಸಂಪೂರ್ಣ ಗುಣಮುಖರಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭುಜದ ಇಂಜುರಿಗೆ ತುತ್ತಾಗಿ ವಿಶ್ರಾಂತಿಯಲ್ಲಿದ್ದ ಶ್ರೇಯಸ್​, ಈಗ ಸಂಪೂರ್ಣ ಫಿಟ್ ಆಗಿದ್ದಾರೆ. ಇತ್ತಿಚಿಗಷ್ಟೇ ಶ್ರೇಯಸ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಫಿಟ್​ನೆಸ್ ಸಾಭೀತು ಪಡೆಸಿದ್ದಾರೆ.

ಸದ್ಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮೆಡಿಕಲ್ ಟೀಮ್, ಮುಂಬೈಕರ್​ಗೆ ಗ್ರೀನ್​​ ಸಿಗ್ನಲ್ ನೀಡಿದೆ. ಇದರಿಂದಾಗಿ ಮುಂದಿನ ತಿಂಗಳು ಯುಎಇನಲ್ಲಿ ನಡೆಯಲಿರುವ 2ನೇ ಹಂತದ ಐಪಿಎಲ್‌ನಲ್ಲಿ ಭಾಗಿಯಾಗೋದು ಕನ್ಫರ್ಮ್ ಆಗಿದೆ. ಅಯ್ಯರ್ ಕ್ರಿಕೆಟ್‌ಗೆ ಮರಳಲು ಅವಕಾಶ ದೊರೆತಿರುವ ಕಾರಣದಿಂದಾಗಿ, 2ನೇ ಹಂತದ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಬ್ಯಾಟ್​ ಬೀಸೋಕೆ ರೆಡಿಯಾಗಿದ್ದಾರೆ.

Source: newsfirstlive.com Source link